ಮಂಡ್ಯ: ಹಲವು ತಿಂಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಮಂಡ್ಯದಲ್ಲಿ ಇದೀಗ ಧಾರಾಕಾರ ಮಳೆಯಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಭಾರೀ ಮಳೆಗೆ ನಗರದ ಮಹಾವೀರ ವೃತ್ತದ ರಸ್ತೆ ಜಲಾವೃತಗೊಂಡಿದೆ.
ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ಹಲವು ಬೈಕ್ಗಳು ಮುಳುಗಡೆಯಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಚರಂಡಿಗಳು ಕಟ್ಟಿಕೊಂಡಿರುವುದರಿಂದ ಮಳೆ ನೀರು ರಸ್ತೆಯಲ್ಲೇ ನಿಂತು ಸಮಸ್ಯೆ ಉಂಟಾಗಿದೆ.
Laxmi News 24×7