Breaking News

ಆಂಬ್ಯುಲೆನ್ಸ್ ಖಾಸಗೀಕರಣಕ್ಕೆ ಡಿಕೆಶಿ ಕ್ಯಾಬಿನೆಟ್ ಒಪ್ಪಿಗೆ – ಚಾಲಕರಿಗೆ ಟೈಮ್ ಲೈನ್, ಮೀರಿದ್ರೆ ದಂಡ

Spread the love

ಬೆಂಗಳೂರು: ಈ ಹಿಂದೆ ದಿನೇಶ್ ಗುಂಡೂರಾವ್  ಅವರು ಆರೋಗ್ಯ ಸಚಿವರಾಗಿದ್ದಾಗ 108 ಆಂಬುಲೆನ್ಸ್‌ಗಳನ್ನು  ಸರ್ಕಾರವೇ ನಿರ್ವಹಣೆ ಮಾಡುತ್ತೆ ಎಂದಿದ್ದರು. ಇದೀಗ ಈಗ ಯುಟಿ ಖಾದರ್  ಆರೋಗ್ಯ ಸಚಿವರಾದ ಮೇಲೆ ಆಂಬುಲೆನ್ಸ್‌ಗಳನ್ನು ಖಾಸಗೀಕರಣ ಮಾಡೋದಕ್ಕೆ ಹೊರಟಿದ್ದಾರೆ.

ಇಡೀ ಕ್ಯಾಬಿನೆಟ್ ಆಂಬುಲೆನ್ಸ್ ಖಾಸಗೀಕರಣಕ್ಕೆ ಒಪ್ಪಿದೆ. ಈ ಬಗ್ಗೆ ಸ್ವತ: ಆರೋಗ್ಯ ಸಚಿವರೇ ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ 108 ಆಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಬಗ್ಗೆ ಸಚಿವರು ಮಾತನಾಡಿ, 108 ಆಂಬುಲೆನ್ಸ್ ನಿರ್ವಹಣೆಗೆ ಹೊಸ ಪಾಲಿಸಿ ಮಾಡೋದಕ್ಕೆ ಸರ್ಕಾರ ಮುಂದಾಗಿದೆ. ಹೊಸ ಪಾಲಿಸಿಯಲ್ಲಿ 108 ಆಂಬುಲೆನ್ಸ್ ಅನ್ನು ಖಾಸಗಿ ಅವರಿಗೆ ನೀಡೋದಕ್ಕೆ ನಿರ್ಧಾರ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಇಡೀ ಕ್ಯಾಬಿನೆಟ್ ಖಾಸಗೀಕರಣಕ್ಕೆ ಒಪ್ಪಿದೆ. ಸಿಎಂ ಕೂಡ ಖಾಸಗಿಕರಣಕ್ಕೆ ಒಪ್ಪಿದ್ದಾರೆ ಅಂತಾ ಹೇಳಿದ್ದಾರೆ.

ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಜಿಕೆವಿಕೆ ಸಂಸ್ಥೆಗೆ ಕೊಡಲ್ಲ ಸರ್ಕಾರವೇ 108 ಅಂಬುಲೆನ್ಸ್ ನಿರ್ವಹಣೆ ಮಾಡುತ್ತೇವೆ ಅಂದಿದ್ದರು. ಈಗ ಖಾದರ್ ನೂತನ ಆರೋಗ್ಯ ಸಚಿವರು ಆದ ಮೇಲೆ ಟೆಂಡರ್ ನೀಡೋದಕ್ಕೆ ಮುಂದಾಗಿದ್ದಾರೆ. ಆಂಬುಲೆನ್ಸ್ ಚಾಲಕರಿಗೆ ಟೈಂ ಲೈನ್ ನೀಡಲಿದ್ದು, ಗ್ರಾಮೀಣ ಭಾಗದಲ್ಲಿ 10 ನಿಮಿಷಕ್ಕೆ ಆಸ್ಪತ್ರೆ ತಲುಪಬೇಕು. ನಗರ ಪ್ರದೇಶದಲ್ಲಿ 15 ರಿಂದ 20 ನಿಮಿಷದಲ್ಲಿ ಆಸ್ಪತ್ರೆ ತಲುಪಬೇಕು. ಸಮಯ ಮೀರಿದ್ರೆ ಟೆಂಡರ್ ಪಡೆದ ಕಂಪನಿಗೆ 5 ರಿಂದ 10 ಸಾವಿರ ದಂಡ ಹಾಕೋದಾಗಿ ತಿಳಿಸಿದ್ದಾರೆ.

ಮತ್ತೊಂದು ಕಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ 108 ಆಂಬುಲೆನ್ಸ್ ಸಿಬ್ಬಂದಿ 15 ದಿನ ಗಡುವು ಕೊಟ್ಟಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಮಾಡ್ತೇವೆ ಅಂದಿದ್ದಾರೆ. ಇದಕ್ಕೆ ಆರೋಗ್ಯ ಸಚಿವರು ಖಡಕ್ ಎಚ್ವರಿಕೆ ಕೊಟ್ಟಿದ್ದು, ಪ್ರತಿಭಟನೆ ಮಾಡಿ ರೋಗಿಗಳಿಗೆ ತೊಂದರೆ ಆದರೆ ಕ್ರಮ ಆಗುತ್ತೆ. 108 ಸಿಬ್ಬಂದಿಗೂ ನಮಗೂ ಸಂಬಂಧ ಇಲ್ಲ. ಕಂಪನಿಗೆ ಸಂಬಂಧಪಟ್ಟಿದ್ದು ಕಂಪನಿ ಬಳಿ ಬಗೆಹರಿಸಿಕೊಳ್ಳಿ ಅಂತಾ ಎಚ್ಚರಿಕೆ ನೀಡಿದ್ದಾರೆ. ರೋಗಿಗೆ ಸಮಸ್ಯೆಯಾದರೆ ಎಲ್ಲಾ ಸಿಬ್ಬಂದಿ ಮೇಲೂ ಕ್ರಮ ಅಂತಾ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್

Spread the loveಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ