Breaking News

ಭಾರತ್ ಬಂದ್’ ಪರಿಣಾಮ ಬೆಳಗಾವಿಯಲ್ಲಿ ಇರಲ್ಲ ನಾಳೆ ಇಲ್ಲಿ ನಡೆಯೋದು ಮುಷ್ಕರ ಮಾತ್ರ

Spread the love

ಬೆಳಗಾವಿ-ನಾಳೆ ಕುಂದಾನಗರಿ ಬೆಳಗಾವಿ ಬಂದ್ ಇಲ್ಲವೇ ಇಲ್ಲ ‘ಭಾರತ್ ಬಂದ್’ ಪರಿಣಾಮ ಬೆಳಗಾವಿಯಲ್ಲಿ ಇರಲ್ಲ ನಾಳೆ ಇಲ್ಲಿ ನಡೆಯೋದು ಮುಷ್ಕರ ಮಾತ್ರ

ನಾಳೆ ಬಂದ್‌ ನಡೆಸದೇ ಕೇವಲ ಸಾಂಕೇತಿಕವಾಗಿ ಪ್ರತಿಭಟಿಸಲು ವಿವಿಧ ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ ನಾಳೆ ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ‌ನಿರ್ಧರಿಸಿದ್ದು ನಾಳೆ ಎಂದಿನಂತೆ ಬೆಳಗಾವಿಯ ಜನಜೀವನ ನಡೆಯಲಿದೆ.

ಎಂದಿನಂತೆ ಶಾಲಾ ಕಾಲೇಜುಗಳು ಓಪನ್, ಸಾರಿಗೆ ಸಂಚಾರ ಸುಗಮವಾಗಿ ನಡೆಯಲಿದೆ ಬೆಳಗ್ಗೆ 11 ಗಂಟೆಗೆ ಎಐಟಿಯುಸಿ, ಸಿಐಟಿಯು ಸೇರಿ ವಿವಿಧ ಸಂಘಟನೆಗಳ ಪ್ರತಿಭಟ‌ನಾ ಮೆರವಣಿಗೆ ಹೊರಡಿಸಲಿವೆ.

ಬೆಳಗಾವಿಯ ಸಂಭಾಜಿ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಲಿರುವ ಮುಖಂಡರು ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿಭಟ‌ನೆಗೆ ಕೆಲ ಸಂಘಟನೆಗಳ ಸಾಥ್ ನೀಡಲಿವೆ. ಕೆ‌ಎಸ್‌ಆರ್‌ಟಿಸಿ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಕೆಲ ಕನ್ನಡಪರ ಸಂಘಟನೆಗಳು ಮುಷ್ಕರಕ್ಕೆ ಮಾತ್ರ ಬೆಂಬಲ ಸೂಚಿಸಲಿವೆ

ನಾಳೆ ಬೆಳಗಾವಿಯಲ್ಲಿ ಯಾವುದೇ ರೀತಿಯ ಬಂದ್ ಪರಿಸ್ಥಿತಿ ಇರುವದಿಲ್ಲ ಮುಂಜಾಗ್ರತಾ ಕ್ರಮವಾಗಿ ನಾಳೆ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ಇರುತ್ತದೆ.

ಅಂಗಡಿಗಳು ಓಪನ್,ಅಟೋ ಬಸ್ ಗಳ ಓಡಾಟ,ಶಾಲಾ ಕಾಲೇಜುಗಳಲ್ಲಿ ಪಾಠ ಎಂದಿನಂತೆ ನಡೆಯಲಿದ್ದು ನಾಳೆ ಬೆಳಗಾವಿ ಬಂದ್ ಇಲ್ಲ


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ