Breaking News

ಆರಗ ಜ್ಞಾನೇಂದ್ರ ಗೃಹ ಸಚಿವ ಹುದ್ದೆಯಲ್ಲಿರಲು ನಾಲಾಯಕ್ :ಶಾಸಕ ಅಬ್ಬಯ್ಯ ಪ್ರಸಾದ್

Spread the love

ಮಾಹಿತಿ ಕೊರತೆಯಿರುವ ಆರಗ ಜ್ಞಾನೇಂದ್ರ ಹೋಮ್​​ ಮಿನಿಸ್ಟರ್ ಹುದ್ದೆಯಲ್ಲಿ ಇರಲು ನಾಲಾಯಕ್ , ಎಂದು ಹುಬ್ಬಳ್ಳಿ- ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ಘಟನೆಯಲ್ಲಿ ಕಾಂಗ್ರೆಸ್ ಡಬಲ್ ಸ್ಯ್ಟಾಂಡ್ ಎಂದು ಆರಗ ಜ್ಞಾನೇಂದ್ರ ಆರೋಪ ಮಾಡಿದ್ದರು.

 

ಈ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹೋಮ್ ಮಿನಿಸ್ಟರ್​​ಗೆ ಮಾಹಿತಿ ಕೊರತೆಯಿದೆ. ಗದ್ದಲ ಗಲಾಟೆಯಿಂದಲೇ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ತಂತ್ರ. ಎಸ್​​ಡಿಪಿಐ, ಪಿಎಫ್‌ಐ ಬ್ಯಾನ್ ಮಾಡಿ ಎಂದು ಕಾಂಗ್ರೆಸ್ ಒತ್ತಾಯ ಮಾಡ್ತಿದೆ.

ಜಾತಿ, ಧರ್ಮಗಳ ಮೇಲಿನ ರಾಜಕೀಯ ಲಾಭ ಬಿಜೆಪಿಗೆ ಬೇಕು. ಚುನಾವಣೆ ವೇಳೆ ಮಾತನಾಡಲು ಇವರ ಬಳಿ ಏನೂ ಇಲ್ಲ. ಹೀಗಾಗಿ ಕೋಮು ಗಲಭೆ ಮಾಡಿಸಿ ಅದರ ಲಾಭ ಪಡೆಯಲು ಮುಂದಾಗಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಇವರಿಗೆ ಬೇಡ ಎಂದು ಟೀಕಿಸಿದರು


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ