Breaking News

ಬಿಜೆಪಿ ಕ್ರಿಮಿನಲ್‌ ಪಿತೂರಿ ಮಾಡಿ ಶೃಂಗೇರಿಯಲ್ಲಿ ವೋಟ್‌ ಚೋರಿ ಮಾಡಿದೆ: ಸಿಎಂ ಬಾಂಬ್‌

Spread the love

ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯವರು ಕ್ರಿಮಿನಲ್‌ ಪಿತೂರಿ ಮಾಡಿ ವೋಟ್‌ ಚೋರಿ ಮಾಡಿದ್ದಾರೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಗಂಭೀರ ಆರೋಪ ಮಾಡಿದರು.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವೋಟ್‌ ಜೋರಿ ಆರೋಪ ಹೊರಿಸಿದರು.

ಕೋರ್ಟ್‌ ಆದೇಶದ ಮೇರೆಗೆ ಶೃಂಗೇರಿಯಲ್ಲಿ  ಅಂಚೆ ಮತಗಳ ಮರು ಎಣಿಕೆ ಆಯಿತು. ರಾಜೇಗೌಡ ಕಳೆದ ವಿಧಾನಸಭೆಯಲ್ಲಿ 201 ಮತಗಳಿಂದ ಗೆದ್ದಿದ್ದರು. ರಾಜೇಗೌಡಗೆ ಇವಿಎಂ ನಲ್ಲಿ 59,171 ಮತ, 569 ಅಂಚೆಮತಗಳು ಬಂದಿತ್ತು, ಜೀವರಾಜ್ ಗೆ 58,970 ಇವಿಎಂ ಮತ, 692 ಮತ ಬಂದಿತ್ತು. ಒಟ್ಟಾರೆ 201 ಮತದಿಂದ ರಾಜೇಗೌಡ (Raje Gowda) ಗೆದ್ದಿದ್ದರು. ಇವೆಲ್ಲವೂ ಮೌಲ್ಯಯುತ ಮತ ಅಂತ ಚುನಾವಣಾ ಅಧಿಕಾರಿಗಳು, ಚುನಾವಣೆ ಏಜೆಂಟ್, ರಿಟರ್ನಿಂಗ್ ಅಧಿಕಾರಿಗಳು ಘೋಷಣೆ ಮಾಡಿದ್ರು. ಘೋಷಣೆ ಆದ ಮೇಲೆ ಬಿಜೆಪಿ ಅಭ್ಯರ್ಥಿ ಜೀವರಾಜ್ ಚುನಾವಣಾ ಅಕ್ರಮ ಆಗಿದೆ ಅಂತ ಹೈಕೋರ್ಟ್ ನಲ್ಲಿ ಮರು ಎಣಿಕೆಗೆ ಕೇಸ್ ಹಾಕಿದ್ರು. ಅವರ ಅರ್ಜಿ ಪುರಸ್ಕಾರ ಮಾಡಿ ಹೈಕೋರ್ಟ್ 2026ರ ಮಾರ್ಚ್‌ 6 ರಂದು ಮರು ಎಣಿಕೆಗೆ ಆದೇಶ ಮಾಡಿತ್ತು. 279 ಅಂಚೆ ಮತ ಎಣಿಕೆಗೆ ಆದೇಶ ಮಾಡಿತ್ತು ಎಂದು ಮಾಹಿತಿ ನೀಡಿದರು.
ಅದರಂತೆ ಮೇ 2 ರಂದು ಮತ ಮರುಎಣಿಕೆ ನಡೀತು. ಮರು ಎಣಿಕೆಯಲ್ಲಿ 314 ಮತಗಳು ಮಾತ್ರ ವ್ಯಾಲಿಡ್ ಆಗುತ್ತದೆ. ಅದರಲ್ಲಿ 255 ಮತ ಇನ್ ವ್ಯಾಲಿಡ್ ಆಯ್ತು. ಯಾಕೆ ಅ ಮತ ಇನ್ ವ್ಯಾಲಿಡ್ ಆಯ್ತು? 2023 ರಲ್ಲಿ ಜೀವರಾಜ್ ಗಡ 692 ಮತ ಬಿದ್ದಿತ್ತು. ಮರು ಎಣಿಕೆಯಲ್ಲಿ 690 ಮತ ಲಭಿಸಿದೆ. ಎರಡು ಮತ ಮಾತ್ರ ಕಡಿಮೆ ಆಗಿದೆ. ಇದನ್ನ ನೋಡಿದಾಗ ಸ್ಪಷ್ಟವಾಗಿ ಗೊತ್ತಾಗುತ್ತದೆ ಬಿಜೆಪಿಯವರು ಕ್ರಿಮಿನಲ್‌ ಪಿತೂರಿ ಮಾಡಿ ವೋಚ್‌ ಚೋರಿ ಮಾಡಿದ್ದಾರೆ ಎಂದು ಆರೋಪಿಸಿದರು.ರಾಜೇಗೌಡರಿಗೆ ಬಿದ್ದ 255 ಮತ ಇನ್ ವ್ಯಾಲಿಡ್ ಆಗಿರೋದನ್ನ ವ್ಯವಸ್ಥಿತವಾಗಿ ತಿದ್ದಲಾಗಿದೆ. ಜೀವರಾಜ್ 201 ರಲ್ಲಿ ಸೋತಿದ್ರು. ಮರು ಎಣಿಕೆ ಆದ ಮೇಲೆ 52 ಮತ ಜಾಸ್ತಿ ಬಂದಿದೆ. ನಾನು ಅಧಿಕಾರಿಗಳ ಜೊತೆ ಮಾತಾಡಿದೆ. ಚುನಾವಣೆ ಎಕ್ಸ್ ಪರ್ಟ್ ಗಳ ಜೊತೆ ಮಾತಾಡಿದೆ. ಎಣಿಕೆ ಆದ ಮೇಲೆ ಎಲ್ಲಾ ದಾಖಲಾತಿಗಳನ್ನ ಟ್ರಂಕ್ ನಲ್ಲಿ ಇಟ್ಟು ಕಳಿಸ್ತಾರೆ. ಆಗ ಅಧಿಕಾರದಲ್ಲಿ ಇದ್ದ ಬಿಜೆಪಿ ಅವರು ಪ್ರಭಾವ ಬಳಿಸಿ, ಅಧಿಕಾರ ಬಳಸಿ ಸಿಬ್ಬಂದಿ ಮೂಲಕ ಟ್ರಂಕ್ ನಲ್ಲಿ ಇದ್ದ ಪತ್ರಗಳನ್ನ ತಿದ್ದಿರುವುದು ಖಚಿತವಾಗಿದೆ, ಇದು ಕ್ರಿಮಿನಲ್ ಅಪರಾಧ ಎಂದು ಬಾಂಬ್‌ ಸಿಡಿಸಿದರು.

ರಾಜೇಗೌಡರಿಗೆ 3 ನೇ ಸುತ್ತಿನಲ್ಲಿ ಲಭಿಸಿದ 170 ಅಂಚೆ ಮತಗಳು ಅಷ್ಟು ಮತ ಇನ್ ವ್ಯಾಲಿಡ್ ಆಗಿವೆ. 2023 ರಲ್ಲಿ ಆ ಮತಗಳು ವ್ಯಾಲಿಡ್ ಆಗಿತ್ತು. ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿ ಹಾಕಿಕೊಂಡ ಅನ್ನೋ ಗಾದೆ ಮಾತಿದೆ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ, ಇದು ಬಿಜೆಪಿ ಮಾಡಿರೋ ಕೆಲಸ. ಕೇಂದ್ರದ ಮಂತ್ರಿ ಜೋಶಿ, ಶೋಭಾ ಕರಂದ್ಲಾಜೆ, ಅಶೋಕ್ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.

ನಮ್ಮ ಪಾರ್ಟಿಯಿಂದ ಸುಧೀರ್ ಕುಮಾರ್ ಏಜೆಂಟ್ ಅಗಿ ಸಹಿ ಹಾಕಿದ್ದಾರೆ. ಬಿಜೆಪಿ ಏಜೆಂಟ್, ಜೆಡಿಎಸ್ ಅಭ್ಯರ್ಥಿ ಪರ ಏಜೆಂಟ್, ಉಳಿದ ಅಭ್ಯರ್ಥಿಗಳ ಏಜೆಂಟ್ ಸಹಿ ಹಾಕಿದ್ದಾರೆ. ಎಲ್ಲರೂ ಸಹಿ ಮಾಡಿರೋ ದಾಖಲಾತಿ ಇದೆ. ಆಗ ಯಾಕೆ ಬಿಜೆಪಿ ಅಬ್ಜೆಕ್ಷನ್ ಮಾಡಲಿಲ್ಲ. ಬೇರೆ ಅಭ್ಯರ್ಥಿಗಳು ಯಾಕೆ ಅಬ್ಜೆಕ್ಷನ್ ಮಾಡಲಿಲ್ಲ. ಮರು ಎಣಿಕೆಯಲ್ಲಿ ಇನ್ ವ್ಯಾಲಿಡ್ ಮಾಡಿರೋದು ಕೌಂಟಿಂಗ್ ದಿನವೇ ಬಿಜೆಪಿ ಅವರು ಅವರ ಸಿಬ್ಬಂದಿಗಳಿಂದ ತಿದ್ದಿದ್ದಾರೆ. ಅಷ್ಟೇ ಅಲ್ಲದೇ ಮರು ಎಣಿಕೆ ವೇಳೆ ಕೇಂದ್ರದ ಮತಎಣಿಕೆ ವೀಕ್ಷಕರು ಬಂದಿದ್ದರು. ನಮಗೆ ಇರೋ ಮಾಹಿತಿ ಪ್ರಕಾರ, ಮತೆಎಣಿಕೆ ವೀಕ್ಷಕರೂ ಕೂಡ ಇದನ್ನ ನೋಡಿ ಗಂಭೀರ ಸ್ವರೂಪದ ಅಪರಾಧ ಆಗಿದೆ ಅಂತ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ ಅಂತ ಮಾಹಿತಿ ಇದೆ. ರಿಟರ್ನಿಂಗ್ ಅಧಿಕಾರಿ ಕೋರ್ಟ್ ಗೆ ಮಾಹಿತಿ ‌ಕೊಡಬೇಕಿತ್ತು. ಡಬಲ್ ಮಾರ್ಕ್ ಇದ್ದರೆ ಕೋರ್ಟ್ ಗೆ ಹೇಳಬೇಕಿತ್ತು. ಕೋರ್ಟ್ ಗೆ ಮಾಹಿತಿ ಕೊಡದೇ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ಆಕ್ಷೇಪ ಹೊರಹಾಕಿದರು.

ಇಂಕ್‌ನಲ್ಲೂ ವ್ಯತ್ಯಾಸ
ರಾಜೇಗೌಡ ಮತ ಮಾತ್ರ ಇನ್ ವ್ಯಾಲಿಡ್ ಆಗಿರೋದು. ಬೇರೆ ಅವರದ್ದು ಯಾಕೆ ಆಗಿಲ್ಲ? ಚಿಲುಮೆ ಸಂಸ್ಥೆ ಮೂಲಕ ಬಿಜೆಪಿ ಮತದಾರ ಪಟ್ಟಿ ತಿದ್ದುಪಡಿ ಮಾಡೋಕೆ ಹೋಗಿದ್ರು, ಆಳಂದದಲ್ಲಿ ನೈಜ ಮತದಾರನ್ನ ಬಿಟ್ಟಿದ್ದರು. ಬಿಜೆಪಿ ಅವರಿಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಲ್ಲದೇ ಇರೋರು. ನಿಷ್ಪಕ್ಷಪಾತ ಚುನಾವಣೆಯಲ್ಲಿ ಅವರಿಗೆ ನಂಬಿಕೆ ಇಲ್ಲ. ಹಾಗಾಗಿ ಬಿಜೆಪಿ ಅವರು ಇಂತಹ ಅಪರಾಧ ಮಾಡೋಕೆ ಹಿಂದೆ ಮುಂದೆ ನೋಡಲ್ಲ ಎಂದು ಹೇಳಿದರು.

ಅಲ್ಲದೇ, ಇಂಕ್ ನಲ್ಲೂ ವ್ಯತ್ಯಾಸ ಬಂದಿದೆ, ಫಾರೆನ್ಸಿಕ್ ಲ್ಯಾಬ್ ಗೆ ಕಳಿಸಬೇಕಿತ್ತು. ಡಿಸಿಗೆ ಎಲೆಕ್ಷನ್ ಕಮೀಷನ್ ನಿಂದ ಒತ್ತಡ ಇರಬಹುದು. ಅಧಿಕಾರಿಗಳು ಯಾರೇ ಆದ್ರೂ ತಪ್ಪು ಮಾಡಿದ್ರೆ ಶಿಕ್ಷೆ ಆಗಬೇಕು. ಸದ್ಯ ರಾಜೇಗೌಡ ದೂರು ಕೊಟ್ಟಿದ್ದಾರೆ. ಕೋರ್ಟ್ ಗೆ ಹೋಗಿದ್ದಾರೆ, ಮುಂದೆ ನೋಡೋಣ ಅಂತ ತಿಳಿಸಿದ್ರು.


Spread the love

About Laxminews 24x7

Check Also

ಪಂಚಮಸಾಲಿ ಪೀಠದಲ್ಲಿ ಸಭೆ, ಸಮಾರಂಭ ಮಾಡದಂತೆ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿ

Spread the loveದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ  ದಿನ ಕಳೆದಂತೆ ಸ್ವಾಮೀಜಿ  ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಗಲಾಟೆ ಜೋರಾಗುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ