Breaking News

ವರ್ಕ್‌ ಫ್ರಮ್‌ ಹೋಮ್‌ಗೆ ಆದ್ಯತೆ ನೀಡಿ: ದೇಶದ ಜನತೆಗೆ ಮೋದಿ ಸಲಹೆ

Spread the love

ಹೈದರಾಬಾದ್‍: ಪೆಟ್ರೋಲ್‌, ಡೀಸೆಲ್‌ ಸದ್ಬಳಕೆಗೆ ಪ್ರಧಾನಿ ನರೇಂದ್ರ ಮೋದಿಯವರು  ಕರೆ ನೀಡಿದರು. ಇದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಸಲಹೆ ನೀಡಿದರು. ಹೈದರಾಬಾದ್‍ನ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು, ಆಮದು ಮಾಡಿಕೊಂಡ ಪೆಟ್ರೋಲ್‌, ಡೀಸೆಲ್‌ ಸದ್ಬಳಕೆಯಾಗಬೇಕು ಎಂದು ಒತ್ತಿ ಹೇಳಿದರು.

ಪೆಟ್ರೋಲ್, ಡೀಸೆಲ್ ಉತ್ಪನ್ನಗಳ ಮಿತ ಬಳಕೆ ಈಗಿನ ಅಗತ್ಯವಾಗಿದೆ. ನಾವು ಆಮದು ಮಾಡಿಕೊಂಡ ಪೆಟ್ರೋಲ್ ಉತ್ಪನ್ನಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕಾಗಿದೆ. ಮನೆಯಿಂದಲೇ ಕೆಲಸ ಮಾಡಿ, ವಿದ್ಯುತ್ ವಾಹನಗಳನ್ನು ಬಳಸಿ, ಚಿನ್ನ ಖರೀದಿ ಕಡಿಮೆ ಮಾಡಿ, ವಿದೇಶಗಳಲ್ಲಿ ಮದುವೆ ಕಾರ್ಯಕ್ರಮ ಮಾಡದಂತೆ ಅವರು ಭಾರತೀಯರಿಗೆ ಕರೆಕೊಟ್ಟರು. ಇದು ವಿದೇಶಿ ವಿನಿಮಯವನ್ನು ಉಳಿಸುವುದಲ್ಲದೇ ಯುದ್ಧದ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲಿದೆ.

ಕಳೆದ ಕೆಲವು ವರ್ಷಗಳಿಂದ, ಸೌರಶಕ್ತಿಯ ವಿಷಯದಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಪೆಟ್ರೋಲ್‍ನಲ್ಲಿ ಎಥೆನಾಲ್ ಮಿಶ್ರಣ ಮಾಡುವಲ್ಲಿ ಅಭೂತಪೂರ್ವ ಕೆಲಸ ಮಾಡಲಾಗಿದೆ ಎಂದು ಇದೇ ವೇಳೆ ಅವರು ಒತ್ತಿ ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಮೋದಿ ಹೇಳಿಕೆ ಗಂಭೀರತೆ ಪಡೆದಿದೆ.


Spread the love

About Laxminews 24x7

Check Also

ಯಡಿಯೂರಪ್ಪ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಮುಚ್ಚಿ: ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Spread the love ಯಡಿಯೂರಪ್ಪ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಮುಚ್ಚಿ: ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಅಲಾರವಾಡ ಅಂಡರ್‌ಬ್ರಿಡ್ಜ್ ಸರ್ಕಲ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ