ಬೆಂಗಳೂರು: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿ ಕೊಲೆ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಅಂಗೀಕಾರ ಮಾಡಿದೆ.
ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ದರ್ಶನ್ ಅರ್ಜಿಯನ್ನು ಭಾಗಶ: ಅಂಗೀಕಾರ ಮಾಡಿದೆ. ಜೊತೆಗೆ ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶ ನೀಡದೇ ಒಂದು ವಾರದಲ್ಲಿ ಹೊಸ ಆದೇಶ ನೀಡಲು ಸೆಷನ್ಸ್ ಕೋರ್ಟ್‌ಗೆ ಸೂಚನೆ ನೀಡಿದೆ.
ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಸಂಬಂಧ ಸೆಷನ್ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಮುಂದಿನ ಒಂದು ವಾರದಲ್ಲಿ ಹೊಸ ಆದೇಶ ನೀಡಬೇಕಿದೆ.
ದರ್ಶನ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್ ಸನ್ನಡತೆಯ ಬಗ್ಗೆ ಪ್ರೊಬೇಷನರಿ ಅಧಿಕಾರಿ ವರದಿ ಸಲ್ಲಿಸಿದ್ದರು. ಇದನ್ನ ಪ್ರಶ್ನಿಸಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಪ್ರೊಬೆಷನರಿ ಅಧಿಕಾರಿ ಸಜಾಬಂಧಿ ಬಗ್ಗೆ ವರದಿ ಕೊಡಬೇಕಿತ್ತು. ಆದರೆ ಪ್ರದೋಷ್ ವಿಚಾರಣಾಧೀನ ಆರೋಪಿ. ಹೀಗಾಗಿ ಆತನ ನಡವಳಿಗೆ ಬಗ್ಗೆ ವರದಿ ನೀಡುವ ಅವಕಾಶ ಇಲ್ಲ. ಹೀಗಾಗಿ ಪ್ರೊಬೆಷನರಿ ಅಧಿಕಾರಿ ಸಲ್ಲಿಸಿದ ವರದಿಯನ್ನು ರದ್ದು ಮಾಡಲು ದರ್ಶನ್ ಮನವಿ ಮಾಡಿದ್ದರು.
Laxmi News 24×7