Breaking News

ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಪರ ನಿರ್ಣಯ ಪಾಸ್

Spread the love

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಅಂತಿಮ ಹಂತದಲ್ಲಿ ಕನ್ನಡ ಭಾಷೆ ಹಾಗೂ ಬೆಳಗಾವಿಯ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಯಿತು.

ಸಭೆಯಲ್ಲಿ ಸರ್ಕಾರದಿಂದ ಪಾಲಿಕೆಗೆ ಬಂದಿದ್ದ ಪತ್ರವನ್ನು ಆಯುಕ್ತ ಕಾರ್ತಿಕ ಎಂ. ಅವರು ಸದಸ್ಯರ ಮುಂದೆ ಓದಿ, ಸರ್ಕಾರದ ಸೂಚನೆಗಳನ್ನು ಸಭೆಯ ಗಮನಕ್ಕೆ ತಂದರು. 1988ರಲ್ಲಿ ಪಾಲಿಕೆ ಸದನದಲ್ಲಿ ಕೈಗೊಂಡಿದ್ದ ನಿರ್ಣಯದಂತೆ ಮುಂದುವರಿಯುವಂತೆ ಸರ್ಕಾರ ಸೂಚಿಸಿರುವುದನ್ನು ಆಯುಕ್ತರು ವಿವರಿಸಿದರು.

ಇದರ ಬೆನ್ನಲ್ಲೇ ಮಹಾಜನ್ ವರದಿಯೇ ಅಂತಿಮ ಎಂಬ ಅಂಶವನ್ನು ಒಳಗೊಂಡ ಕನ್ನಡ ಪರ ನಿರ್ಣಯವನ್ನು ಸಭೆಯಲ್ಲಿ ಮಂಡಿಸಲಾಯಿತು. ನಿರ್ಣಯದ ಕುರಿತು ಸದಸ್ಯರ ನಡುವೆ ಚರ್ಚೆ ನಡೆದ ಬಳಿಕ, ಮೇಯರ್ ಅವರ ಅನುಮೋದನೆಯೊಂದಿಗೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಬಹುಮತದ ಸದಸ್ಯರು ನಿರ್ಣಯದ ಪರವಾಗಿ ಬೆಂಬಲ ಸೂಚಿಸಿದರು.

ನಿರ್ಣಯ ಅಂಗೀಕಾರದ ವೇಳೆ ಎಂಇಎಸ್ ಬೆಂಬಲಿತ ಸದಸ್ಯರು ಮೇಯರ್ ಅವರ ರೋಲಿಂಗ್‌ಗೆ ವಿರೋಧ ವ್ಯಕ್ತಪಡಿಸಿದರು. ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಬಳಿಕ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಮತ್ತೊಂದೆಡೆ, ಮೇಯರ್ ಅವರ ನಿರ್ಣಯಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಮೇಜು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ರಾಜಕೀಯ ವಾತಾವರಣವೂ ನಿರ್ಮಾಣವಾಯಿತು.

ಕಳೆದ ಹಲವು ತಿಂಗಳುಗಳಿಂದ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಮುಖಂಡರಿಂದ ನಡೆಯುತ್ತಿದ್ದ ಹೋರಾಟದ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾದ ಈ ನಿರ್ಣಯ ಮಹತ್ವ ಪಡೆದುಕೊಂಡಿದೆ.

ಸರ್ಕಾರದಿಂದ ಬಂದಿರುವ ಸೂಚನೆಗಳನ್ನು ಆಧರಿಸಿ, 1988ರ ಪಾಲಿಕೆ ನಿರ್ಣಯದಂತೆ ಮುಂದುವರಿಯುವುದು ಹಾಗೂ ಮಹಾಜನ್ ವರದಿಯೇ ಅಂತಿಮ ಎಂಬ ನಿಲುವನ್ನು ನಿರ್ಣಯದ ಮೂಲಕ ದಾಖಲಿಸಲಾಗಿದೆ.

ಈ ಮೂಲಕ ಸರ್ಕಾರದ ಸೂಚನೆಯನ್ನು ಪಾಲಿಕೆ ಸಭೆ ಬಹುಮತದಿಂದ ಅಂಗೀಕರಿಸಿದ್ದು, ಬೆಳಗಾವಿಯ ಕನ್ನಡ ಪರ ಹೋರಾಟಕ್ಕೆ ಪಾಲಿಕೆಯ ನಿರ್ಣಯದ ಮೂಲಕ ಅಧಿಕೃತ ಸ್ಪಂದನೆ ದೊರೆತಂತಾಗಿದೆ.


Spread the love

About Laxminews 24x7

Check Also

ಬರ ಪರಿಹಾರ ನೀಡಿಲ್ಲ, ಬೇಡಿಕೆ ಈಡೇರಿಸಿಲ್ಲ; ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್. ಅಶೋಕ್

Spread the loveಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಪ್ರತಿಪಕ್ಷ ಬಿಜೆಪಿ  ಇಟ್ಟಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ಬದಲಾಗಿ ರೈತರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ