Breaking News

ಪಕ್ಷದ ಬಗ್ಗೆ ಮಾತಾಡಿದ್ದು ನಿಜ, ವ್ಯಕ್ತಿಗಳ ಕೊಲೆ ಮಾಡ್ತೀನಿ ಅನ್ನೋದು ಸುಳ್ಳು: ಛಲವಾದಿ ಸ್ಪಷ್ಟನೆ

Spread the love

ಬೆಂಗಳೂರು: ಪಕ್ಷದ ಬಗ್ಗೆ ಮಾತಾಡಿದ್ದು ನಿಜ, ವ್ಯಕ್ತಿಗಳ ಕೊಲೆ ಮಾಡ್ತೀನಿ ಅನ್ನೋದು ಸುಳ್ಳು ಎಂದಿರುವ ವಿಧಾನ ಪರಿಷತ್ ವಿಪಕ್ಷ ‌ನಾಯಕ ಛಲವಾದಿ ನಾರಾಯಣಸ್ವಾಮಿ , ಕೋಲಾರದಲ್ಲಿ ನೀಡಿದ್ದ ಹೇಳಿಕೆ ಕುರಿತು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ SIR ವಿಷಯದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗೋರ ಜೊತೆ ಇವರು ಪ್ರತಿಭಟನೆ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಟ ಮಾಡುತ್ತಿದ್ದೇವೆ ಎಂದರು.

ಕೋಲಾರದಲ್ಲಿ ನಾನು ನಿನ್ನೆ‌ ಒಂದು ಹೇಳಿಕೆ ನೀಡಿದ್ದೆ. ಕಾಂಗ್ರೆಸ್ ಪಾರ್ಟಿಯನ್ನ ಬಿಜೆಪಿ ಕಾರ್ಯಕರ್ತರು ತುಂಡು ತುಂಡಾಗಿ ಮಾಡ್ತಾರೆ ಅಂತ. ಅರಾಜಕತೆ ಸೃಷ್ಟಿ ಮಾಡಿದ್ರೆ ಕಾಂಗ್ರೆಸ್ ಅನ್ನು ಕಾರ್ಯಕರ್ತರು ತುಂಡು ತುಂಡಾಗಿ ಕತ್ತರಿಸಿ ಹಾಕ್ತಾರೆ ಅಂತ ಹೇಳಿದ್ದೆ. ಇದನ್ನ ಕಾಂಗ್ರೆಸ್‌ನವರು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಹೇಳಿರುವ ಹೇಳಿಕೆ ಕುರಿತು ನಿನ್ನೆ ‌ಪ್ರತಿಭಟನೆ ಮಾಡಿ ಪೊಲೀಸ್‌ಗೆ ದೂರು ಕೊಟ್ಟಿದ್ದಾರೆ. ಕಾಂಗ್ರೆಸ್ ಅವರು ಅಮ್ಮ ಅಪ್ಪನ ಬಗ್ಗೆ ಮಾತಾಡ್ತಾರೆ‌. ಪ್ರಧಾನಿ ಬಗ್ಗೆ ಮಾತಾಡ್ತಾರೆ‌. ಅವರು ಮಾಡೋದು ಸಂವಿಧಾನ ವಿರೋಧ. ನನ್ನ ಹೇಳಿಕೆಯಲ್ಲಿ ಏನು ತಪ್ಪಿದೆ. ನಿಜಲಿಂಗಪ್ಪ, ದೇವರಾಜ್ ಅರಸ್, ಬಂಗಾರಪ್ಪ, ಗುಂಡೂರಾವ್ ಅವರ ಕಾಲದಲ್ಲಿ ಕಾಂಗ್ರೆಸ್ ತುಂಡು ಆಗಿಲ್ಲವಾ? ಡಿಕೆಶಿ ಸರ್ಕಾರ ತುಂಡು ಆಗೋಕೆ ಪ್ರಾರಂಭ ಆಗಿದೆ‌. ಸಿದ್ದರಾಮಯ್ಯ ಅವರನ್ನು ಏನು ಮಾಡೋಕೆ ಹೊರಟಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಚೇಳು ಇದ್ದ ಹಾಗೆ ಸೇವೆ ಮಾಡೋರನ್ನ ಸಾಯಿಸುತ್ತದೆ ಅಂತ ಬಂಗಾರಪ್ಪ ಹೇಳಿದ್ದರು. ದೇವರಾಜ್ ಅರಸ್ ಅವರ ಗತಿ ಏನಾಯ್ತು. ವೀರೇಂದ್ರ ಪಾಟೀಲ್, ಬಂಗಾರಪ್ಪ ನಾಶ ಆದರು. ಯಾರು ಉಳಿದಿಲ್ಲ. ಈಗ ಸಿದ್ದರಾಮಯ್ಯ ಅವರ ಸರದಿ. ಅಧಿಕಾರ ಮಾಡಿ ಹೋದ ಮೇಲೆ ಪಳೆಯುಳಿಕೆ ಉಳಿಬಾರದು ಅಂತ ಸಂಹಾರ ಮಾಡೋಕೆ ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

‌ಕಂಬಿ ಎಣಿಸೋಕೆ ನಾನು ರೆಡಿ ಆಗಿದ್ದೇನೆ. ಎಲ್ಲಿಗೆ ಬರಬೇಕು ಪ್ರಿಯಾಂಕ್ ‌ಖರ್ಗೆ ಹೇಳಲಿ. ಮೊದಲು ನನ್ನ ಹೇಳಿಕೆ ವಿಡಿಯೋ ನೋಡಿ. ಅದರಲ್ಲಿ ಪಕ್ಷದ ಬಗ್ಗೆ ಹೇಳಿದ್ದೇನೆ. ತೆಲಂಗಾಣ ನಲ್ಲಬಾಬು ಕೇಸ್‌ನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತಾಡಿದ್ದಕ್ಕೆ FIR ಹಾಕೋಕೆ ಆಗಲ್ಲ ಅಂತ ಕೋರ್ಟ್ ಹೇಳಿದೆ ಎಂದು ತಿರುಗೇಟು ಕೊಟ್ಟರು.

ಕಮೀಷನರ್, ಡಿಜಿ-ಐಜಿ ಅವರಿಗೆ ಹೇಳ್ತೀನಿ ವಿಡಿಯೋ ನೋಡಿ. ಪಕ್ಷದ ಬಗ್ಗೆ ಮಾತಾಡಿದ್ದು ನಿಜ. ವ್ಯಕ್ತಿಗಳ ಕೊಲೆ ಮಾಡ್ತೀನಿ ಅನ್ನೋದು ಸುಳ್ಳು. ಪ್ರಿಯಾಂಕ್‌ ಖರ್ಗೆ ಅವರೇ ಒಳ್ಳೆ ಇಲಾಖೆ ಸಿಕ್ಕಿದೆ ಅದರಲ್ಲಿ ಕೆಲಸ ಮಾಡಿ. RSS ಅಂತ ಯಾಕೆ ದಿನಾ ಬಡಿದುಕೊಳ್ತೀರಾ‌. ಯಾವುದಾದರೂ ಮಾಹಿತಿ ಇದ್ದರೆ ಬಿಡುಗಡೆ ಮಾಡಿ. ನಿಮ್ಮ ಹಣೆಬರಹ ಏನು ಮಾಡೋಕೆ ಆಗೊಲ್ಲ. ಪ್ರಜ್ಞೆಯಿಂದ ನಾನು ಹೇಳಿಕೆ ಕೊಟ್ಟಿದ್ದೇನೆ. ಇಷ್ಟು ಮೀರಿ ಗೂಂಡಾ ವರ್ತನೆ ಮಾಡ್ತೀ‌ನಿ ಅಂದರೆ.. ಅರೆಸ್ಟ್ ಮಾಡ್ತೀನಿ ಅಂದರೆ ವೆಲ್‌ಕಮ್.. ವೆಲ್ ಕಮ್ ಅಂತ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.


Spread the love

About Laxminews 24x7

Check Also

22 ವರ್ಷ ಹಳೆಯ NASA ಉಪಗ್ರಹ ಭೂಮಿಗೆ ವಾಪಸ್- ಬೆಂಗಳೂರಿನ ಮೇಲೂ ಬೀಳಲಿದೆಯೇ ಅವಶೇಷ?

Spread the love ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ