ಬೆಂಗಳೂರು: ಪಿಎಂ ಕೇರ್ಸ್ ದೇಶದ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದು ಹಾಗೂ ಪ್ರಧಾನಿ ಮೋದಿ ಸರ್ಕಾರದಿಂದ ಸಾರ್ವಜನಿಕ ನಂಬಿಕೆಗೆ ಮಾಡಿರುವ ದ್ರೋಹವಾಗಿದೆ ಎಂದು ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್‌ನಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು 2020ರಲ್ಲಿ ಸ್ಥಾಪಿಸಲಾದ ಪಿಎಂ ಕೇರ್ಸ್ (PM CARES) ನಿಧಿಯಲ್ಲಿ ಸದ್ಯ ಒಟ್ಟು 8,452 ಕೋಟಿ ರೂ. ಹಣವಿರುವುದು ಇತ್ತೀಚಿನ ಆಡಿಟ್ ವರದಿ ತಿಳಿಸಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ಹಂಚಿಕೊಳ್ಳುವ ಮೂಲಕ …
Read More »ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ
ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಪರಿಶೀಲನೆಯ ನಂತರ 32 ಸಾವಿರ ರೂ.ಯಿಂದ 1.20 ಲಕ್ಷ ರೂ.ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ …
Read More »ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಕೊಟ್ಟಿದ್ದ ವ್ಯಕ್ತಿ ಅರೆಸ್ಟ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿರುವ ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಬಂಧಿಸಲಾಗಿದೆ. ಬಾಣಸವಾಡಿ ನಿವಾಸಿ ನವೀನ್ ಎಂಬಾತನನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಅಪರಾಧ ಪ್ರಕರಣದಲ್ಲಿ ಈ ಹಿಂದೆ ಜೈಲು ಸೇರಿದ್ದ ನವೀನ್‌ಗೆ ಪ್ರತಾಪ್ ರಾಯ್ ಎಂಬಾತನ ಪರಿಚಯವಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ನವೀನ್, ಪ್ರತಾಪ್ ರಾಯ್‌ಗೆ ಅಕ್ರಮವಾಗಿ ಮೊಬೈಲ್ ಫೋನ್ ತಲುಪಿಸಿದ್ದ. ಇದಕ್ಕಾಗಿ ಇಬ್ಬರ ನಡುವೆ ದೊಡ್ಡ ಮಟ್ಟದ …
Read More »ಒಂದೇ ಕೋಣೆಯ ಮನೆಯಲ್ಲಿರುವವರು ಕೆಲಸಕ್ಕಾಗಿ ಲಕ್ಷಾಂತರ ಹಣ ಕೊಡಲು ಸಾಧ್ಯನಾ? – ಇಡಿ ರೇಡ್‌ಗೆ ಗ್ರಾಮಸ್ಥರ ಅಸಮಾಧಾನ
ರಾಯಚೂರು: ಕೆಪಿಎಸ್‌ಸಿ ಹಗರಣ ಹಿನ್ನೆಲೆ ರಾಜ್ಯದ ಹಲವೆಡೆ ನಡೆದ ಇಡಿ ಅಧಿಕಾರಿಗಳ ದಾಳಿ ರಾಯಚೂರಿನಲ್ಲಿ ಗ್ರಾಮಸ್ಥರನ್ನ ಅಚ್ಚರಿಗೊಳಿಸಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮೂಲ ಜಿಲ್ಲೆ ರಾಯಚೂರಿನಲ್ಲಿ ಎರಡು ಕಡೆಗಳಲ್ಲಿ ಮಂಗಳವಾರ (ಆ.18) ದಾಳಿ ನಡೆಸಿ, ಇಡಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳ ಕುಟುಂಬಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ದೇವದುರ್ಗದ ಶಾವಂತಗೇರಾ ಹಾಗೂ ಮಸ್ಕಿ …
Read More »ಮೂಡಾ 50:50 ಸೈಟು ಹಂಚಿಕೆ ಹಗರಣ – ಹಂಚಿಕೆಯಾಗಿದ್ದ ಎಲ್ಲಾ 1,100 ಸೈಟುಗಳು ತಕ್ಷಣದಿಂದಲೇ ರದ್ದು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಮಾಡಲಾಗಿದ್ದ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ಈ ಆದೇಶ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನ ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸಿ ಆದೇಶ ಮಾಡಿದೆ. ನಿಯಮ ಉಲ್ಲಂಘಿಸಿ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ …
Read More »ಶೃಂಗೇರಿ ಮರು ಮತ ಎಣಿಕೆ ಪ್ರಕರಣ – ರಾಜೇಗೌಡಗೆ ಸುಪ್ರೀಂನಲ್ಲಿ ತಾತ್ಕಾಲಿಕ ರಿಲೀಫ್
ನವದೆಹಲಿ: ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 10ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಈ ಹಿಂದಿನ ಮಧ್ಯಂತರ ಆದೇಶವೇ ಮುಂದುವರಿಯಲಿದೆ. ಇದರಿಂದಾಗಿ ರಾಜೇಗೌಡ ಅವರ ಶಾಸಕ ಸ್ಥಾನ ಸದ್ಯಕ್ಕೆ ಸುಭದ್ರವಾಗಿದೆ. ಇಂದು ನಡೆದ ವಿಚಾರಣೆ ವೇಳೆ, ಬಿಜೆಪಿ …
Read More »ಆಸ್ತಿ ವಿಚಾರಕ್ಕೆ ಪತಿ, ಪತ್ನಿ ನಡುವೆ ಜಗಳ – ಕೋಪಕ್ಕೆ ತನ್ನಿಬ್ಬರು ಮಕ್ಕಳನ್ನ ಕಾಲುವೆಗೆ ಎಸೆದು, ಪೊಲೀಸರಿಗೆ ಶರಣಾದ ತಂದೆ
ಯಾದಗಿರಿ: ಆಸ್ತಿ ವಿಚಾರಕ್ಕೆ ಪತಿ, ಪತ್ನಿ ನಡುವೆ ನಡೆದ ಗಲಾಟೆ ತಾರಕಕ್ಕೇರಿ ತನ್ನಿಬ್ಬರು ಮಕ್ಕಳನ್ನ ಕಾಲುವೆಗೆ ಎಸೆದು ತಂದೆ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ಕಕ್ಕಸಗೇರಾ ಗ್ರಾಮದ ಆರೋಪಿ ತಂದೆ ಶಾಂತಪ್ಪ ತನ್ನ ಇಬ್ಬರು ಮಕ್ಕಳಾದ ಸಾನ್ವಿ(9) ಹಾಗೂ ಸೃಜನ್‌ನನ್ನು (2) ಕೊಲೆ ಮಾಡಿದ್ದಾನೆ. ಮೂವರು ಮಕ್ಕಳನ್ನು ಕೊಲೆ ಮಾಡಲೆಂದು ಆರೋಪಿ ತಂದೆ ಕಾಲುವೆಗೆ ಕರೆದೊಯ್ದಿದ್ದ. ಆದರೆ ಈ ವೇಳೆ …
Read More »ಕೋಟ್ಯಂತರ ರೂ. ಅಕ್ರಮ, ನಕಲಿ ಬಿಲ್ ಸೃಷ್ಟಿ ಆರೋಪ – ಗಂಗಾವತಿ ಪಂಚಾಯಿತಿ ಜೆಇ ಸಸ್ಪೆಂಡ್
ಕೊಪ್ಪಳ: ಇಲ್ಲಿನ ಗಂಗಾವತಿ ಪಂಚಾಯಿತಿಯಿಂದ ಅನುಷ್ಠಾನಗೊಂಡ ನಾನಾ ಕಾಮಗಾರಿಯಲ್ಲಿ ಅಕ್ರಮ ಎಸಗಿರುವ ಆರೋಪ ಸಾಬೀತಾದ ಹಿನ್ನೆಲೆ ಗಂಗಾವತಿ ಪಂಚಾಯಿತಿ ಉಪವಿಭಾಗ ಎಂಜಿನಿಯರಿಂಗ್ ವಿಭಾಗದ ಜೂನಿಯರ್ ಎಂಜಿನೀಯರ್ ಪಲ್ಲವಿ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಲೋಕಾಯುಕ್ತ ಪೊಲೀಸರ ಶಿಫಾರಸ್ಸಿನ ಮೇರೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಪ್ರಧಾನ ಎಂಜಿನಿಯರ್ ಶ್ರೀನಾಥ್ ಕೆ., ಜೆ ಪಲ್ಲವಿಯನ್ನು ಅಮಾನತು ಮಾಡಿ ಆಗಸ್ಟ್ 14ರಂದು ಈ ಆಡಳಿತಾತ್ಮಕ ಕ್ರಮ ಜರುಗಿಸಿದ್ದಾರೆ. (ನರೇಗಾ) ಯೋಜನೆಯಡಿ …
Read More »ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹ
ಬೆಳಗಾವಿ: ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶವಿದ್ದು, ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ (ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಹ ಹೇಳಿದರು. ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘ (ಬಿಡಿಎಸ್ಎಸ್ಐಎ) ಬುಧವಾರ ಆಯೋಜಿಸಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ, ಉದ್ಯಮಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದ ಅವರು, ಚೆಂಬರ್ ಆಫ್ ಕಾಮರ್ಸ್ …
Read More »ಜೆಸಿಬಿಯನ್ನು ಕದ್ದು ರೇಸ್ ಕಾರಿನಂತೆ ಓಡಿಸಿದ ಭೂಪ – ಬ್ಯಾರಿಕೇಡ್‌ಗಳು ಪುಡಿ ಪುಡಿ, ಪೊಲೀಸರಿಂದ ಫಿಲ್ಮಿ ಸ್ಟೈಲ್ ಚೇಸಿಂಗ್
ಭುವನೇಶ್ವರ: ಬೈಕ್, ಕಾರು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯಲ್ಲಿ ವೇಗವಾಗಿ ಪರಾರಿಯಾಗುವ ಕಳ್ಳರ ಬಗ್ಗೆ ಕೇಳಿರುತ್ತೀರಿ. ಆದರೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಖದೀಮನೊಬ್ಬ ಜೆಸಿಬಿಯನ್ನೇ ಕದ್ದು ರಸ್ತೆಯಲ್ಲಿ ಮನ ಬಂದಂತೆ ಚಲಾಯಿಸಿದ್ದಾನೆ. ಸಾಮಾನ್ಯವಾಗಿ ನಿಧಾನವಾಗಿ ಸಾಗುವ ಜೆಸಿಬಿಯಲ್ಲೇ ಈ ಭೂಪ ಹೆದ್ದಾರಿಯಲ್ಲಿ ರೇಸ್ ಕಾರ್ ತರಹ ಅಬ್ಬರಿಸಿದ್ದಾನೆ. ಜೆಸಿಬಿ ಬ್ಯಾರಿಕೇಡ್‌ಗಳನ್ನು ಮುರಿದು ವೇಗವಾಗಿ ಸಾಗುತ್ತಿರುವ ಜೆಸಿಬಿಯನ್ನು ಪೊಲೀಸರು ಚೇಸಿಂಗ್ ಮಾಡುತ್ತಿರುವ ದೃಧ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗಸ್ಟ್ 14 …
Read More »
Laxmi News 24×7