Breaking News

ರಾಯಚೂರಿನಲ್ಲಿ ಅಕಾಲಿಕ ಮಳೆ – ಲಕ್ಷಾಂತರ ಮೌಲ್ಯದ ಸಜ್ಜೆ, ಜೋಳ ಹಾನಿ

ರಾಯಚೂರು: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವೆಡೆ ಸಜ್ಜೆ, ಜೋಳದ ಬೆಳೆ ಹಾಳಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಹೆಚ್.ಸಿದ್ದಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಯಾಗಿದೆ. ಹೆಚ್.ಸಿದ್ದಾಪುರ ಗ್ರಾಮದ ರೈತ ಕೃಷ್ಣಾಗೆ ಸೇರಿದ 7 ಎಕರೆ ಸಜ್ಜೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ನಷ್ಟದಿಂದ ರೈತ ಕಂಗಾಲಾಗಿದ್ದಾರೆ. ನೆಲಕ್ಕಚ್ಚಿದ ಬೆಳೆಯನ್ನ ಎತ್ತಿನಿಲ್ಲಿಸಿ ಉಳಿಸಿಕೊಳ್ಳಲು …

Read More »

ನಮ್ಗೂ ಸಚಿವ ಸ್ಥಾನ ಕೊಡಿ – ಸಂಪುಟ‌ ಪುನಾರಚನೆಗೆ 24‌ ಎಂಎಲ್‌ಸಿಗಳಿಂದ ಪತ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರು ಒತ್ತಾಯ ಮಾಡಿ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ್ದರು. ಈ ಬೆನ್ನಲ್ಲೇ 24 ಮಂದಿ ವಿಧಾನ ಪರಿಷತ್‌ ಸದಸ್ಯರೂ  ಪತ್ರ ಬರೆದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾದ ಪರಿಷತ್‌ ಸದಸ್ಯರು, ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ 24 ಎಂಎಲ್‌ಸಿಗಳು ಸಹಿ ಮಾಡಿದ ಪತ್ರವನ್ನ ಖರ್ಗೆ …

Read More »

ನಮ್ಮ ಸರ್ಕಾರ ಎಲ್ಲಾ ಹುದ್ದೆಗಳ ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳಕ್ಕೂ ಕ್ರಮವಹಿಸಿದೆ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ನಮ್ಮ ಸರ್ಕಾರ ಎಲ್ಲಾ ಹುದ್ದೆ  ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ  ತಿಳಿಸಿದ್ದಾರೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ  ಕುರಿತು ಬೆಂಗಳೂರಿನಲ್ಲಿ ಸಚಿವರು ಮಾತನಾಡಿದರು. ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ದ ಇದೆ. ಯುವಕರ ಸಮಸ್ಯೆಗಳ ಅರಿವಿದೆ, ವಿಪಕ್ಷದಲ್ಲಿ ಇದ್ದಾಗಲೂ ನಾವು ಸ್ಪಂದಿಸಿದ್ದೇವೆ ಈಗಲೂ 35-40 ಸಾವಿರ ಹುದ್ದೆ ತುಂಬಿದ್ದೇವೆ. ಈಗಲೂ ಒಳ ಮೀಸಲಾತಿ ಸಮಸ್ಯೆ ಸ್ವಲ್ಪ ಇದೆ, …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗನವಾಡಿ ಮಕ್ಕಳಿಗೆ ಎಕ್ಸ್‌ಪೈರ್ಡ್‌ ಸಿರಿಧಾನ್ಯ ಲಡ್ಡು ವಿತರಣೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗನವಾಡಿ ಮಕ್ಕಳಿಗೆ ಎಕ್ಸ್‌ಪೈರ್ಡ್‌ ಸಿರಿಧಾನ್ಯ ಲಡ್ಡು ಪೂರೈಕೆ ಮಾಡಲಾಗಿದೆ. ಅಂಗನವಾಡಿ ಮಕ್ಕಳ ಆರೋಗ್ಯದ ಜೊತೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ಚೆಲ್ಲಾಟವಾಡುತ್ತಿದ್ದಾರೆ. ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲೆಂಬ ಉದ್ದೇಶಕ್ಕೆ ಮಿಲೆಟ್ ಲಡ್ಡು ವಿತರಣೆ ಮಾಡಲಾಗುತ್ತಿದೆ. ಆದರೆ ಪೌಷ್ಟಿಕ ಆಹಾರ ವಿತರಣೆಯಲ್ಲೇ ಭಾರಿ ಅಕ್ರಮ ಬೆಳಕಿಗೆ ಬಂದಿದೆ. ಬೆಳಗಾವಿಯ ಮೂರು ಅಂಗನವಾಡಿ ಕೇಂದ್ರಗಳಿಗೆ ಕನ್ನಡ ಹೋರಾಟಗಾರ್ತಿ ಕಸ್ತೂರಿಭಾವಿ ಭೇಟಿ ನೀಡಿದ್ದು, ಭೇಟಿಯ …

Read More »

ಬೆಳಗಾವಿ: ಗರ್ಭಿಣಿ ಪತ್ನಿಗೆ ಚಾಕು ಇರಿದು ಆತ್ಮಹತ್ಯೆ ಮಾಡಿಕೊಂಡ ಪತಿ

ಬೆಳಗಾವಿ: ಗರ್ಭಿಣಿ ಪತ್ನಿಗೆ ಚಾಕು ಇರಿದು ಬಳಿಕ ಬಾವಿಗೆ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಎಲ್ಲರನ್ನು ಬೆಚ್ಚಿಬಿಳಿಸುವಂತೆ ಮಾಡಿದೆ. ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದೆ. ರಾಮದುರ್ಗ ಪಟ್ಟಣದ ನಿವಾಸಿ ಉಮೇಶ ಬಡಿಗೇರ (34) ಮೃತ ದುರ್ದೈವಿ. ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಉಮೇಶ ಸಾರಾಯಿ ಕುಡಿದು ಬಂದು ಜಗಳ ಮಾಡುತ್ತಿದ್ದ. ಮೊನ್ನೆ ಮತ್ತೆ ಜಗಳ ಆಗಿದೆ. ಈ ವೇಳೆ ಜಗಳ ವಿಕೋಪಕ್ಕೆ …

Read More »

ಕಳ್ಳಬಟ್ಟಿ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಹೇಳಿಕೆ

ಬಾಗಲಕೋಟೆ: ಕಳ್ಳಬಟ್ಟಿ ಸಾರಾಯಿ ತಯಾರಿ, ಸಾಗಾಟ ಮತ್ತು ಮಾರಾಟ ಸಂಪೂರ್ಣವಾಗಿ ತಡೆಗಟ್ಟಲು ಪರಿಣಾಮಕಾರಿಯಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಎಂ.ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ  ಕಳ್ಳಬಟ್ಟಿ ಸಾರಾಯಿ ನಿರ್ಮೂಲನೆ ಕುರಿತು ರಚಿಸಲಾದ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಕಳ್ಳಬಟ್ಟಿ ಸಾರಾಯಿ ನಿರ್ಮೂಲನೆಗೆ ಸಂಬಂಧಪಟ್ಟ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಕಾರ್ಯಾಚರಣೆ, ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಅನುಮಾನಾಸ್ಪದ  ಕಳ್ಳಬಟ್ಟಿ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ …

Read More »

ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಮಸೀದಿಯಲ್ಲಿ ಇದ್ದರವರೆಲ್ಲರ ಮೇಲೂ ಪ್ರಕರಣ ದಾಖಲಿಸಿ

ಬಾಗಲಕೋಟೆ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ವೇಳೆ ಪಂಕಾ ಮಸೀದಿಯಲ್ಲಿ ಇದ್ದವರೆಲ್ಲರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೆರೆ ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಯಲ್ಲಿ ಸೇರಲು ಅಷ್ಟೊಂದು ಜನರಿಗೆ ಅವಕಾಶ ಮಾಡಿಕೊಟ್ಟ ಪಂಕಾ ಮಸೀದಿಯ ಕಮಿಟಿಯವರೆಲ್ಲರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು. ಆ ಮಸೀದಿಯಲ್ಲಿ ಸೇರುವವರಿಂದಲೇ ಈ ಹಿಂದೆಯೂ …

Read More »

ರಸ್ತೆ ಮೇಲೆ ಕಸ ಎಸೆದಿದ್ದಕ್ಕೆ 1.50 ಲಕ್ಷ ರೂ. ದಂಡ ವಸೂಲಿ

ಬೆಳಗಾವಿ: ಮಹಾನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪಾಲಿಕೆ ಅಧಿಕಾರಿ, ಸಿಬ್ಬಂದಿ ರಸ್ತೆ ಮೇಲೆ ಕಸ ಎಸೆಯುವವರಿಗೆ, ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ಮಾಡದವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಪಾಲಿಕೆ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಸ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ  ನಿವಾಸಿಗಳು, ಹೋಟೆಲ್, ಅಂಗಡಿಕಾರರು ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡದಿರುವ ಮತ್ತು ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಕಸ …

Read More »

ಮಹಾರಾಷ್ಟ್ರದ ಪಾಂಡುರಂಗ ಸಿಸಿ ತಂಡಕ್ಕೆ ಕ್ರಿಕೆಟ್ ಟ್ರೋಫಿ

ಬೆಳಗಾವಿ: ನಗರದಲ್ಲಿ ಎರಡು ವಾರಗಳಿಂದ ನಡೆದಿದ್ದ ಮುರುಘೇಂದ್ರಗೌಡ ಪಾಟೀಲ ಅಖಿಲ ಭಾರತೀಯ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಭಾನುವಾರ ಅಂತಿಮ ಹಣಾಹಣಿಯಲ್ಲಿ ಮಹಾರಾಷ್ಟ್ರದ ಪಾಂಡುರಂಗ ಸಿಸಿ ತಂಡ ಬೆಳಗಾವಿಯ ಸಾಯಿರಾಜ ವಾರಿಯರ್ಸ್‌ ತಂಡವನ್ನು ಸೋಲಿಸುವ ಮೂಲಕ ಟ್ರೋಫಿ ಮತ್ತು 5 ಲಕ್ಷ ರೂ. ನಗದು ಗೆದ್ದುಕೊಂಡಿದೆ. ನಗರದ ಸರ್ದಾರ್ಸ್‌ ಮೈದಾನದಲ್ಲಿ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಒಟ್ಟು 40 ತಂಡ ಭಾಗವಹಿಸಿದ್ದವು. ಸಾಯಿರಾಜ ತಂಡ …

Read More »

ಧಾರವಾಡದಲ್ಲಿ ಉಗ್ರ ಹೋರಾಟ ಬೆನ್ನಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು:ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾಕಾಶಿ ಧಾರವಾಡದಲ್ಲಿ ಈ ಹಿಂದೆಯೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದು. ಆದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿದ್ದರಿಂದ ರೊಚ್ಚಿಗೆದ್ದ ಯುವಕರು ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಯುವಕರ ಕಿಚ್ಚು ಜೋರಾಗುತ್ತಿದ್ದಂತೆಯೇ ಇತ್ತ ಕರ್ನಾಟಕ ಆರ್ಥಿಕ ಇಲಾಖೆ  24 ಸಾವಿ ಹುದ್ದೆಗಳ ನೇಮಕಾತಿಗೆ ನೇಮಕಾತಿಗೆ ಮಂಜೂರಾತಿ ನೀಡಿದೆ. ಕರ್ನಾಟಕದ ವಿವಿಧ ಒಟ್ಟು 32 ಇಲಾಖೆಯಲ್ಲಿ 24,300 ಹುದ್ದೆಗಳ …

Read More »