ಮುಗಳಖೋಡ ಮಠದಲ್ಲಿ ಭಜ೯ರಿಯಾಗಿ ನಡೆದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ : ಬ್ರಹ್ಮಾಂಡ ಗುರೂಜಿ ಉಪಸ್ಥಿತಿ
ಬೆಳಗಾವಿ: ಇಂದು ರಾಯಬಾಗ ತಾಲೂಕಿನ ಮುಗಳಖೋಡದ ಜಿಡಗಾ ಮಠದಲ್ಲಿ, ಈ ವಷ೯ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಾಯಬಾಗ ತಾಲೂಕು ಸೇರಿದಂತೆ ಇತರೆಡೆಯಿಂದ ಸುಮಾರು ೧೦ ಸಾವಿರಕ್ಕೂ ಹೆಚ್ಚು ಭಕ್ತರು ರೊಟ್ಟಿ ಬುತ್ತಿಯನ್ನು ತಂದು ಮಠಕ್ಕೆ ಅಪಿ೯ಸಿದರು.
ಮಠದ ಹೆಲಿಪ್ಯಾಡ ಆವರಣದಲ್ಲಿ ನಿಮಿ೯ಸಲಾಗಿದ್ದ ಮಂಟಪದಲ್ಲಿ ಹಳ್ಳಿ ಸೊಗಡನ್ನು ದಶಿ೯ಸುವ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಬ್ಬಿನ ಗೊಣೆಯಿಂದ ಅಲಂಕರಿಸಲಾಗಿದ್ದ ಪೆಂಡಾಲ್, ಜಟಕಾ ಬಂಡಿಗಳು, ರೈತಾಪಿ ಜನರ ಗುಡಿಸಲುಗಳು, ಬೀಸಣಿಕೆ, ಖಾರ ಕುಟ್ಟುವುದು, ಬಾವಿ, ಪಂಚಾಯತಿ ಕಟ್ಟೆ ಹೀಗೆ ಹಳ್ಳಿ ಸೊಗಡಿನ ಪ್ರದಶ೯ನ ಗಮನ ಸೆಳೆಯಿತು.
ಬೆಂಗಳೂರಿನ ಬ್ರಹ್ಮಾಂಡ ಗುರೂಜಿ, ಶ್ರೀಮಠದ ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಮತ್ತು ಅತಿಥಿಗಳು ಕಾಯ೯ಕ್ರಮದಲ್ಲಿ ಪಾಲ್ಗೊಂಡರು. ಇದಕ್ಕೂ ಮೊದಲು ಶ್ರೀ ವಿಠ್ಠಲ ಮಂದಿರದಿಂದ ಶ್ರೀಮಠದ ವರೆಗೆ ರೊಟ್ಟಿ ಬುತ್ತಿಗಳ ಮೆರವಣಿಗೆ ನಡೆಯಿತು. ಅದರಲ್ಲಿ ಸಾವಿರಾರು ತಾಯಂದಿರು ಭಾಗವಹಿಸಿದ್ದರು.
ಮುಗಳಖೋಡದ ಜಿಡಗಾ ಮಠ ಜಾತ್ಯಾತೀತ ಮಠ ಎಂದು ಖ್ಯಾತಿ ಪಡೆದಿದ್ದು, ವಿಶೇಷವೆಂದರೆ ಮುಸ್ಲಿಮರು, ಜೈನರು ಆದಿಯಾಗಿ ಆ ಪ್ರದೇಶದ ಎಲ್ಲ ಸಮುದಾಯಗಳ ಜನರು ಮಠಕ್ಕೆ ಬುತ್ತಿಯನ್ನು ಅಪಿ೯ಸುತ್ತಾರೆ. ಜಿಡಗಾ ಮಠವು ಕನಾ೯ಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಸುಮಾರು 360 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.