Breaking News

ಅನಧಿಕೃತವಾಗಿ ಸಂಗ್ರಹಿಸಿ ಲಾರಿ ಮೂಲಕ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ರಬಕವಿಯಲ್ಲಿ ವಶಪಡಿಸಿಕೊಂಡಿದ್ದಾರೆ

Spread the love

ರಬಕವಿ -ಪಡಿತರ ದಾಸ್ತಾನನ್ನು ಅನಧಿಕೃತವಾಗಿ ಸಂಗ್ರಹಿಸಿ ಲಾರಿ ಮೂಲಕ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಬಾಗಲಕೋಟ ರಬಕವಿ-ಬನಹಟ್ಟಿ ತಾಲ್ಲೂಕಿನ ರಬಕವಿಯಲ್ಲಿ ವಶಪಡಿಸಿಕೊಂಡಿದ್ದಾರೆ.ರಬಕವಿ ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೋಂಡ ನೇತೃತ್ವದಲ್ಲಿ ದಾಳಿ ನಡೆಸಿ ಲಾರಿ ವಶಕ್ಕೆ ಪಡೆಯಲಾಗಿದೆ.
ಹೌದು ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದು ಜನ್ರು ಪಡಿತರ ಧಾನ್ಯ ಸಿಗದೆ ಪರದಾಡುವಂತಾಗಿದೆ .ಆದ್ರೆ.ರಬಕವಿ ಬನಹಟ್ಟಿಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯ ಸಂಗ್ರಹಿಸಿ ರಬಕವಿಯಿಂದ ಮಹಾರಾಷ್ಟ್ರ ಕ್ಕೆ ಸಾಗಾಟ ಮಾಡುವ ವೇಳೆ ದಾಳಿ ಮಾಡಿ ಲಾರಿ ವಶಕ್ಕೆ ಪಡೆದುಕೊಂಡು ಲಾರಿ ಚಾಲಕ ಹಾಗೂ ಕ್ಲೀನರನ್ನು ತೇರದಾಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ಲಾರಿಯಲ್ಲಿದ 50 ಕೆಜಿಯ 257 ಚೀಲದಲ್ಲಿ 2, ಲಕ್ಷ ರೂ. ಮೊತ್ತದ ಅಕ್ಕಿ, 50 ಕೆಜಿಯ 26 ಚೀಲದ 27, 300 ರೂ ಮೊತ್ತದ ಪಡಿತರ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತೇರದಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗಾಗಿ ಅಕ್ರಮ ಪಡಿತರ ಧಾನ್ಯ ಸಂಗ್ರಹಿಸುವ ಮೇಲೆ ಹೆಚ್ಚಿನ ತನಿಖೆ ನಡೆಯುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ