Breaking News

ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವ ನಕಲಿ ಪತ್ರಕರ್ತರ ವಿರುದ್ಧ ಸಂಘಟಿತ ಹೋರಾಟ: ಯಳ್ಳೂರ ಇಬ್ಬರ ವಿರುದ್ಧ FIR

Spread the love

ಬೆಳಗಾವಿ: “ತಾವು ಪತ್ರಕರ್ತರೆಂದು ಹೇಳಿಕೊಂಡು ತಹಸೀಲ್ದಾರ್, ಪಿಡಿಒ, ಕಂದಾಯ ನಿರೀಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವ ನಕಲಿ ಮತ್ತು ಸ್ವಯಂಘೋಷಿತ ಪತ್ರಕರ್ತರ ವಿರುದ್ಧ ನಮ್ಮ ಸಂಘದಿಂದ ಸಂಘಟಿತ ಹೋರಾಟ ನಡೆಸಲಾಗುತ್ತದೆ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಯಳ್ಳೂರ ಮಾಹಿತಿ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಗೃಹದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, “ಕೆಲ ದಿನಗಳ ಹಿಂದೆ ಪ್ರಜಾ ನೆರಳು ಎಂಬ ದಿನಪತ್ರಿಕೆ ಮತ್ತು ಲೋಕಹಿತ ನ್ಯೂಸ್ ಪೋರ್ಟಲ್ ವರದಿಗಾರರು ಸೇರಿಕೊಂಡು ತಹಸೀಲ್ದಾರ್ ದುಂಡಪ್ಪ ಕೋಮಾರ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ ತಂಗೊಳ್ಳಿ, ಕಂದಾಯ ನಿರೀಕ್ಷಕ ರಮೇಶ ಕೋಲಕಾರ ಅವರಿಗೆ ಬೆದರಿಕೆ ಹಾಕಿ 2.5 ಲಕ್ಷ ಹಣ ನೀಡುವಂತೆ ಆಗ್ರಹಿಸಿದ್ದಾರೆ. ಹಣ ನೀಡದಿದ್ದರೆ ನಿಮ್ಮ ವಿರುದ್ಧ ತಮ್ಮ ಪತ್ರಿಕೆಗಳಲ್ಲಿ ವರದಿ ಪ್ರಕಟಿಸುವುದಾಗಿ ಹೇಳಿದ್ದು, ಲೋಕಹಿತ ಮರಾಠಿ ನ್ಯೂಸ್ ಪೋರ್ಟಲ್ ನಲ್ಲಿ ಈ ಅಧಿಕಾರಿಗಳ ವಿರುದ್ಧ ಹುರುಳಿಲ್ಲದ ವರದಿ ಪ್ರಕಟಿಸಿ ಅವರ ತೇಜೋವಧೆಗೆ ಯತ್ನಿಸಿದ್ದಾರೆ. ಈ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಕ್ರೋಢಿಕರಿಸಿ ಪ್ರಜಾ ನೆರಳು ವರದಿಗಾರ ಸಾಗರ ಕೋಳೆಕರ ಮತ್ತು ಲೋಕಹಿತ ನ್ಯೂಸ್ ಪೋರ್ಟಲ್ ವರದಿಗಾರ ವಿಲಾಸ ಕವಠಣಕರ ಅವರ ವಿರುದ್ಧ ಬೆಳಗಾವಿ ಡಿ.ಸಿ ಮತ್ತು ಎಸ್.ಪಿ ಅವರಿಗೆ ದೂರು ಸಲ್ಲಿಸಲಾಗಿದೆ ಮತ್ತು ಇವರಿಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಅಧಿಕಾರಿಗಳಿಗೆ ಅನಗತ್ಯ ತೊಂದರೆ ನೀಡುತ್ತಿರುವ ಸಾಗರ ಕೋಳೆಕರ ಮತ್ತು ವಿಲಾಸ ಕವಠಣಕರ ಅವರ ಕ್ರಮವನ್ನು ನೌಕರರ ಸಂಘ ಖಂಡಿಸುತ್ತಿದ್ದು, ಅವರ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ನೌಕರರಿಗೆ ಅಗತ್ಯ ಬೆಂಬಲ ನೀಡಲಿದೆ” ಎಂದು ವಿವರಿಸಿದರು.

ತಾಲ್ಲೂಕಿನ ಯಾವುದೇ ಸರ್ಕಾರಿ ನೌಕರರಿಗೆ ನಕಲಿ ಪತ್ರಕರ್ತರಿಂದ, ಯೂಟೂಬ್ ವರದಿಗಾರರಿಂದ, ಅನಧೀಕೃತ ಮಾಧ್ಯಮ ಪ್ರತಿನಿಧಿಗಳಿಂದ ಬೆದರಿಕೆ ಮತ್ತು ಹಣದ ಬೇಡಿಕೆ ಬಂದಲ್ಲಿ ನೌಕರರ ಸಂಘವನ್ನು ಸಂಪರ್ಕಿಸಬೇಕು ಎಂದು ಯಳ್ಳೂರ ಕರೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ದುಂಡಪ್ಪ ಕೋಮಾರ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ ತಂಗೊಳ್ಳಿ, ಕಂದಾಯ ನಿರೀಕ್ಷಕ ರಮೇಶ ಕೋಲಕಾರ, ಆರೋಗ್ಯ ಇಲಾಖೆಯ ಶೋಭಾ ಸವದತ್ತಿ, ಕಂದಾಯ ಇಲಾಖೆಯ ಸಾದಿಕ್ ಸೇರಿದಂತೆ ನೌಕರರ ಸಂಘದ ಸದಸ್ಯರು ಇದ್ದರು.


Spread the love

About Laxminews 24x7

Check Also

ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Spread the loveನವದೆಹಲಿ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಶುಕ್ರವಾರ ತಡರಾತ್ರಿ ಸಮಸ್ಯೆ ಕಾಣಿಸಿಕೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ