ಬೆಂಗಳೂರು: ಬರದ ಸಂಕಷ್ಟದಲ್ಲಿ ಇರುವ ರೈತರಿಗೆ ಕೊನೆಗೂ ಇಂದು (ನ.5) ರಾಜ್ಯ ಸರ್ಕಾರ (State Govt) ಪರಿಹಾರ ವಿತರಣೆ ಮಾಡಲಿದೆ.
ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರಿಂದು ಮಧ್ಯಂತರ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಿದ್ದು, ಮಧ್ಯಾಹ್ನ 12:30ಕ್ಕೆ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಸರ್ಕಾರ ಮಧ್ಯಂತರ ಬೆಳೆ ಪರಿಹಾರದ ಹಣ 2500 ರೂ. ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಇದೀಗ ಆ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಮುಹೂರ್ತ ನಿಗದಿಯಾಗಿದ್ದು, ಆ ಹಣ ಇದೀಗ ರೈತರ ಖಾತೆಗೆ ಜಮೆಯಾಗಲಿದೆ.
Laxmi News 24×7