Breaking News

20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಷೇರು ಪೇಟೆಯಲ್ಲಿ ಸಂಚಲನ

Spread the love

ಮುಂಬೈ, ಮೇ 13-ಕೊರೊನಾ ವೈರಸ್ ದಾಳಿಯಿಂದ ಅಲ್ಲೋಲ-ಕಲ್ಲೋಲವಾಗಿರುವ ದೇಶದ ಆರ್ಥಿಕತೆಗೆ ಪುಷ್ಟಿ ನೀಡಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ ನಂತರ ಷೇರುಪೇಟೆಯಲ್ಲಿ ಭಾರೀ ಸಂಚಲನ ಕಂಡುಬಂದಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ (ಸೆನ್‍ಸೆಕ್ಸ್)ದಲ್ಲಿ ಇಂದು ಬೆಳಗ್ಗೆ 1,400 ಪಾಯಿಂಟ್‍ಗಳ ಜಿಗಿತವಾಗಿದೆ. ಷೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲೇ ಭಾರೀ ಏರಿಕೆ ಗೋಚರಿಸಿದೆ. 30 ಷೇರು ಸೂಚ್ಯಂಕದಲ್ಲಿ 818.68 ಪಾಯಿಂಟ್‍ಗಳು ಅಥವಾ ಶೇ.2.61ರಷ್ಟು ವಹಿವಾಟು ಚೇತರಿಕೆ ಕಂಡುಬಂದು, ಗರಿಷ್ಠ 32,845.48 ತಲುಪಿತು.ಅದೇ ರೀತಿ ಎನ್‍ಎಸ್‍ಸಿ ನಿಫ್ಟಿಯಲ್ಲಿಯೂ ಏರಿಕೆ ಕಂಡುಬಂದಿದೆ. ಅದು 213.50 ಪಾಯಿಂಟ್ ತಲುಪಿತ್ತು (ಶೇ.2.32 ರಿಂದ 9,410.05) ಇಂದಿನ ಆರಂಭಿಕ ವಹಿವಾಟು ಚೇತರಿಕೆಯಲ್ಲಿ ಐಸಿಐಸಿಯ ಬ್ಯಾಂಕ್ ಗರಿಷ್ಠ ವಹಿವಾಟು ದಾಖಲಿಸಿದೆ. ನಂತರದ ಸ್ಥಾನಗಳಲ್ಲಿ ಎಲ್ ಅಂಡ್ ಟಇ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಹೀರೋ ಮೋಟೊಕಾರ್ಪ್, ಎಂ ಅಂಡ್ ಎಂ, ಆಲ್ಟ್ರಾಟೆಕ್ ಸೀಮೆಂಟ್ ಮತ್ತು ಮಾರುತಿ ಕಂಪನಿಗಳಿವೆ.


Spread the love

About Laxminews 24x7

Check Also

ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್

Spread the loveಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ