Breaking News

ರಾಮನ ಹೆಸರಿನಲ್ಲಿ 20 ಸಾವಿರ ಕೋಟಿ ಲೂಟಿ ಆಗಿದೆ ಅನ್ನೋ ಮಾಹಿತಿ ಇದೆ: ಮಲ್ಲಿಕಾರ್ಜುನ ಖರ್ಗೆ ಆತಂಕ

ಚಿಕ್ಕಬಳ್ಳಾಪುರ: ರಾಮಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿ ಲೂಟಿ ನಡೆದಿದೆ ಎಂಬ ಸುದ್ದಿಗಳು ಬರುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮನ ದೇಣಿಗೆ ಕದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಆರ್‌ಎಸ್‌ಎಸ್‌ (BJP – RSS) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ರಾಮಮಂದಿರದ  ಹೆಸರಿನಲ್ಲಿ 20 ಸಾವಿರ …

Read More »

ಬೈಕ್‌ಗೆ ಸೈಡ್ ಕೊಡುವಾಗ ‌ಕಾಫಿ ತೋಟಕ್ಕೆ ಉರುಳಿದ ಕಾರು – ಐವರಿಗೆ ಗಾಯ

ಚಿಕ್ಕಮಗಳೂರು: ಬೈಕ್‌ಗೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು  ಕಾಫಿ ತೋಟಕ್ಕೆ ನುಗ್ಗಿ, ಪಲ್ಟಿಯಾಗಿರುವ  ಘಟನೆ ಕಳಸ  ತಾಲೂಕಿನ ಬೈನೇಕಾಡು ಹೋಮ್ ಸ್ಟೇ ಬಳಿ ನಡೆದಿದೆ. ‌ಕಾರಿನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಾಗನರ್ ಕಾರು ಹೊರನಾಡಿನಿಂದ ಉಡುಪಿ ಕಡೆ ಹೊರಟಿತ್ತು. ಈ ವೇಳೆ, ಬೈನೇಕಾಡು ಹೋಮ್ ಸ್ಟೇ ಬಳಿ ಎದುರಿನಿಂದ ಬಂದ ಬೈಕ್‌ಗೆ ಕಾರಿನ ಚಾಲಕ ಸೈಡ್ ಕೊಡುವಾಗ ಈ ಅವಘಡ ನಡೆದಿದೆ. ನಿರಂತರ ಮಳೆಯಿಂದ …

Read More »

ಮೃತ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ – ಪರಮೇಶ್ವರ್‌ ಭರವಸೆ ಬೆನ್ನಲ್ಲೇ ಪ್ರತಿಭಟನೆ ವಾಪಸ್‌

ತುಮಕೂರು: ಮೃತ ವಿಎ ಭುವನಾಕುಟುಂಬಕ್ಕೆ 1 ಕೋಟಿ ವಿಮೆ ಹಣ 15 ದಿನಗಳಲ್ಲಿ ಬರುತ್ತದೆ. ಅಲ್ಲದೇ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ ಎಂದು ಕಂದಾಯ ಸಚಿವರೂ ಆದ ಡಿಸಿಎಂ ಪರಮೇಶ್ವರ್‌  ಭರವಸೆ ನೀಡಿದರು. ತುಮಕೂರಿನಲ್ಲಿ ವಿಎ ಭುವನಾ ಸಾವು ಖಂಡಿಸಿ ಕಂದಾಯ ನೌಕರರ ಸಂಘದಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಎಂ ಶೀಘ್ರದಲ್ಲೇ ಪರಿಹಾರ ಕೊಡಿಸುವ ಹಾಗೂ …

Read More »

ಕೃಷ್ಣಾ ನದಿಗೆ ಜೀವಕಳೆ: ಹಿಪ್ಪರಗಿ ಬ್ಯಾರೇಜ್‌ನ 16 ಗೇಟ್‌ ಓಪನ್‌

ಬಾಗಲಕೋಟೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷ್ಣಾ ನದಿಗೆಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ತೀವ್ರ ಬೇಸಿಗೆಯಿಂದಾಗಿ ಸಂಪೂರ್ಣ ಬರಿದಾಗಿದ್ದ ಕೃಷ್ಣಾ ನದಿಗೆ ಈಗ ದಿಢೀರ್ ಜೀವಕಳೆ ಬಂದಂತಾಗಿದ್ದು, ನದಿ ತೀರದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜಮಖಂಡಿ ತಾಲ್ಲೂಕಿನ ಪ್ರಮುಖ ಜಲಮೂಲವಾದ ಹಿಪ್ಪರಗಿ ಬ್ಯಾರೇಜ್‌ಗೆನೀರಿನ ಒಳಹರಿವು ಗಂಟೆಯಿಂದ ಗಂಟೆಗೆ ಹೆಚ್ಚುತ್ತಿದೆ. ಪ್ರಸ್ತುತ ಒಳಹರಿವು 30,000 ಕ್ಯೂಸೆಕ್ ಇದ್ದರೆ 22,000 ಕ್ಯೂಸೆಕ್‌ ಹೊರ ಹರಿವಿದೆ. ನದಿಗೆ ಬರುತ್ತಿರುವ …

Read More »

ವೈರ್‌ನಿಂದ ಕುತ್ತಿಗೆ ಬಿಗಿದು ಪತ್ನಿ ಕೊಲೆ; ಮೂವರು ಮಕ್ಕಳನ್ನು ಬಿಟ್ಟು ಗಂಡ ಎಸ್ಕೇಪ್

ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ನಡುವೆ ಪತಿಯೇ ಪತ್ನಿಯ ಕುತ್ತಿಗೆಗೆ ವೈರ್‌ ಬಿಗಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಪವಿತ್ರಾ ಕೊಲೆಯಾದ ಮಹಿಳೆ. ಆರೋಪಿ ಪತಿ ವೆಂಕಟೇಶ್, ವೈರ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ದಂಪತಿಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಮೂವರು ಮಕ್ಕಳಿದ್ದಾರೆ. ವೆಂಕಟೇಶ್‌ಗೆ ಕುಡಿತದ ಚಟವಿದ್ದು, ಸಾಕಷ್ಟು ಸಾಲವೂ ಮಾಡಿಕೊಂಡಿದ್ದ. ಈ ವಿಚಾರವಾಗಿ ಪತಿ-ಪತ್ನಿಯ …

Read More »

ಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆ

ಬೆಂಗಳೂರು: ರೌಡಿಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು  ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆಯೊಂದರಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಇಂದಿರಾನಗರದ ಪ್ರಭಾಕರ್ ಎಂಬಾತನ ಮನೆಯಲ್ಲಿ ಮಾರಾಕಾಸ್ತ್ರಗಳು ಕಂಡುಬಂದಿವೆ. ಅಲ್ಲದೇ, ಅನುಮಾನಿತ ವ್ಯಕ್ತಿಗಳು ಮತ್ತು ಅವರಿಗೆ ಸೇರಿದ ವಾಹನಗಳ ತಪಾಸಣೆ ನಡೆಸಲಾಗಿದೆ. ಮೂವತ್ತಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ.

Read More »

ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಡೆಗೂ ಮಳೆ ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಯೊಂದಿಗೆ ಚಳಿ ವಾತಾವರಣವೂ ಹೆಚ್ಚಾಗಿದ್ದು, ಜನಜೀವನದ ಮೇಲೆ ಅದರ ಪರಿಣಾಮ ಕಂಡುಬಂದಿದೆ. ಈ ನಡುವೆ ಹಾರಂಗಿ ಜಲಾಶಯಕ್ಕೆ ಇಂದು 1,470 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕೊಡಗು ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಲಾಶಯದ …

Read More »

ರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ  ನೀಡಿದೆ. ಈ ತಿಂಗಳು ಮುಂಗಾರು ಬಿರುಸು ಪಡೆಯುವ ಸಾಧ್ಯತೆಯಿದ್ದು, 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಹಲವೆಡೆ ಈಗಾಗಲೇ ಉತ್ತಮ ಮಳೆಯಾಗುತ್ತಿದೆ. ಇನ್ನು ಸಿಲಿಕಾನ್ …

Read More »

ಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮ

ಹಾವೇರಿ: ನೌಕಾಪಡೆಯ ಯೋಧ  ಕರ್ತವ್ಯದ ವೇಳೆ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಹಾವೇರಿ  ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ನಿವಾಸಿ ಯಶೋಧರ ವಡ್ಡರ್ (29) ಭಾರತೀಯ ನೌಕಾಪಡೆಯ ಯೋಧ. ಕರ್ತವ್ಯದ ವೇಳೆ ಕೇರಳದ ಕೊಚ್ಚಿಯಲ್ಲಿ ನಡೆದ ಫೈರಿಂಗ್ ತರಬೇತಿ ಸಂದರ್ಭ ಹುತಾತ್ಮರಾಗಿದ್ದಾರೆ. ಕಳೆದ 10 ವರ್ಷಗಳಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯಶೋಧರ ವಡ್ಡರ್, 2016ರಲ್ಲಿ ನೌಕಾದಳಕ್ಕೆ ಸೇರ್ಪಡೆಯಾಗಿದ್ದರು. ಹುತಾತ್ಮ ಯೋಧನ ಪಾರ್ಥಿವ ಶರೀರ ಸ್ವಗ್ರಾಮ ಉಪ್ಪುಣಸಿಗೆ …

Read More »

ಜೈಶ್‌ ಉಗ್ರರ ಜೊತೆ ನಂಟು; ಗುಜರಾತಲ್ಲಿ 8 ಮಂದಿ ಅರೆಸ್ಟ್‌

ಗಾಂಧೀನಗರ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಹಲವು ರಾಜ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್  ಜೊತೆ ಸಂಪರ್ಕ ಹೊಂದಿದ್ದ ಎಂಟು ಜನರನ್ನು ಬಂಧಿಸಲಾಗಿದೆ. ಗುಜರಾತ್‌ನ ಬನಸ್ಕಾಂತ, ಪಠಾಣ್, ನವಸಾರಿ ಹಾಗೂ ಮಧ್ಯಪ್ರದೇಶದ ದೇವಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಘಟಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಯಿತು. ಬಂಧಿತರು ಗುಜರಾತ್‌ನಲ್ಲಿ ದಾಳಿಗಳನ್ನು ನಡೆಸಲು ಪ್ಲ್ಯಾನ್‌ ಮಾಡುತ್ತಿದ್ದ ಜೈಶ್‌ ಉಗ್ರರಿಗೆ ಸಹಕಾರ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಬಂಧಿತರಲ್ಲಿ ಹಲವರು ಪಠಾಣ್‌ನ …

Read More »