ಬೆಂಗಳೂರು: ಯಲಹಂಕದಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ಆರೋಪಿ ಕಿರಣ್ 30 ಲಕ್ಷ ರೂ. ಸುಪಾರಿ ನೀಡಿದ್ದ ವಿಚಾರ ಕೇಳಿ, ಅವನು ನನ್ನ ಸ್ನೇಹಿತ, ಹಾಗೆಲ್ಲ ಮಾಡಲ್ಲ ಎಂದು ಚರಣ್ ನಿರ್ಲಕ್ಷಿಸಿದ್ದರು ಎಂದು ತಿಳಿದು ಬಂದಿದೆ.
ಕಳೆದ ಆರು ತಿಂಗಳ ಹಿಂದೆಯೇ ಚರಣ್ ಗೌಡ ಕೊಲೆಗೆ ಕಿರಣ್ ಸುಫಾರಿ ನೀಡಿದ್ದ ಗುಸು ಗುಸು ಕೇಳಿ ಬಂದಿತ್ತು. ಇದನ್ನು ಆಪ್ತರು ಚರಣ್ ಕಿವಿಗೆ ಮುಟ್ಟಿಸಿ, ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಚರಣ್ ಮಾತ್ರ, ಕಿರಣ್ ನನ್ನ ಸ್ನೇಹಿತ, ನಾನೇ ಕರೆದು ಮಾತನಾಡುತ್ತೇನೆ. ನಮ್ಮ ಸ್ನೇಹ ಚೆನ್ನಾಗಿದೆ. ನಮ್ಮ ನಡುವೆ ಇತರರು ಸಂಧಾನ ಬೇಕಿಲ್ಲ. ಅವನು ಹಾಗೆಲ್ಲ ಮಾಡಲ್ಲ ಎಂದಿದ್ದರಂತೆ.
ಈಗ ಅವರ ನಿರ್ಲಕ್ಷ್ಯವೇ ಅವರ ಹತ್ಯೆಗೆ ಕಾರಣ ಎಂದು ಆಪ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೊಲೆ ಮಾಡಿದ್ದ ಕಿರಣ್ ಮತ್ತು ಆಕಾಶ್‌ಗೆ ಚರಣ್ ಪತ್ನಿ ಗೋಳಾಟ ನೋಡಿ ಪಾಪ ಅನ್ನಿಸಿತ್ತಂತೆ. ಅದೇ ಕಾರಣಕ್ಕೆ ಇಬ್ಬರು ಧರ್ಮಸ್ಥಳಕ್ಕೆ ಹೋಗಿದ್ದರಂತೆ. ಧರ್ಮಸ್ಥಳದಲ್ಲೇ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದರು.
ನ.13 ರಂದು ಯಲಹಂಕ ನ್ಯೂಟೌನ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ನಡೆದಿತ್ತು. ಈ ಸಂಬಂಧ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಚರಣ್ ಮತ್ತು ಆತನ ಪತ್ನಿ ಆಫೀಸ್ ಬಳಿ ಬಂದಾಗ ಬೈಕ್‌ನಲ್ಲಿ ಬಂದ ಇಬ್ಬರು, ಪತ್ನಿ ಮುಂದೆಯೇ ಚರಣ್ ಮೇಲೆ ಅಟ್ಯಾಕ್ ಮಾಡಿ ಮನೋಸೋ ಇಚ್ಚೇ ಕೊಚ್ಚಿ ಎಸ್ಕೇಪ್ ಆಗಿದ್ದರು.
Laxmi News 24×7