ಬೆಳಗಾವಿ: ಶಾಸಕ ಸತೀಶ್ ಜಾರಕಿಹೊಳಿ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಶುಕ್ರವಾರ ಭೇಟಿ ಮಾಡಿ, ಶುಭಾಶಯ ಕೋರಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಆಗಮಿಸಿ ಕೆಲವು ಹೊತ್ತಿನ ಬಳಿಕ ಬಂದಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ , ಮಾಜಿ ಶಾಸಕ ರಾಜು ಕಾಗೆ, ರಾಜು ಸೇಠ್ ಹೂಗುಚ್ಛ ನೀಡಿದರು. ಜಿಲ್ಲೆಯ ಕಾಂಗ್ರೆಸ್ ಸಾರಥಿ ದೊರೆತ ನಂತರ ಪಕ್ಷ ಸಂಘಟನೆ ಭಿನ್ನಾಭಿಪ್ರಾಯವನ್ನು ಮರೆತು. ಒಗ್ಗಟ್ಟಿನ ಪ್ರದರ್ಶನ ನಡೆಯುತ್ತಿದೆ
ಜಿಲ್ಲೆಯ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ ಎನ್ನುವುದು ಪದೇ ಪದೇ ಕೇಳಿ ಬರುತ್ತಿರುವ ಬೆನ್ನಲೆ ಈಗಾ ನಾಯಕರು ಭೇಟಿ ಮಾಡಿ ಶುಭ ಕೋರಿರುವುದು ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ ವೈರಿಗಳು ಎಂದೇ ಗುರುತಿಸಿಕೊಂಡವರು ಸಹ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ಹೊಸ ಬೆಳವಣಿಗೆಗೆ ಕಾರಣವಾಗಿದೆ.