ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರಿಗೆ ಬಿಎಂಡಬ್ಲೂ ಆರ್‌ಆರ್ ಬೈಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ದೇವನಹಳ್ಳಿ ತಾಲೂಕು ಚಿಕ್ಕಸಣ್ಣೆ ಗೇಟ್ ಸಿಗ್ನಲ್ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ ನರಗನಹಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ (25) ಸಾವನ್ನಪ್ಪಿದ ಯುವಕ. ಬಿಎಂಡಬ್ಲೂ ಆರ್‌ಆರ್ ಬೈಕ್ ಸವಾರ ರಾಕೇಶ್, ಅಪಘಾತದ ಬಳಿಕ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ದೇವನಹಳ್ಳಿ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
Read More »ಹಜ್ ಯಾತ್ರಿಕರಿಗೆ ಎರಡು ಹಂತದ ವೈದ್ಯಕೀಯ ತಪಾಸಣೆ ಕಡ್ಡಾಯ
ಬೆಂಗಳೂರು: ಹಜ್ ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಮಹತ್ವದ ಸೂಚನೆ ನೀಡಿದೆ. ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರಿಗೂ ಎರಡು ಹಂತಗಳ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಮೊದಲ ಹಂತದ ಪ್ರಾಥಮಿಕ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ರಾಜ್ಯ ಹಜ್ ಯಾತ್ರಿಕರ ಆರೋಗ್ಯ ಮತ್ತು ಲಸಿಕಾ ಶಿಬಿರದ ರಾಜ್ಯ ನೋಡಲ್ ಅಧಿಕಾರಿ ಡಾ. ಮಹಮೂದ್ …
Read More »ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ವೇಳೆ ಗೋಪುರದಿಂದ ಬಿದ್ದು ಯುವಕ ದುರ್ಮರಣ
ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಿದ್ದ ವೇಳೆ ಗೋಪುರದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ಗುಡಿಬಂಡೆ ಪಟ್ಟಣದ 3ನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹ್ಮತ್ ಮೃತ ದುರ್ದೈವಿ. ಶ್ರಾವಣ ಶನಿವಾರದ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿದ್ಯುತ್ …
Read More »5 ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ನಲ್ಲೇ 172 ವಿದ್ಯಾರ್ಥಿಗಳ ವಾಸ – 92 ಗಂಡು ಮಕ್ಕಳಿಗೆ ಐದೇ ಶೌಚಾಲಯ, 80 ಹೆಣ್ಣು ಮಕ್ಕಳಿಗೆ ಇಲ್ಲ ಕನಿಷ್ಠ ಸೌಕರ್ಯ
ಹಾಸನ: ದನದ ಕೊಟ್ಟಿಗೆಯಂತಿರುವ ಎರಡು ಶೆಡ್‌ಗಳಲ್ಲಿ ವಸತಿ ಶಾಲೆ ನಡೆಸುತ್ತಿದ್ದು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿರುವ ಘಟನೆ ಹಾಸನ ತಾಲೂಕಿನ, ಶಾಂತಿಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. 92 ಬಾಲಕರು ಹಾಗೂ 80 ಬಾಲಕಿಯರು ಅಕ್ಷರಶಃ ನರಕದಲ್ಲಿ ದಿನ ಕಳೆಯುತ್ತಿದ್ದು, ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಲವು ಬಾರಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು …
Read More »ಅರಣ್ಯ ಸಂಚಾರಿದಳದಿಂದ ದಿಢೀರ್ ದಾಳಿ – 21 ಕೆಜಿ ಜಿಂಕೆ ಮಾಂಸ ವಶ, ಅರೋಪಿಗಳು ಪರಾರಿ
ಶಿವಮೊಗ್ಗ: ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಬಳಿ ಅರಣ್ಯ ಸಂಚಾರಿದಳದ ಸಿಬ್ಬಂದಿ ದಾಳಿ ನಡೆಸಿ 21 ಕೆಜಿ ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ. ದುಷ್ಕರ್ಮಿಗಳು ಜಿಂಕೆಯನ್ನು ಬೇಟೆಯಾಡಿ ಎರ್ಟಿಗಾ ಕಾರಿನ ಮೂಲಕ ಮಾಂಸ ಸಾಗಿಸುತ್ತಿದ್ದರು. ಈ ಬಗ್ಗೆ ಮಡಿಕೇರಿಯ ಅರಣ್ಯ ಸಂಚಾರಿದಳದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್ ಅವರ ಮಾರ್ಗದರ್ಶನದಲ್ಲಿ ಸಾಗರದ ಅರಣ್ಯ ಸಂಚಾರಿದಳ ಪಿಎಸ್ಐ ಕೆ. ವಿನಾಯಕ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಕಾರು ಹಾಗೂ ಮಾಂಸವನ್ನು …
Read More »ಫಸ್ಟ್ ಟೈಮ್ ವಿಮಾನ ಏರಿದ ಸರ್ಕಾರಿ ಶಾಲಾ ಮಕ್ಕಳು; ಮುಂಬೈ ಪ್ರವಾಸಕ್ಕೆ ಫುಲ್ ಖುಷ್!
ಮುಂಬೈ ಪ್ರವಾಸದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳಿಗೆ ಮಕ್ಕಳು ಭೇಟಿ ನೀಡಲಿದ್ದಾರೆ. ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಧನೆ ಹಾಗೂ ಚರಿತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರವಾಸ ಆಯೋಜಿಸಲಾಗಿದೆ. ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ ಗಿರೀಶ್ ಅವರು ಮಕ್ಕಳಿಗಾಗಿ ಈ ಪ್ರವಾಸ ಆಯೋಜಿಸಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನ ಮಕ್ಕಳು ವೀಕ್ಷಿಸಲಿದ್ದಾರೆ. …
Read More »GBA ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಗೆ ಹಾನಿ – 8 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಗ್ಯಾಸ್
ಬೆಂಗಳೂರು: ಹೆಚ್‌ಎಎಲ್ ಪೊಲೀಸ್ ಠಾಣೆಯ ಸಮೀಪ GBA ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಗೆ ಹಾನಿಯಾಗಿ ಗ್ಯಾಸ್ ಸೋರಿಯಾಗುತ್ತಿದೆ. ಜಿಬಿಎ ಕಾಮಗಾರಿ ವೇಳೆ ಮನೆಗಳಿಗೆ ಸಂಪರ್ಕ ನೀಡುವ ಭೂಗತ ಗೇಲ್ ಗ್ಯಾಸ್ ಪೈಪ್‌ಗೆ ಡ್ಯಾಮೆಜ್ ಉಂಟಾಗಿದೆ. ಇದರಿಂದ 8 ಅಡಿಯಷ್ಟು ಎತ್ತರಕ್ಕೆ ಗ್ಯಾಸ್ ಚಿಮ್ಮುತ್ತಿದೆ. ಗ್ಯಾಸ್ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಗ್ಯಾಸ್ ಸೋರಿಕೆಯ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ದೂರದಲ್ಲಿಯೇ ವಾಹನಗಳು ಸಂಚರಿಸುತ್ತಿವೆ.
Read More »ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಿದ ರೈತರ ಪರಿಹಾರಕ್ಕೆ ಕನ್ನ – ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ವಂಚನೆಗೆ ಯತ್ನ
ರಾಮನಗರ: ಬಿಡದಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್ ಶಿಪ್ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ಅದನ್ನೇ ಬಂಡವಾಳ ಮಾಡಿಕೊಂಡು ವಂಚಿಸಲು ಯತ್ನಿಸಿದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 5 ಕೋಟಿ ರೂ ಪರಿಹಾರ ಹಣವನ್ನು ದೋಚಲು ಯತ್ನಿಸಿದ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಆರೋಪಿಗಳಾದ ವೆಂಕಟೇಶ್, ರಾಜಶೇಖರ್, ಶಂಕರ್ ರೆಡ್ಡಿ …
Read More »ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸಲ್ಲ, ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ: ಪ್ರಿಯಾಂಕ್ ಖರ್ಗೆ
ಕಲಬುರಗಿ: ಕೆಪಿಎಸ್‌ಸಿ ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಬಲಿಷ್ಟವಾದರು, ಯಾವುದೇ ಪಕ್ಷದವರಾದರು ಸರಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ ಎಂದ ಅವರು, ತಾವೇ ರಾಜ್ಯದ ಗೃಹ ಸಚಿವರಿರುವಾಗ ಯಾವುದೇ …
Read More »ಪತ್ನಿ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕೊಂದು ಸಂಪಲ್ಲಿ ಬಚ್ಚಿಟ್ಟ ಪತಿರಾಯ
ಕೋಲಾರ: ಪತ್ನಿ ಜೊತೆ ಅಕ್ರಮ ಸಂಬಂಧ ಹಿನ್ನೆಲೆ ಪತಿ, ಪ್ರಿಯಕರನನ್ನು ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಬಳಿ ನಡೆದಿದೆ. ಸೊಣ್ಣೇನಹಳ್ಳಿ ವೆಂಕಟೇಶ್ (36) ಕೊಲೆಯಾದ ಪ್ರಿಯಕರ. ಸುರೇಶ್ ಪತ್ನಿ ಜೊತೆಗೆ ವೆಂಕಟೇಶ್ ಅಕ್ರಮ ಸಂಬಂದ ಹೊಂದಿದ್ದ ಎಂಬ ಕಾರಣಕ್ಕೆ ಸುರೇಶ್ ಹಾಗೂ ಸ್ನೇಹಿತ ಸಂತೋಷ್ ಇಬ್ಬರೂ ಎಣ್ಣೆ ಪಾರ್ಟಿ ಮಾಡಿ ವೆಂಕಟೇಶ್ ಕೊಲೆಗೈದಿದ್ದಾರೆ. ಬಳಿಕ ವೆಂಕಟೇಶ್ ಮೃತದೇಹವನ್ನು ಸಂಪ್‌ಗೆ …
Read More »
Laxmi News 24×7