Breaking News

ಯಲ್ಲಮ್ಮ ದೇವಿಗೆ ಸರ್ಪದೋಷ: ವದಂತಿಗೆ ತೆರೆ ಎಳೆದ ದೇವಸ್ಥಾನದ ಪ್ರಾಧಿಕಾರ

Spread the love

ಸವದತ್ತಿ ಯಲ್ಲಮ್ಮಗೆ ಸರ್ಪ ದೋಷ ಎಂಬ ವದಂತಿ ಹಬ್ಬಿರುವ ಹಿನ್ನಲೆಯಲ್ಲಿ ಯಾದಗಿರಿ ನಗರದ ಹೊರ ಭಾಗದ ಭೀಮಾನದಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಮಂಗಳವಾರ ಪೂಜೆ ಸಲ್ಲಿಸಲು ಮುಗಿಬಿದ್ದ ಘಟನೆ ನಡೆದಿದೆ.

ಯಲ್ಲಮ್ಮನ ಪಾದುಕೆಯನ್ನು ಸರ್ಪ ನುಂಗಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಯಾದಗಿರಿಯ ಭೀಮಾನದಿ ತೀರದಲ್ಲಿ ಸಾವಿರಾರು ಮಹಿಳೆಯರು ಜಮಾವಣೆಗೊಂಡು ಪೂಜೆ ಸಲ್ಲಿಸುತ್ತಿದ್ದಾರೆ.

ಮಹಿಳೆಯರು ತಮ್ಮ ಕೊರಳಲ್ಲಿರುವ ಮುತ್ತು, ಮಾಂಗಲ್ಯ ತೆಗೆದು, ಕೊರಳಿನ ಪಾದುಕೆ ವಿಸರ್ಜಿಸಿ ಹೊಸ ಪಾದುಕೆ ಧರಿಸಿದ್ದಾರೆ. ನಾನಾ ರೀತಿಯ ವಸ್ತುಗಳನ್ನ ಹಾಕಿದ್ದಕ್ಕೆ ನದಿ ಕಲುಷಿತವಾಗಿದೆ‌‌. ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಇದೀಗ ಸರ್ಪದೋಷ ಸುದ್ದಿ ವದಂತಿಗೆ ತೆರೆ ಎಳೆದಿದೆ. ಇದೆಲ್ಲಾ ಸಂಪೂರ್ಣ ಸುಳ್ಳು ಸುದ್ದಿ ಎಂದು ವದಂತಿಯನ್ನ ತಳ್ಳಿ ಹಾಕಿದೆ.

ಯಲ್ಲಮ್ಮಗೆ ಸರ್ಪ ದೋಷ ವದಂತಿ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರೆ ಪ್ರತಿಕ್ರಿಯಿಸಿದ್ದು, ‘ಇದೆಲ್ಲಾ ಸಂಪೂರ್ಣ ಸುಳ್ಳು ಸುದ್ದಿ. ಈ ರೀತಿ ಏನೂ ಆಗುತ್ತಿಲ್ಲ, ಲಕ್ಷಾಂತರ ಭಕ್ತರು ಬರ್ತಿದ್ದಾರೆ. ಯಾದಗಿರಿಯಲ್ಲಿ ಮಾಡುತ್ತಿರುವುದು ಸುಳ್ಳು ಸುದ್ದಿ. ಭಕ್ತಿ, ಶ್ರದ್ಧೆಯಿಂದ ಇಲ್ಲಿಗೆ ಬನ್ನಿ. ಭೀಮಾ ತೀರದಲ್ಲಿ ನಡೆಯುತ್ತಿರುವುದು ಸುಳ್ಳು ವದಂತಿ. ಯಲ್ಲಮ್ಮ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡ್ತಿದ್ದೇವೆ. ಹೂಂಡಿ ಎಣಿಕೆ ಕೂಡ ಆಗುತ್ತಿದ್ದು, ಈ ಬಾರಿ ಹೆಚ್ಚು ಸಂಗ್ರಹ ಆಗಿದೆ. ಇದರಿಂದ ಗೊತ್ತಾಗುತ್ತೆ ಯಲ್ಲಮ್ಮ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಿರುವುದು. ಆದರೆ ಯಾರು ವದಂತಿಗಳಿತೆ ಕಿವಿಗೊಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಇನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನದ ಅರ್ಚಕ ರಾಜು ಪಾಟೀಲ್​​ ಪ್ರತಿಕ್ರಿಯಿಸಿದ್ದು, ‘ಯಾದಗಿರಿಯಲ್ಲಿ ಆಚರಣೆ ಮಾಡುತ್ತಿರುವುದು ಗೊತ್ತಾಗಿದೆ. ಅಂತಹ ಆಚರಣೆ ಯಾರು ಮಾಡಬಾರದು. ನಮ್ಮದು ದೊಡ್ಡ ದೇಗುಲ, ಈ ವದಂತಿಗೆ ಯಾರು ಕಿವಿಗೊಡಬೇಡಿ. ಏನೇ ಆಚರಣೆ ಇದ್ದರೂ ನಿಮ್ಮ ನಿಮ್ಮ ಮನೆಯಲ್ಲಿ ಮಾಡಿ. ಇದೆಲ್ಲಾ ಸುಳ್ಳು ವದಂತಿ, ದೇವಿಗೆ ಸರ್ಪ ದೋಷ ಹೇಗೆ ಆಗುತ್ತೆ. ದೇವಿ ಎಲ್ಲರನ್ನೂ ಕಾಪಾಡುವವಳು. ಭಕ್ತರು ಇದಕ್ಕೆ ಕಿವಿಗೊಡಬಾರದು. ಈ ರೀತಿ ಸುಳ್ಳು ಸುದ್ದಿ ಯಾರು ಹಬ್ಬಿಸಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

ಇನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನದ ಯಡಿಯೂರಪ್ಪ ಎಂಬುವವರು ಮಾತನಾಡಿದ್ದು, ‘ಸುಳ್ಳು ವದಂತಿ ಯಾರು ತಪ್ಪಾಗಿ ಬಿಂಬಿಸಬಾರದು. ತಮ್ಮ ಕೊರಳಲ್ಲಿರುವ ಮುತ್ತು, ಮಾಂಗಲ್ಯ ತೆಗೆಯಬಾರದು. ಹೊಸ ಪದ್ದತಿ ಯಾರು ಅನುಸರಿಸಬಾರದು. ಮೊದಲಿನಿಂದ ಯಾವ ರೀತಿ ಅನುಸರಿಸುತ್ತಿದ್ದಿರಿ ಅದನ್ನ ಅನುಸರಿಸಿ. ಸರ್ಪ ದೋಷ ಎನ್ನುವುದು ನಂಬಬಾರದು. ಯಲ್ಲಮ್ಮಗೆ ಯಾವ ದೋಷ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ