Breaking News

ದರ್ಶನ್‌ಗೆ ಶಾಕ್‌ ಮೇಲೆ ಶಾಕ್‌ – ಪ್ರದೋಷ್‌ ಮಾಫಿ ಸಾಕ್ಷಿ ದಾಖಲು ಮುಂದೂಡಲು ಸಲ್ಲಿಸಿದ್ದ ಅರ್ಜಿ ವಜಾ

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್‌  ಮಾಫಿ ಸಾಕ್ಷಿ ದಾಖಲು ಮಾಡುವುದನ್ನು ಮುಂದೂಡಲು ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ  ವಜಾಗೊಳಿಸಿದೆ.

ಹೈಕೋರ್ಟ್‌  ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಮಯ ಬೇಕಿದೆ. ಅದಕ್ಕಾಗಿ ಹೇಳಿಕೆ ದಾಖಲು ಮಾಡುವುದನ್ನು ಮುಂದೂಡುವಂತೆ ದರ್ಶನ್‌ ಪರ ವಕೀಲರು ಸೆಷನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಪ್ರದೋಷ್‌ ಮಾಫಿ ಸಾಕ್ಷಿ  ದಾಖಲಿಸಲು ಇಂದು  ಕೋರ್ಟ್‌ ದಿನಾಂಕ ನಿಗದಿ ಮಾಡಿತ್ತು. ಪ್ರದೂಷ್ ಮಾಫಿ ಸಾಕ್ಷಿ ತಡೆಯಲು ದರ್ಶನ್  ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಹೈಕೋರ್ಟ್‌ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸ್ವಲ್ಪ ಸಮಯ ಬೇಕಿದೆ. ಪ್ರಾಸಿಕ್ಯೂಷನ್ ಬೇರೆ ಸಾಕ್ಷಿಗಳ ಹೇಳಿಕೆ ದಾಖಲಿಸಲಿ. ಪ್ರದೋಷ್ ಹೇಳಿಕೆ ಮಾತ್ರ ಮುಂದೂಡಬೇಕು. ಪ್ರದೋಷ್ ಹೇಳಿಕೆ ದಾಖಲಿಸಲು ಪ್ರಾಸಿಕ್ಯೂಷನ್ ಅವಸರ ಮಾಡುತ್ತಿದೆ. ಸುಪ್ರೀಂ ಕೋರ್ಟ್‌ಗೆ ಹೋಗಲು ಸ್ವಲ್ಪ ಸಮಯ ಬೇಕಿದೆ. ಹೈಕೋರ್ಟ್ ಸೂಚಿಸಿರುವ 7 ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲು ಪ್ರಕ್ರಿಯೆ ಮಾಡಲಿ. ಆದರೆ, ಪ್ರದೋಷ್ ಹೇಳಿಕೆಯನ್ನ 7ನೇ ಸಾಕ್ಷಿಯಾಗಿ ತೆಗೆದುಕೊಳ್ಳಲಿ. ಸುಪ್ರೀಂಗೆ ಅರ್ಜಿ ಸಲ್ಲಿಕೆಗೆ ಕನಿಷ್ಠ 10 ದಿನಗಳ ಸಮಯ ಬೇಕಿದೆ. ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಬೇಕೆಂದು ಮನವಿ ಮಾಡಿದ್ದರು.

ಸರ್ಕಾರಿ ಪರ ವಕೀಲ ಸಚಿನ್ ವಾದ ಮಂಡಿಸಿ, 24ರಂದೇ ಪ್ರದೋಷ್‌ಗೆ ಸಮನ್ಸ್ ನೀಡಲಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿ ವಾದ ಬಳಿಕವೇ ಸಮನ್ಸ್ ಜಾರಿ ಮಾಡಲಾಗಿದೆ. ಇಲ್ಲಿ ಹೊಸದಾದ ಯಾವುದೇ ಮಾಹಿತಿ, ಸಂಗತಿಗಳಿಲ್ಲ. ಈ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಮನವಿ ಮಾಡಿದ್ದರು.


Spread the love

About Laxminews 24x7

Check Also

ಲವ್ವರ್‌ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರ

Spread the loveಚಂಡೀಗಢ: ನಿನಗಿನ್ನೂ 18 ವರ್ಷ. ನಿನ್ನ ಲವ್ವರ್‌ನ ಮದುವೆ ಆಗೋಕೆ 21 ವಯಸ್ಸಾಗುವವರೆಗೆ ಕಾಯಿ ಎಂದು ಬುದ್ದಿಮಾತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ