Breaking News

ತಮಿಳುನಾಡಿಗೆ ನಿರಂತರವಾಗಿ ನೀರು – ಮತ್ತೆ 100 ಅಡಿಗೆ ಕುಸಿದ ಕೆಆರ್‌ಎಸ್

Spread the love

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ  ತಾಲೂಕಿನ ಕೆಆರ್‌ಎಸ್ (KRS) ಜಲಾಶಯದ ನೀರಿನ ಮಟ್ಟ ಮತ್ತೆ 100 ಅಡಿಗೆ ಕುಸಿದಿದೆ.

ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ವಾರದ ಹಿಂದೆ 104 ಅಡಿ ಇದ್ದ ಜಲಾಶಯದ ನೀರಿನ ಮಟ್ಟ, ಇದೀಗ ಮತ್ತೊಮ್ಮೆ ನೂರು ಅಡಿಗೆ ಕುಸಿದಿದೆ.

ಸದ್ಯ ಜಲಾಶಯಕ್ಕೆ ಕೇವಲ 548 ಕ್ಯೂಸೆಕ್ ಮಾತ್ರ ಒಳಹರಿವು ಇದ್ದು, 7,871 ಕ್ಯೂಸೆಕ್ ಹೊರಹರಿವು ಇದೆ. ಇದರಿಂದ ಸದ್ಯ ಜಲಾಶಯದಲ್ಲಿ 100.12 ಅಡಿ ನೀರಿನ ಮಟ್ಟವಿದ್ದು, ಒಟ್ಟು 22.904 ಟಿಎಂಸಿ ನೀರು ಸಂಗ್ರಹವಾಗಿದೆ.


Spread the love

About Laxminews 24x7

Check Also

22 ವರ್ಷ ಹಳೆಯ NASA ಉಪಗ್ರಹ ಭೂಮಿಗೆ ವಾಪಸ್- ಬೆಂಗಳೂರಿನ ಮೇಲೂ ಬೀಳಲಿದೆಯೇ ಅವಶೇಷ?

Spread the love ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ