ವಿಭಿನ್ನವಾಗಿರಲಿದೆ ಲಾಕ್‌ಡೌನ್
ಇನ್ನು ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆದಿದ್ದು ಈ ಎರಡು ವಾರದ ಲಾಕ್‌ಡೌನ್ ವಿಭಿನ್ನವಾಗಿರಲಿದೆ. ಹೇಗೆ ಲಾಕ್‌ಡೌನ್ ಜಾರಿಯಾಗಬೇಕು ಎಂಬುದು ಕೇಂದ್ರ ಮಾರ್ಗಸೂಚಿ ಸಿದ್ದಪಡಿಸಲಿದೆ. ಅದರ ಆಧಾರದ ಮೇಲೆ ಮುಂದಿನ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಲಿದೆ.
ವೈದ್ಯರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ
ಇನ್ನು ಕೊರೊನಾ ವಿರುದ್ಧ ದುಡಿಯುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ ಜರುಗಿಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಕಾಳಸಂತೆಯಲ್ಲಿ ಅಗತ್ಯ ವಸ್ತುಗಳನ್ನ ಮಾರಾಟ ಮಾಡುವವರ ಮೇಲು ಕೂಡ ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ.
ಸರ್ಕಾರ ಕಚೇರಿಗಳು ಭಾಗಷಃ ಓಪನ್
ಇನ್ನು ಕೃಷಿ, ಕೈಗಾರಿಕೆ, ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಕೂಲ ಕಲ್ಪಿಸುವ ಜತೆಗೆ ಸರ್ಕಾರಿ ಕಚೇರಿಗಳನ್ನು ಭಾಗಷಃ ಆರಂಭಿಸಲು ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಏಪ್ರಿಲ್ 30 ವರೆಗೆ ಅನಿವಾರ್ಯವಾಗಿ ಲಾಕ್‌ಡೌನ್ ಮುಂದುವರೆಸಲು ಸಿಎಂ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪ್ರಧಾನಿ ಮೋದಿ 4 ಗಂಟೆಗಳ ಕಾಲ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈವರೆಗೆ ವೈದ್ಯರಿಗೆ 2.84 ಲಕ್ಷ ಪಿಪಿಇ(Personal protective equipment) ಕಿಟ್ ವಿತರಿಸಲಾಗಿದೆ. ಪ್ರತಿ 2 ದಿನಕೊಮ್ಮೆ 2 ಲಕ್ಷ ಮಾಸ್ಕ್ ಒದಗಿಸುವ ಬಗ್ಗೆ ಪ್ರಧಾನಿ ಭರವಸೆ ನೀಡಿದ್ದಾರೆ. ದೇಶದಾದ್ಯಂತ ಕೊರೊನಾ ಸೋಂಕು ಪತ್ತೆಗೆ 200 ಲ್ಯಾಬ್‌ಗಳು ಇದ್ದು, ಏಪ್ರಿಲ್ 30 ಒಳಗೆ ಪರೀಕ್ಷಾ ಕೇಂದ್ರವನ್ನ 300 ಕ್ಕೆ ಹೆಚ್ಚು ಸ್ಥಾಪನೆ ಮಾಡುವ ಭರವಸೆಯನ್ನ ಪ್ರಧಾನಿ ನೀಡಿದ್ದಾರೆಂದು ತಿಳಿಸಿದ್ದಾರೆ.