Breaking News

ಬೆಳಗಾವಿಯಲ್ಲಿ ಮ್ಯಾಗ್ನೆಟಾ ಹವಾ: ಟಿಳಕವಾಡಿಯಲ್ಲಿ ‘ಮ್ಯಾಗ್ ಕೆಫೆ’ 3ನೇ ಶಾಖೆ ಅದ್ಧೂರಿ ಉದ್ಘಾಟನೆ!

ಬೆಳಗಾವಿ: ನಗರದ ಜನಪ್ರಿಯ ಐಸ್‌ಕ್ರೀಮ್ ಬ್ರ್ಯಾಂಡ್ ‘ಮ್ಯಾಗ್ನೆಟಾ’ ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದ್ದು, ಸೋಮವಾರ ಸಂಜೆ ತಿಲಕವಾಡಿಯಲ್ಲಿ ತನ್ನ ಮೂರನೇ ‘ಮ್ಯಾಗ್ ಕೆಫೆ’ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿತು. ಬೆಳಗಾವಿ ಟಿಳಕವಾಡಿಯ ಮಂಗಳವಾರ ಪೇಟೆಯ ‘ಮಧುಕಮಲ್ ಎಟರ್ನಿಯಾ’ ಕಟ್ಟಡದಲ್ಲಿ ನಡೆದ ಈ ಸಮಾರಂಭದಲ್ಲಿ ಉದ್ಯಮಿಗಳು, ಗಣ್ಯರು ಹಾಗೂ ಸೃಜನಾತ್ಮಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪಾಯುಕ್ತರಾದ ನಾರಾಯಣ್ …

Read More »

ಧಾರವಾಡ ನೂತನ ಜಿಲ್ಲಾಧಿಕಾರಿಯಾಗಿ ಆರ್ ಸ್ನೇಹಲ್ ನಿಯೋಜನೆ

ಧಾರವಾಡ: ಜಿಲ್ಲಾಧಿಕಾರಿ ದಿವ್ಯ ಫ್ರಭು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಅವರ ಜಾಗಕ್ಕೆ ನೂತನ ಡಿಸಿಯಾಗಿ ಆರ್ ಸ್ನೇಹಲ್ ಅವರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದ ಆರ್ ಸ್ನೇಹಲ್ ಅವರು, ಈಗ ಧಾರವಾಡಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಯುಪಿಎಸ್‌ 2013ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇವರು ಅಖಿಲ ಭಾರತ ಮಟ್ಟದಲ್ಲಿ 410ನೇ ರ್ಯಾಂಕ್ ಪಡೆದಿದ್ದರು. ಕರ್ನಾಟಕ ಕೆಡರ್‌ನ …

Read More »

belagavi: ರೈತ ವಸತಿ ಮನೆಗಳಿಗೂ ಸತತ ವಿದ್ಯುತ್

ಐಗಳಿ: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಆದಾಯ ಮೂಲ ಅವಶ್ಯ. ಯುವಕರ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟು ಸ್ವಯಂ ಉದ್ಯೋಗಕ್ಕೆ ಆಸ್ಪದ ನೀಡಬೇಕು. ಗ್ರಾಮೀಣ ಪ್ರದೇಶದ ರೈತ ವಸತಿ ಮನೆಗಳಿಗೂ ನಿರಂತರ ವಿದ್ಯುತ್ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ನಾಲ್ಕು ವ್ಯಾಪಾರ ಮಳಿಗೆ ಹಾಗೂ ಭಜಂತ್ರಿ ವಸತಿ ಪ್ರದೇಶಕ್ಕೆ ನಿರಂತರ ಜ್ಯೋತಿ ಸಂಪರ್ಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಿ.ಎಸ್.ನೇಮಗೌಡ, ಬಿ.ಎಸ್.ಬಿರಾದಾರ, ನೂರಅಹ್ಮದ್ ಡೊಂಗರಗಾಂವ, ಎ.ಎಸ್.ಪಾಟೀಲ, ಬಸವರಾಜ …

Read More »

Belagavi:ಅಪಪ್ರಚಾರ ಮಾಡಿದವರಿಗೆ ನೋಟಿಸ್

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಹೊಸ ಆಡಳಿತ ಮಂಡಳಿಯ ಮೂರು ತಿಂಗಳ ಅವಧಿಯಲ್ಲಿ 500 ಕೋಟಿ ರೂ. ಠೇವಣಿ  ಹೆಚ್ಚಳವಾಗಿದೆ. ಆದರೆ, ಬ್ಯಾಂಕಿನ ವಹಿವಾಟು ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಡಾ.ಮಹಾಂತೇಶ ಕಡಾಡಿ ಸೇರಿ ನಾಲ್ವರಿಗೆ ಕಾನೂನು ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಕಡಿಮೆಯಾಗಿಲ್ಲ. ನಬಾರ್ಡ್ ನಿಯಮಗಳನ್ವಯ ರೈತರಿಗೆ, ಕೈಗಾರಿಕೆ, ಕೃಷಿಯೇತರ ಸಾಲ …

Read More »

ಬೆಳಗಾವಿ: ಹಳ್ಳಿಯಲ್ಲಿ ವಿಬಿ-ಜಿರಾಮ ಜಿ ಜಾಗೃತಿ ಸಭೆ

ಬೆಳಗಾವಿ: ಕೇಂದ್ರ ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ-ಜಿರಾಮ್‌ಜಿ) ಯೋಜನೆ ಕುರಿತು ಹಳ್ಳಿಗಳಲ್ಲಿ ಜಾಗೃತಿ  ಸಭೆ ನಡೆಸಲು ಸಂಘಟನಾತ್ಮಕ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ನಗರದ ಬಿಜೆಪಿ ಗ್ರಾಮೀಣ ಕಚೇರಿಯಲ್ಲಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ  ಮತಕ್ಷೇತ್ರವಾರು ಸಂಘನಾತ್ಮಕ ಸಭೆಯಲ್ಲಿ ವಿಬಿ-ಜಿರಾಮ್‌ಜಿ, ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಭೆ, ಗ್ರಾಪಂ, ಜಿಪಂ, ತಾಪಂ ಚುನಾವಣೆ ಸಿದ್ದತೆ ಹಾಗೂ ಪಕ್ಷ ಸಂಘಟನೆ ಕುರಿತು ಹಲವು ವಿಷಯ ಕುರಿತು …

Read More »

Belagavi: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿಗೆ ಶಿಕ್ಷೆ ಪ್ರಕಟ

ಬೆಳಗಾವಿ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ನಿವಾಸಿ ಅಕ್ಷಯ ಯಲ್ಲಪ ರಾವಳೆ( ೨೩),ಅಪರಾಧಿಗೆ ೫ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೧೦ ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ.   ಬಾಲಕಿಯನ್ನು ಅಪರಾಧಿಯು ೨೦೨೨ ರಲ್ಲಿ ಅಪಹರಣ ಮಾಡಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಬಾಲಕವೆಸಗಿ,ಜೀವ ಬೆದರಿಕೆಯೊಡ್ಡಿದ ಕುರಿತು ಕಿತ್ತೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. …

Read More »

ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ – `Railone App’ ಬಿಡುಗಡೆ

ನವದೆಹಲಿ: ಭಾರತೀಯ ರೈಲ್ವೆಯು ತನ್ನ ಅಧಿಕೃತ `ಆಲ್-ಇನ್-ಒನ್’ ಸೂಪರ್ ಆ್ಯಪ್ ಆದ `ರೈಲ್‌ಒನ್’ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಮೂಲಕ ಹಲವಾರು ಸೌಲಭ್ಯಗಳನ್ನು ಪ್ರಯಾಣಿಕರು ಒಂದೇ ಆ್ಯಪ್‌ನಡಿಯಲ್ಲಿ ಪಡೆದುಕೊಳ್ಳುತ್ತಾರೆ. ರೈಲ್ವೆ ಪ್ರಯಾಣವನ್ನು ಹೆಚ್ಚು ಸ್ಮಾರ್ಟ್, ವೇಗ ಮತ್ತು ತೊಂದರೆರಹಿತವಾಗಿಸುತ್ತದೆ. ರೈಲ್‌ಒನ್ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಟಿಕೆಟ್‌ಗಳು, ಕಾಯ್ದಿರಿಸದ ಟಿಕೆಟ್‌ಗಳು, ಪ್ಲಾಟ್ಫಾರ್ಮ್ …

Read More »

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ

ಬೆಂಗಳೂರು: ನಂದಿನಿ  ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ  ಅವರು ಆಯ್ಕೆಯಾಗಿದ್ದಾರೆ. ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌  ಅವರು ಎಕ್ಸ್‌ ಖಾತೆಯಲ್ಲಿ ಈ ಸಂಬಂಧ ಪೋಸ್ಟ್‌ ಹಂಚಿಕೊಂಡಿದ್ದಾರೆ. ಬಮೂಲ್‌ ಕುಟುಂಬಕ್ಕೆ ನಟಿ ಸುಧಾರಾಣಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ. ನಂಬಿಕೆಯ ಮೇಲೆ ನಿರ್ಮಿತವಾದ ನಂದಿನಿಯು ರೈತರ ಮೇಲಿನ ಬದ್ಧತೆ, ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರದೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಿಳಿಸಿದ್ದಾರೆ.

Read More »

ಸವದತ್ತಿ ಜಾತ್ರೆಗೆ ಹೋದ ಮಗ ಕಾಣೆ : ಊಟ ಬಿಟ್ಟು ಮಗನಿಗಾಗಿ ಕಾಯುತ್ತಿರುವ ತಾಯಿ ಹೃದಯ…!

ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಹೋಗಿ ವಾಪಸ್ ಮನೆಗೆ ಬರದೆ ಮಗ ಕಾಣೆಯಾಗಿದ್ದು ಇತ್ತ ಹೆತ್ತ ಕರುಳು ಮಗನಿಗಾಗಿ ಊಟ ಬಿಟ್ಟು ನಿದ್ರೆ ಮಾಡದೆ ಕಾಯುತ್ತಿರುವ ಘಟನೆ ಮನಕಲಕುವಂತಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಲಘುಮೇಶ್ವರ ಗ್ರಾಮದ ಲಕ್ಕಪ್ಪ ಭೀಮಪ್ಪ ಕೊಪ್ಪದ (40) ಕಾಣೆಯಾದ ವ್ಯಕ್ತಿ. ಈತನಿಗೆ ಮಾತನಾಡಲು ಬರುವುದಿಲ್ಲ. ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರೆಗೆ ಹೋಗಿದ್ದು ಈವರೆಗೂ ಮರಳಿ‌ ಮನೆಗೆ ಬಂದಿಲ್ಲ. ಮಗ ಮನೆಗೆ ಬರದ …

Read More »

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರಿಗೆ ಬೇಟಿ ಮಾಡಿದ ಆಹಾರ ಸಚಿವ ಕೆಹೆಚ್:- ಮುನಿಯಪ್ಪ

ಕನಿಷ್ಠ ಬೆಂಬಲ ಬೆಲೆ ಯೋಜನೆಯ ಬಾಕಿ ಮೊತ್ತ 1446 ಕೋಟಿ ರೂ ಗಳ ಬಿಡುಗಡೆಗೆ ಮನವಿ ನವದೆಹಲಿ:ಮಾನ್ಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ನವದೆಹಲಿಯ ಕೃಷಿ ಭವನದಲ್ಲಿ ನಡೆದ ಆಹಾರ ಇಲಾಖೆಯ ಸಭೆಯಲ್ಲಿ ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕರ್ನಾಟಕ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ಧಾನ್ಯಗಳು ಹಾಗೂ ಭತ್ತ/ಕಸ್ಟಮ್ ಮಿಲ್ಡ್ ರೈಸ್ (CMR) ಖರೀದಿ …

Read More »