ಬೆಂಗಳೂರು: ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆ ಪ್ರಕರಣದಲ್ಲಿ ನಮ್ಮ ಅಧಿಕಾರಗಳ ಕೈವಾಡವೂ ಇದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀಡಿಯೋ 2025 ಡಿಸೆಂಬರ್ನ ಹಳೆಯ ವೀಡಿಯೋ. ಪ್ರಜ್ವಲ್ ರೇವಣ್ಣ ಸೆಲ್ ಮೇಲೆ ಮಾತ್ರ ರೇಡ್ ಮಾಡ್ಸಿಲ್ಲ, ಇಡೀ ಜೈಲಿನ ಮೇಲೆ ದಾಳಿ ಮಾಡಿದ್ದೆವು. ತನಿಖೆ ಆಗುತ್ತಿದೆ, ಯಾರು ಕೊಟ್ರು ಅನ್ನೋದು ಬಯಲಿಗೆ ಬರಲಿದೆ. ಇದರಲ್ಲಿ ನಮ್ಮ ಅಧಿಕಾರಿಗಳ ಕೈವಾಡವೂ ಇದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಎಂದು ಪ್ರಶ್ನಿಸಿದರು.
20 ಕೋಟಿ ಖರ್ಚು ಮಾಡಿ ಎಐ ಕ್ಯಾಮೆರಾ ಪಡೆದಿದ್ದೇವೆ. ಎಐ ಕ್ಯಾಮೆರಾ ಅಳವಡಿಕೆ ಮಾಡಿಸ್ತೇವೆ. ಸಿಸ್ಟಮ್ನಲ್ಲೇ ನ್ಯೂನ್ಯತೆ ಇದೆ. ಕೆಲವರಿಗೆ ವಿವಿಐಪಿ ಟ್ರೀಟ್ಮೆಂಟ್ ಸಿಕ್ಕಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಿದ್ದೇವೆ ಎಂದರು.
Laxmi News 24×7