ನವದೆಹಲಿ: ಕೊರೊನಾ ಬಗ್ಗೆ ಸತ್ಯವಲ್ಲದ ಸುದ್ದಿಗಳನ್ನು ಲೈಕ್, ಕಮೆಂಟ್ ಮಾಡುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಸತ್ಯವಲ್ಲದ ಮಾಹಿತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್‍ಬುಕ್ ಮುಂದಾಗಿದೆ.
ಜಾಗತಿಕ ಮಟ್ಟದಲ್ಲಿ ಕೊರೊನಾ ದೊಡ್ಡ ಸುದ್ದಿ ಮಾಡುತ್ತಿದೆ. ಸೋಶಿಯಲ್ ಮಿಡಿಯಾಗಳನ್ನ ಓಪನ್ ಮಾಡಿದರೆ ಸಾಕು ಕೊರೊನಾ ಬಗ್ಗೆ ಅನೇಕ ಪೋಸ್ಟ್‌ಗಳು ಫೇಸ್‍ಬುಕ್, ವ್ಯಾಟ್ಸಪ್ ಇನ್‍ಸ್ಟ್ರಾಗ್ರಾಂನಲ್ಲಿ ಬರುತ್ತಿವೆ. ಹೀಗೆ ಬರುವ ಸುದ್ದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತಪ್ಪು ಮಾಹಿತಿ ಶೇರ್ ಆಗುತ್ತಿದೆಯಂತೆ. ಹೀಗೆ ಸತ್ಯವಲ್ಲದ ಮಾಹಿತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್‍ಬುಕ್ ಈಗ ಸಿದ್ಧವಾಗಿದೆ.
ಸುಳ್ಳು ಸುದ್ದಿಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಫೇಸ್‍ಬುಕ್ ಗಮನಕ್ಕೆ ತಂದಿದೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ನ್ಯೂಸ್ ಏಜೆನ್ಸಿಗಳ ಜೊತೆ ಫೇಸ್‍ಬುಕ್ ಕೈ ಜೋಡಿಸಿದೆ. ಸತ್ಯವಲ್ಲದ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಅನಗತ್ಯ ಸುಳ್ಳು ಮಾಹಿತಿಯನ್ನು ಶೇರ್ ಮಾಡುವುದು, ಲೈಕ್, ಕಾಮೆಂಟ್ ಮಾಡುವರಿಗೆ ಇನ್ಮುಂದೆ ಎಚ್ಚರಿಕೆ ನೀಡುವ ಕೆಲಸ ಫೇಸ್‍ಬುಕ್ ಮಾಡಲಿದೆ.
ಫೇಸ್‍ಬುಕ್‍ನಲ್ಲಿ ಕೊರೊನಾ ಸುದ್ದಿ ಶೇರ್ ಮಾಡ್ತಿರಾ ಎಚ್ಚರ
* ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೊರೋನಾ ಸಂಬಂಧ ಸುಳ್ಳು ಮಾಹಿತಿ ಹೆಚ್ಚು ಶೇರ್ ಆಗುತ್ತಿದೆ
* ಕೊರೊನಾ ವೈರಸ್ ಔಷಧಿ ಲಭ್ಯ, ಗುಣಪಡಿಸುವ ಭರವಸೆಯ ಜಾಹೀರಾತುಗಳು.
* ವೈರಸ್ ಉಗಮದ ಬಗೆಗೆ ತಪ್ಪು ಮಾಹಿತಿ.
* ಕೊರೊನಾ ವೈರಸ್ ಸಂಬಂಧಿಸಿದ ವದಂತಿಗಳು.
* ಕೊರೊನಾ ಹೆಸರಿನಲ್ಲಿ ನಕಲಿ ವಸ್ತುಗಳ ಮಾರಾಟಕ್ಕೆ ಯತ್ನ.
ಹೀಗೆ ಹಲವು ಮಾದರಿಯಲ್ಲಿ ವೈಯಕ್ತಿಕ ಹಿತಾಸಕ್ತಿಗಾಗಿ ಫೇಸ್‍ಬುಕ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ರೀತಿಯ ಸುಳ್ಳು ಮಾಹಿತಿ ಮತ್ತು ವಿಡಿಯೋ ಲಕ್ಷಾಂತರ ವಿವ್ಯೂ ಮತ್ತು ಶೇರ್ ಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಹೀಗೆ ತಪ್ಪು ಮಾಹಿತಿ ಶೇರ್, ಕಾಮೆಂಟ್ ಮಾಡಿದ್ದಲ್ಲಿ ಫೇಸ್‍ಬುಕ್ ಮುಂದಿನ ವಾರದಿಂದ ನಿಮ್ಮನ್ನು ಎಚ್ಚರಿಸಲಿದೆ.
ಫೇಸ್‍ಬುಕ್ ಬಳಸುವಾಗ ನಿಮ್ಮ ಅರಿವಿಗೆ ಅದು ಬರಲಿದೆ. ಇಷ್ಟು ಮಾತ್ರವಲ್ಲದೇ ಫ್ಯಾಕ್ಟ್ ಚೆಕ್, ನ್ಯೂಸ್ ಫೀಡ್‍ಗಳನ್ನು ಕೂಡ ಪ್ರಕಟಿಸಲಿದೆ. ಇದಕ್ಕಾಗಿ ಹಲವು ಒಪ್ಪಂದಗಳನ್ನು ಫೇಸ್‍ಬುಕ್ ಮಾಡಿಕೊಂಡಿದ್ದು, ಮುಂದಿನ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಫೇಸ್‍ಬುಕ್ ತಿಳಿಸಿದೆ.