Breaking News

2027ರ ಜನವರಿ ಅಂತ್ಯಕ್ಕೆ ವಿಮಾನಯಾನ – ಕೊನೆ ಹಂತದತ್ತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

ವಿಜಯಪುರ: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ವರ್ಷಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಿಸುವ ಪ್ರಯತ್ನ ಕೈಗೂಡಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಮಾನ ನಿಲ್ದಾಣಕ್ಕಿಂದು ಭೇಟಿ ನೀಡಿ, ಪ್ರಗತಿ ಪರಿಶೀಲಿಸಿದ ಬಳಿಕ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಿಸರ ಇಲಾಖೆಯ ಅನುಮತಿ ಇಲ್ಲದೇ ಇರುವುದರಿಂದ ಹಾಗೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ …

Read More »

ಹೇಳದೇ ಕೇಳದೇ ಸರ್ಕಾರಿ ಶಾಲೆ ಪ್ರವೇಶ, ಶಿಕ್ಷಕರಿಗೆ ಬೆದರಿಕೆ – ʻಕಾಕ್ರೋಚ್‌ʼ ದೀಪ್ಕೆ ವಿರುದ್ಧ ಎಫ್‌ಐಆರ್

ಮುಂಬೈ: ಮಹಾರಾಷ್ಟ್ರದ ಲಾತೂರ್  ಜಿಲ್ಲೆಯ ಪೊಲೀಸರು ಕಾಕ್ರೋಚ್‌ ಜನತಾ ಪಾರ್ಟಿ  ಮುಖ್ಯಸ್ಥ ಅಭಿಜೀತ್ ದೀಪ್ಕೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅನುಮತಿ ಇಲ್ಲದೇ ಸರ್ಕಾರಿ ಶಾಲೆಗೆ ಪ್ರವೇಶಿಸುವುದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪಗಳ ಮೇಲೆ ಈ ಎಫ್‌ಐಆರ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132, 329(3), 351(2) ಮತ್ತು 356(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜಿಲ್ಲಾ ಪಂಚಾಯತ್ ಉರ್ದು ಶಾಲೆಯ 53 …

Read More »

ಒಂದೇ ಕುಟುಂಬದ ನಾಲ್ವರು ನಾಪತ್ತೆ ಕೇಸ್‌ಗೆ ಟ್ವಿಸ್ಟ್ – ಲಾಭದಾಸೆ ಹುಟ್ಟಿಸಿ 25 ರಿಂದ 30 ಕೋಟಿ ರೂ. ಪೀಕಿ ಎಸ್ಕೇಪ್

ದಾವಣಗೆರೆ: ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾಗಿದ್ದ ಒಂದೇ ಕುಟುಂಬದ ನಾಲ್ವರ ನಿಗೂಢ ನಾಪತ್ತೆ ಪ್ರಕರಣಕ್ಕೆ ಈಗ ಬೆಚ್ಚಿ ಬೀಳಿಸುವ ಮಹಾ ಟ್ವಿಸ್ಟ್ ಸಿಕ್ಕಿದೆ. ಮೇಲ್ನೋಟಕ್ಕೆ ಸಾಧಾರಣ ನಾಪತ್ತೆ ಎನ್ನಲಾಗುತ್ತಿದ್ದ ಈ ಪ್ರಕರಣದ ಹಿಂದೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾದರಿಯ ಬೃಹತ್ ವಂಚನಾ ಜಾಲ ಬಯಲಾಗಿದೆ. ಷೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ತಿಂಗಳಿಗೆ 1 ಲಕ್ಷ ರೂ. ಲಾಭ ಕೊಡೋದಾಗಿ ಆಸೆ ಹುಟ್ಟಿಸಿ ರಮೇಶ್ ಕುಮಾರ್ ಎಂಬಾತ ಕೆಲವರಿಂದ 30 ಕೋಟಿ ರೂ. ಅಧಿಕ …

Read More »

ನಾಯಿ ಅಟ್ಟಿಸಿಕೊಂಡು ಬಂದಿದ್ದ ಕಾಡಾನೆ ದಾಳಿಗೆ ಸಿಕ್ಕಿ ಬೆಂಗಳೂರು ಪ್ರವಾಸಿಗ ಬಲಿ

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸ್ಥಳೀಯ ಹೋಂ ಸ್ಟೇಗೆ ಪ್ರವಾಸಕ್ಕಾಗಿ ಆಗಮಿಸಿದ್ದ ಸುಮಾರು 40 ವರ್ಷದ ಮುರುಳಿಕೃಷ್ಣ ಎಂಬ ಪ್ರವಾಸಿಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಪ್ರವಾಸಿಗರು ತೆರಾಲು ಗ್ರಾಮದ ಹೋಂಸ್ಟೇ ಯಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾಯಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಏಕಾಏಕಿ ಪ್ರವಾಸಿಗನ ಮೇಲೆ …

Read More »

ದರ್ಶನ್‌ಗೆ ಮಾಫಿ ಸಾಕ್ಷಿ ಸಂಕಷ್ಟ – ದೈವದ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ವಿರುದ್ಧ ಮಾಫಿ ಸಾಕ್ಷಿ ವಿಚಾರ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ದರ್ಶನ್ ಪತ್ನಿ ವಿಜಯಲಕ್ಷ್ಮಿ  ದೈವದ ಮೊರೆ ಹೋಗಿದ್ದಾರೆ. ಮಂಗಳೂರಿನ  ಶ್ರೀಕ್ಷೇತ್ರ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತಾ ಹಾಗೂ ಗುಳಿಗ ದೈವದ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಕೋಲ ಸೇವೆ ನಡೆಸಿ, ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸಿದ್ದಾರೆ. ದರ್ಶನ್‌ಗೆ  ಪ್ರದೋಷ್‌ ಮಾಫಿ ಸಾಕ್ಷಿ ಕಂಟಕವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ದೈವದ ಸನ್ನಿಧಿಯಲ್ಲಿ …

Read More »

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣದಲ್ಲಿ ನಮ್ಮ ಅಧಿಕಾರಿಗಳ ಕೈವಾಡವಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪ್ರಜ್ವಲ್ ರೇವಣ್ಣ  ಬ್ಯಾರಕ್‌ನಲ್ಲಿ ಮೊಬೈಲ್  ಪತ್ತೆ ಪ್ರಕರಣದಲ್ಲಿ ನಮ್ಮ ಅಧಿಕಾರಗಳ ಕೈವಾಡವೂ ಇದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀಡಿಯೋ 2025 ಡಿಸೆಂಬರ್‌ನ ಹಳೆಯ ವೀಡಿಯೋ. ಪ್ರಜ್ವಲ್ ರೇವಣ್ಣ ಸೆಲ್ ಮೇಲೆ ಮಾತ್ರ ರೇಡ್ ಮಾಡ್ಸಿಲ್ಲ, ಇಡೀ ಜೈಲಿನ ಮೇಲೆ ದಾಳಿ ಮಾಡಿದ್ದೆವು. ತನಿಖೆ ಆಗುತ್ತಿದೆ, ಯಾರು ಕೊಟ್ರು ಅನ್ನೋದು ಬಯಲಿಗೆ ಬರಲಿದೆ. ಇದರಲ್ಲಿ ನಮ್ಮ ಅಧಿಕಾರಿಗಳ ಕೈವಾಡವೂ …

Read More »

ನಿವೃತ್ತಿ ಬೆನ್ನಲ್ಲೇ ತೇಜಸ್ ಮಾರ್ಕ್-2 ಜೆಟ್‌ ಕಾರ್ಯಕ್ಷಮತೆ ಟೀಕಿಸಿದ ವಾಯುಪಡೆ ಏರ್ ಮಾರ್ಷಲ್

ನವದೆಹಲಿ: ಭಾರತದ ವಾಯುಪಡೆಯ ಗೇಮ್‌ಚೇಂಜರ್ ಅಂತಲೇ ಖ್ಯಾತಿಗಳಿಸಿರುವ ಸ್ವದೇಶಿ ನಿರ್ಮಿತ ತೇಜಸ್ ಎಂಕೆ-2 ಫೈಟರ್ ಜೆಟ್‌ಗಳ ಕಾರ್ಯಕ್ಷಮತೆ, ದಕ್ಷತೆಯನ್ನು ಇತ್ತೀಚೆಗಷ್ಟೇ ವಾಯಪಡೆಯಿಂದ ನಿವೃತ್ತರಾಗಿರುವ ಮಾಜಿ ಉಪಮುಖ್ಯಸ್ಥ ನಾಗೇಶ್ ಕಪೂರ್ ಟೀಕಿಸಿದ್ದಾರೆ. ಭಾರತದಲ್ಲೇ ತಯಾರಾಗುತ್ತಿರುವ ತೇಜಸ್‌ ಎಂಕೆ-2 (ಮಾರ್ಕ್‌-2) ಯುದ್ಧ ಚಿಮಾನವು 2030ರ ದಶಕದ ಮಧ್ಯಭಾಗದಲ್ಲಿ ಗಣ ಸಂಖ್ಯೆಯಲ್ಲಿ ಸೇವೆಗೆ ಸೇರ್ಪಡೆಯಾಗುವ ವೇಳೆಗೆ, ಮುಂಚೂಣಿ ಕಾರ್ಯಾಚರಣೆಗಳಿಗೆ ಪ್ರಸ್ತುತವಾಗದೇ ಇರಬಹುದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಚೀನಾ ಈಗಾಗಲೇ 6ನೇ ತಲೆಮಾರಿನ ಯುದ್ಧ ವಿಮಾನಗಳತ್ತ …

Read More »

ನಡುರಸ್ತೆಯಲ್ಲೇ ಮೆಡಿಕಲ್ ಶಾಪ್ ಮಾಲೀಕನ ಕೊಲೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಂಗಮ್ಮನಪಾಳ್ಯದ ನಿವಾಸಿ, ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಕೊಲೆಯಾದ ದುರ್ದೈವಿ. ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್‌ಗಳಿಂದ …

Read More »

ಆಟವಾಡುತ್ತಾ ಕೀ ಆನ್‌ ಮಾಡಿದ ಮಗು – ಟ್ರ್ಯಾಕ್ಟರ್‌ ಮೈಮೇಲೆ ಹರಿದು ತಂದೆ ದಾರುಣ ಸಾವು

ಹಾಸನ: ಮೂರು ವರ್ಷದ ಮಗು ಆಟವಾಡುತ್ತಾ ಟ್ರ್ಯಾಕ್ಟರ್‌  ಕೀ ಆನ್‌ ಮಾಡಿದ ಪರಿಣಾಮ ತಂದೆಯ ಮೇಲೆ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ  ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ. ಯಶ್ವಂತ್ (37) ಟ್ರಾಕ್ಟರ್ ಹರಿದು ಸಾವನ್ನಪ್ಪಿದ ವ್ಯಕ್ತಿ. ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಅವರು, ಅರಕಲಗೂಡು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೊಸ ಮನೆ ಕಟ್ಟಿಸುತ್ತಿದ್ದ ಯಶ್ವಂತ್‌, ವರಮಹಾಲಕ್ಷ್ಮೀ ಹಬ್ಬದ ದಿನದಂದು ಆರ್‌ಸಿಸಿಗಾಗಿ ಟ್ರಾಕ್ಟರ್‌ನಲ್ಲಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತರಿಸಿದ್ದರು. ಈ …

Read More »

ಕರಾವಳಿಯಲ್ಲಿ ಪನಾಮ ಧ್ವಜ ಹೊತ್ತ ಹಡಗು ಮುಳುಗಡೆ – ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ

ಭುವನೇಶ್ವರ: ಒಡಿಶಾದ ಪ್ಯಾರದೀಪ್ ಕರಾವಳಿಯಿಂದ  ಸುಮಾರು 240 ನಾಟಿಕಲ್ ಮೈಲು (444 ಕಿಮೀ) ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ  ಪನಾಮ ಧ್ವಜ ಹೊತ್ತ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 24 ಮಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. 22 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಬ್ಬಿಣದ ಅದಿರಿನ ಸರಕುಗಳನ್ನ ತುಂಬಿಕೊಂಡು ಒಡಿಶಾದಿಂದ ಸಿಂಗಾಪುರದ ಕಡೆಗೆ ಹಡಗು ಸಾಗುತ್ತಿತ್ತು. ಹಡಗು ಮುಂದಿನ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ಆ.20 ರಂದು ಪ್ಯಾರದೀಪ್‌ ಕರಾವಳಿಗೆ ತಲುಪಿತ್ತು. ಇಲ್ಲಿಂದ …

Read More »