Breaking News

ಕೇಂದ್ರ ಚುನಾವಣಾ ಆಯುಕ್ತರಿಂದ ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಗೆದ್ದಿದೆ: ಸಂತೋಷ್ ಲಾಡ್

Spread the love

ಬೆಂಗಳೂರು: ಪಶ್ಚಿಮ ಬಂಗಾಳ  ಮತ್ತು ಅಸ್ಸಾಂನಲ್ಲಿ ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್‌ರಿಂದ  ಬಿಜೆಪಿಗೆ  ಗೆಲುವಾಗಿದೆ ಎಂದು ಸಚಿವ ಸಂತೋಷ್ ಲಾಡ್  ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.

ಪಂಚರಾಜ್ಯ ಚುನಾವಣೆ ಮತ್ತು ಉಪ ಚುನಾವಣೆ ಫಲಿತಾಂಶದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ 2 ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಸರ್ಕಾರದ ಕಾರ್ಯಕ್ರಮ ಅದರ ಜೊತೆ ಕಾರ್ಯಕರ್ತರು, ಮುಖಂಡರ ಕೆಲಸದಿಂದ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಸರ್‌ಪ್ರೈಸ್ ಆಗಿರೋದು ತಮಿಳುನಾಡಿನಲ್ಲಿ ವಿಜಯ್ ಗೆಲುವು. 35% ಮತಗಳನ್ನು ಪಡೆದಿದ್ದಾರೆ. ವಿಜಯ್‌ಗೆ ಆಲ್ ದಿ ಬೆಸ್ಟ್. ಒಂದು ವರ್ಷದಲ್ಲಿ ಸಿಂಪಲ್ ಮೆಜಾರಿಟಿ ಬಂದಿದೆ. ವಿಜಯ್‌ಗೆ ಶುಭವಾಗಲಿ ಎಂದರು. ಟಿವಿಕೆ ಜೊತೆ ಮೈತ್ರಿ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.

ಅಸ್ಸಾಂನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರಿಸ್ ಜ್ಞಾನೇಶ್ ಕುಮಾರ್ ಇದ್ದಾರೆ. ಅದರ ಬಗ್ಗೆ ಮಾಹಿತಿ ಕೊಡುತ್ತೇವೆ. ಪಶ್ಚಿಮ ಬಂಗಾಳ 90 ಲಕ್ಷ ವೋಟ್ ಡಿಲೀಟ್ ಮಾಡಿ, ಬೇಕಾದ ಕಡೆ ವೋಟ್ ಡಿಲೀಟ್ ಮಾಡಿದ್ದಾರೆ. ಟಿಎಂಸಿ ಸೋಲಿಸೋ ವ್ಯವಸ್ಥೆ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ ಕೂಡಾ ಇತ್ತು. ಚುನಾವಣೆ ಆಯೋಗಕ್ಕೆ ಜ್ಞಾನೇಶ್ ಕುಮಾರ್ ಬಂದ ಮೇಲೆ ಬಿಜೆಪಿ ಗೆಲುವಿನ ಮಾರ್ಜಿನ್‌ಗಳನ್ನ ದಾಟಿಸುವ ಮುಂದಾಳತ್ವ ತೆಗೆದುಕೊಂಡಿದ್ದಾರೆ. ಕೆಲಸದ ಮೇಲೆ ವೋಟ್ ಕೇಳದೇ ಜ್ಞಾನೇಶ್ ಕುಮಾರ್ ಮೂಲಕ ಫ್ರಾಡ್ ಮಾಡಿ ಗೆದ್ದಿದ್ದಾರೆ. ಅವರಿಗೆ ಶುಭವಾಗಲಿ. ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ 99 ಚುನಾವಣೆ ಸೋಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಜ್ಣಾನೇಶ್ ಕುಮಾರ್ ಅವರನ್ನ ತೆಗೆಯಲಿ. ನಿಮಗೆ ತಾಕತ್ತು ಇದ್ದರೆ ನೀವು ಗ್ರೇಟ್ ಇದ್ದರೆ ಆಧಾರ್ ಕಾರ್ಡ್ ಅನ್ನು ವೋಟರ್ ಲಿಸ್ಟ್ಗೆ ಲಿಂಕ್ ಮಾಡಿ ಮುಗಿದು ಹೋಗುತ್ತದೆ. ಟೆಕ್ನಾಲಜಿ ಇದೆ, ಬುದ್ದಿವಂತಿಕೆ ಇದೆ. ದೇವರು ದೊಡ್ಡದಾಗಿ ಹುಟ್ಟಿಸಿದ್ದಾರೆ ಅಂತಾರೆ. ವೋಟರ್ ಲಿಸ್ಟ್ ಲಿಂಕ್ ಮಾಡಿ. ಯಾಕೆ ಎಸ್‌ಐಆರ್ ಬೇಕು, ಚುನಾವಣೆ ಆಯೋಗ ಬೇಕು. ಚುನಾವಣೆ ಆಯೋಗಕ್ಕೆ ನಮ್ಮ ಮನವಿ ಇದೆ. ಆಧಾರ್ ಕಾರ್ಡ್ಗೆ ವೋಟರ್ ಐಡಿ ಲಿಂಕ್ ಮಾಡಿ. ನಿಮ್ಮ ಮೋಸಕ್ಕೆ ಅಂತ್ಯ ಹಾಡಬಹುದು. ಮೋದಿ ವಿಶ್ವಗುರು. ಇದಕ್ಕೆ ಒಂದು ಸೊಲ್ಯೂಷನ್ ಕಂಡು ಹಿಡಿಯಿರಿ ಎಂದು ಆಗ್ರಹಿಸಿದರು.

ಕೇರಳದಲ್ಲಿ ಗೆಲುವು ಹಿನ್ನೆಲೆ ಇವಿಎಂ ಸರಿ ಇತ್ತಾ ಎಂಬ ಪ್ರಶ್ನೆಗೆ, ಅವರು ಸೆಲೆಕ್ಟಿವ್ ಆಗಿ ಮಾಡುತ್ತಾರೆ. ಅವರು ಬಹಳ ಹುಷಾರಾಗಿ ಇದ್ದಾರೆ. ನಾನು ಅಂಕಿಅಂಶಗಳ ಸಮೇತ ಕೊಡುತ್ತೇನೆ. ಎಲ್ಲೆಲ್ಲಿ ವೋಟ್ ಕಟ್ ಮಾಡಿದ್ದಾರೆ. ಅವರಿಗೆ ಎಷ್ಟು ಲಾಭ ಆಗಿದೆ ನೋಡೋಣ. ಲೋಕಸಭೆಯಲ್ಲಿ ಸೋತು ವಿಧಾನಸಭೆಯಲ್ಲಿ ಹೇಗೆ ಗೆಲ್ಲುತ್ತಾರೆ. ಇದೆಲ್ಲವೂ ಚಮತ್ಕಾರ.ಲೋಕಸಭೆ ಚುನಾವಣೆ ಮುಗಿದ ಮೇಲೆ ವೋಟ್ ಜಾಸ್ತಿ ಸೇರಿಸಿದರು. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ. ಪಿಕ್ಚರ್ ನಡೆಯುತ್ತಿದೆ ನಡೆಯಲಿ ಎಂದು ಟೀಕಿಸಿದರು.


Spread the love

About Laxminews 24x7

Check Also

ಮೇ 9ರಂದು ಬಂಗಾಳದ ನೂತನ ಸಿಎಂ ಪ್ರಮಾಣ ಸ್ವೀಕಾರ – ಎಲ್ಲ NDA ಆಡಳಿತ ರಾಜ್ಯಗಳ ಸಿಎಂಗಳಿಗೆ ಆಹ್ವಾನ

Spread the loveಕೋಲ್ಕತ್ತಾ: 15 ವರ್ಷಗಳ ದೀದಿ ಆಡಳಿತ ಕೊನೆಗೊಳಿಸಿ ಅಧಿಕೃತವಾಗಿ ಮೇ 9ರಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ