ಬೆಳಗಾವಿ:ನಗರದಲ್ಲಿ ಪ್ರಯಾಣಿಕರಿಂದ ಮನಬಂದಂತೆ ದರ ವಸೂಲಿ ಮಾಡುವ ಆಟೋರಿಕ್ಷಾಗಳಿಗೆ ಕಡಿವಾಹಣ ಹಾಕಬೇಕು. ಮೀಟರ್ ಆಧಾರದಲ್ಲೇ ಎಲ್ಲ ಆಟೋಗಳು ಸಂಚರಿಸಬೇಕು ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ ರೋಷನ್‌ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಮುಂದಿನ 15 ದಿನಗಳೊಳಗೆ ನಗರದ ಎಲ್ಲಾ ಆಟೋರಿಕ್ಷಾಗಳು ಮೀಟರ ಅಳವಡಿಸಿಕೊಂಡು ನಿಗದಿತ ದರದಂತೆ ಸೇವೆ ನೀಡಬೇಕು.ಮೊದಲ 1.6 ಕಿಲೋಮೀಟರ್‌ಗೆ …
Read More »ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಡಲು ಒತ್ತಾಯ
ಬೆಳಗಾವಿ:ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭಾ ಬಲದಂಡೆ ಕಾಲುವೆಗೆ 2ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸವದತ್ತಿ ತಾಲೂಕಿನ ವಿವಿಧ ಗ್ರಾಮಸ್ಥರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಬಾರಿ ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಹಿನ್ನೆಲೆ ಕೆರೆ ಕಟ್ಟೆಗಳು ನೀರಿಲ್ಲದೆ ಬತ್ತುತ್ತಿವೆ. ಅಂತರ್ಜಲ ಮಟ್ಟ ತೀವ್ರ ಕುಸಿತದಿಂದಾಗಿ ಕೊಳವೆ ಬಾವಿಗಳು ಬಂದ್ ಆಗುತ್ತಿವೆ. ಇದರಿಂದಾಗಿ ಗ್ರಾಮಗಳಲ್ಲಿ ಜನ ಜಾನುವಾರಗಳಿಗೆ ಕುಡಿಯುವ …
Read More »ಡಾ.ಕೋರೆ ಹುಟ್ಟು ಹಬ್ಬದ ಅಂಗವಾಗಿ ಕಾರ್ಯಕ್ರಮ ಆಯೋಜನೆ
ಚಿಕ್ಕೋಡಿ: ಶಿಕ್ಷಣ,ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುವ ಮೂಲಕ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರಾದ ಡಾ. ಪ್ರಭಾಕರ ಕೋರೆ ಅವರ ೭೯ನೇ ಜನ್ಮದಿನ ಅಂಗವಾಗಿ ಅ.೧ ರಂದು ವಿವಿಧ ಸಾಮಾಜಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ.ಪ್ರಭಾಕರಣ್ಣಾ ಕೋರೆ ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ಮತ್ತು ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್.ಪಾಟೀಲ ತಿಳಿಸಿದರು. ತಾಲೂಕಿನ ಅಂಕಲಿ ಶಿವಾಲಯದ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು …
Read More »ರಕ್ಕಸಕೊಪ್ಪ ಜಲಾಶಯ ಭರ್ತಿ
ಬೆಳಗಾವಿ : ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೆಲ ದಿನದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಸಂಗ್ರಹ ನದಿಗಳು ಮೈದುಂಬಿ ಹರಿಯುತ್ತಿವೆ,ಇದೀಗ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ರಕ್ಕಸಕೊಪ್ಪ ಜಲಾಶಯ ಭರ್ತಿ: ಮಳೆಯಿಂದಾಗಿ ಕೃಷ್ಣಾ,ವೇದಗಂಗಾ,ದೂಧಗಂಗಾ ,ಹಿರಣ್ಯಕೇಶಿ,ಘಟಪ್ರಭಾ,ಮಲಪ್ರಭಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.ಮಾರ್ಕೆಂಡಯ ನದಿ ನೀರಿನಿಂದ 2475 ಅಡಿ ಸಾಮರ್ಥ್ಯದ ರಕಸಕೊಪ್ಪ ಜಲಾಶಯ ಭರ್ತಿ ಹಂತ ತಲುಪಿದ್ದು,ಬುಧವಾರ 2473 ಅಡಿ ನೀರು ಸಂಗ್ರಹವಾಗಿದ್ದು,ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ. ಕೃಷ್ಣಾ …
Read More »ರಾಧಾಕೃಷ್ಣ ಯೋಜನೆಗೆ ಹೆಚ್ಚಿದ ವಿರೋಧ
ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಹಿನ್ನೀರನ್ನು ಇಚಲಕರಂಜಿಗೆ ಸಾಗಿಸಲು ಮಹಾರಾಷ್ಟç ಸರ್ಕಾರ ಯೋಜನೆ ರೂಪಿಸಿದೆ. ಕಲ್ಲೋಳ ಬ್ಯಾರೇಜ್ ಹಿನ್ನೀರಿನ ಕರ್ನಾಟಕದ ಗಡಿ ಗ್ರಾಮಗಳಿಗೆ ಆಯ್ತು, ಮಹಾರಾಷ್ಟçದ ಕೊಲ್ಲಾಪುರ ಜಿ±್ಲೆ ಶಿರೋಳ ತಾಲೂಕಿನ ದಾನವಾಡ, ದತ್ತವಾಡ, ಸೈನಿಕ ಟಾಕಳಿ, ಟಾಕಳಿವಾಡಿ, ಅಕ್ಕಿವಾಟ, ಖಿದರಾಪುರ, ಘೋಸರವಾಡ, ರಾಜಾಪುರ, ಮಧುರೇವಾಡಿ, ಹೆರವಾಡ ಮತ್ತು ತೆರವಾಡ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಜಲ ಮೂಲವಾಗಿದೆ. ಜಾರಿಯಾದರೆ ಈ ಎಲ್ಲ ಗ್ರಾಮಗಳಲ್ಲಿ ನೀರಿನ ಕೊರತೆಯಾಗಲಿದೆ ಎಂಬ ಆಕ್ರೋಶ ಗಡಿ …
Read More »ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ
ಬೆಳಗಾವಿ: 2026-27 ನೇ ಸಾಲಿನಲ್ಲಿ ಹೈಟೆಕ್ ಹಾರ್ವೆಸ್ಟರ್ ಹಟ್ಗಳನ್ನು ಅನುಷ್ಠಾನ ಮಾಡಲು ಚಾಲ್ತಿಯಲ್ಲಿರುವ ನೋಂದಾಯಿತ ಸಂಘ-ಸಂಸ್ಥೆಗಳು (FPO ಗಳನ್ನೊಳಗೊಂಡಂತೆ)/ಯಂತ್ರ ಧಾರೆ ಕೇಂದ್ರಗಳು/ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲು అభి ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಷ್ಟ 31, 2026 ಕೊನೆಯ ದಿನವಾಗಿರುತ್ತದೆ, ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50 ರಂತೆ ಪ.ಜಾ/ಪ.ಪಂ. ವರ್ಗದ ರೈತರಿಗೆ ಗರಿಷ್ಠ ಶೇ.70 ರಂತೆ ಹಾಗೂ ಸಂಘ-ಸಂಸ್ಥೆಗಳಿಗೆ ಗರಿಷ್ಠ ಶೇ.70 ರಂತೆ ಸಹಾಯಧನವನ್ನು ನೀಡಲಾಗುವುದು. ಬೆಳಗಾವಿ ಜಿಲ್ಲೆಗೆ …
Read More »ಕೇವಲ ಅಕ್ಷರ ಕಲಿಯುವುದಷ್ಟೇ ಶಿಕ್ಷಣವಲ್ಲ; ಸನಾತನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದೇ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಾಲೆಯ ಮೂಲ ಉದ್ದೇಶ: ಶಾಸಕಿ ಶಶಿಕಲಾ ಜೊಲ್ಲೆ
ನಿಪ್ಪಾಣಿಯ ಶ್ರೀ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಶಾಲೆ ನಿಪ್ಪಾಣಿ ನಾಂಗನೂರ ಶಾಲೆಯಲ್ಲಿ “ತಂದೆ-ತಾಯಿಯೇ ಪ್ರತ್ಯಕ್ಷ ದೇವರು” ಎಂಬ ನಂಬಿಕೆಗೆ ಸಾಕ್ಷಿಯಾಯಿತು.ಗುರು ಪೂರ್ಣಿಮಾ ಆಚರಣೆ ನಿಮಿತ್ಯ ವಿದ್ಯಾದೇವಿ ಸರಸ್ವತಿ ಮಾತೆ ಹಾಗೂ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ,ಯವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಈ ಶುಭ ಸಂದರ್ಭದಲ್ಲಿ ನಮ್ಮ ಪ್ರೀತಿಯ ಸುಪುತ್ರ ಜ್ಯೋತಿಪ್ರಸಾದ ಮತ್ತು ಸೊಸೆ ಪ್ರಿಯಾ ಅವರು ಶಶಿಕಲಾ ಜೊಲ್ಲೆ ಯವರು …
Read More »ಕಿತ್ತೂರು ರಾಣಿ ಚೆನ್ನಮ್ಮ ವಿವಿಗೆ 26 ನೇ ಸ್ಥಾನ
ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಗ್ರೀನ್ ಮೆಂಟರ್ಸ್ ಸಂಸ್ಥೆಯು ನಡೆಸಿದ ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕ 2026 ರಲ್ಲಿ ಭಾಗವಹಿಸಿ, 100 ಅಂಕಗಳಲ್ಲಿ 90.7 ಅಂಕಗಳನ್ನು ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 26ನೇ ಸ್ಥಾನವನ್ನು ಪಡೆದು ಗಮನಾರ್ಹ ಸಾಧನೆ ಮಾಡಿದೆ. ಈ ಮಹತ್ವದ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ, ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಹಯೋಗದಲ್ಲಿ ಎನ್‌ಐಆರ್‌ಎಫ್/ಎನ್‌ಜಿಯುಆರ್ ಸಮಿತಿಯು ಕುವೆಂಪು ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು …
Read More »ಮೀಟರ್ ಆಧಾರಿತ ಆಟೋ ಸಂಚಾರ ಕಡ್ಡಾಯ: ಡಿಸಿ ಮೊಹಮ್ಮದ್ ರೋಷನ್
ಬೆಳಗಾವಿ: ಬೆಳಗಾವಿ ನಗರದಲ್ಲಿ ಆಟೋ ರಿಕ್ಷಾಗಳು ಕಡ್ಡಾಯವಾಗಿ ಮೀಟರ್ ಆಧಾರದಲ್ಲಿ ಸಂಚರಿಸಬೇಕು. ನಗರ ವ್ಯಾಪ್ತಿಯಲ್ಲಿ ಪ್ರಾರಂಭಿಕವಾಗಿ 1.6 ಕಿಲೋ ಮೀಟರ್ಗೆಗೆ ₹37 ತದನಂತರ ಪ್ರತಿ ಕಿಲೋ ಮೀಟರ್‌ಗೆ 15 ರೂ. ದರವನ್ನು ಅನುಸರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು …
Read More »ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಅಳವಡಿಸಿಕೊಳ್ಳಬೇಕು; ರವಿ ಕೋಟಾರಗಸ್ತಿ
ಬೆಳಗಾವಿ: ವಿದ್ಯಾರ್ಥಿಗಳು ಜಾನಪದ ಕಲೆ, ಸಾಹಿತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಬಿಡುವಿನ ಸಮಯದಲ್ಲಿ ಮನರಂಜನೆಗಾಗಿ ಜಾನಪದ ಸಾಹಿತ್ಯ, ನೃತ್ಯ ನಾಟಕಗಳನ್ನು ಮಾಡುತ್ತಿದ್ದರು. ಇದು ಕೇವಲ ಮನರಂಜನೆಯಾಗಿರದೇ ನಮ್ಮ ನಾಡಿನ ನಡೆ ನುಡಿ ಆಚಾರ ವಿಚಾರ ಹಾಗೂ ಹಳ್ಳಿಯ ಸೊಗಡನ್ನು ಸಾರುವಂತಾಗಿರುತ್ತದೆ ಎಂದು ಹಿರಿಯ ಸಾಹಿತಿ ರವಿ ಕೋಟಾರಗಸ್ತಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಾಂತೇಶ ನಗರ ರಹವಾಸಿ ಸಂಘದ ಶಿಕ್ಷಣ ಮಹಾವಿದ್ಯಾಲಯ …
Read More »
Laxmi News 24×7