Breaking News

2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ

Spread the love

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಇಂದು ಪ್ರಜ್ವಲ್‌ನನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಪೊಲೀಸರು ಕೋರ್ಟ್‌ನಲ್ಲಿ ಮನವಿ ಮಾಡಿದರು.

ಈ ಪ್ರಕರಣದಲ್ಲಿ ಪ್ರತಾಪ್ ಎ1 ಆರೋಪಿ ಹಾಗೂ ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದು, ತನಿಖೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು. ಇದೀಗ ಕೋರ್ಟ್‌ ಪೊಲೀಸ್‌ ಅರ್ಜಿಯನ್ನು ಪರಿಗಣಿಸಿ 2 ದಿನ ಪೊಲೀಸ್‌ ಕಸ್ಟಡಿಗೆ ಆದೇಶ ನೀಡಿದೆ.

ಜೈಲಿನಲ್ಲಿ ಪ್ರಜ್ವಲ್ ಬಳಿ ಮೊಬೈಲ್, ಪೆನ್ ಡ್ರೈವ್, ನೋಟ್ ಬುಕ್ ಪತ್ತೆ ಯಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಶಪಡಿಸಿಕೊಂಡ ಮೊಬೈಲ್, ಪೆನ್ ಡ್ರೈವ್‌ಗಳನ್ನು ಪೊಲೀಸರು ರಿಟ್ರೀವ್ ಗೆ ಕಳುಹಿಸಿದ್ದರು.

ತನಿಖೆ ಮುಂದುವರೆಸಲು, ಪ್ರಜ್ವಲ್ ರೇವಣ್ಣ‌ನ ವಿಚಾರಣೆ ಅಗತ್ಯ ವಿದೆ ಎಂದು ಇಂದು 42 ನೇ ಎಸಿಜೆಎಂ ಕೋರ್ಟ್ ಗೆ ಪೊಲೀಸರು ಅರ್ಜಿ ಸಲ್ಲಿಸಿ, ಇಂದು ಪ್ರಜ್ವಲ್ ರೇವಣ್ಣ‌, ಮತ್ತೊಬ್ಬ ಆರೋಪಿ ಪ್ರತಾಪ್ ಎಂಬಾತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲಾಗಿತ್ತು. ಈ ವೇಳೆ ವಾದ ಮಂಡಿಸಿದ ಪ್ರಜ್ವಲ್ ಪರ ವಕೀಲ ಅರುಣ್ , ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಹಾಗೂ ಜೈಲು ದೂರ ಇಲ್ಲ. ವಿಚಾರಣೆ ಅವಶ್ಯಕತೆ ಇದ್ದಾಗ ಅಲ್ಲಿಯೇ ಹೋಗಿ ವಿಚಾರಣೆ ನಡೆಸಬಹುದು.ಇಷ್ಡು ದಿನ ತನಿಖೆಗೆ ಸಹಕಾರ ಕೊಟ್ಟಿದ್ದಾರೆ. ಮುಂದೆಯೂ ಅದೇ ರೀತಿ ಜೈಲಿಗೆ ಹೋಗಿ ವಿಚಾರಣೆ ಮಾಡಬಹುದು. ಕಸ್ಟಡಿಗೆ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ಸರ್ಕಾರಿ ಪರ ವಕೀಲ ಸತೀಶ್ ವಾದ ಮಂಡಿಸಿ ಆರೋಪಿತರ ಬಳಿ ಕೆಲವು ಪ್ರಮುಖ ಮಾಹಿತಿ ಪಡೆಯಲು ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡರು. ಇಬ್ಬರ ವಾದ ಪ್ರತಿವಾದ ಆಲಿಸಿದ ನಂತರ ಪೊಲೀಸ್‌ ಅರ್ಜಿಯನ್ನು ಮನ್ನಿಸಿದ ನ್ಯಾ. ಸಂದೀಪ್ ಪಾಟೀಲ್ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದರು. ಈ ಆದೇಶದ ಅನ್ವಯ ಇಂದಿನಿಂದಲೇ ಪೊಲೀಸರು ಪ್ರಜ್ವಲ್‌ ಅವರನ್ನು ವಿಚಾರಣೆ ನಡೆಸಲಿದ್ದಾರೆ.


Spread the love

About Laxminews 24x7

Check Also

ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್

Spread the loveಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ