Breaking News

ಹೊಸ ದಾಖಲೆ ಬರೆದ ‘ಕಂಬಳ ವೀರ ಶ್ರೀನಿವಾಸ ಗೌಡ’ : ಏನದು ಗೊತ್ತಾ.?

Spread the love

ಮಂಗಳೂರು : ಈಗಾಗಲೇ ಉಸೇನ್ ಬೋಲ್ಟ್ ಓಡಿದಂತ ಮಾದರಿಯಲ್ಲಿಯೇ, ಕಂಬಳ ಅಂಗಳದಲ್ಲಿ ಓದಿ, ಕಂಬಳ ವೀರನೆಂದೇ ಖ್ಯಾತಿಯಾಗಿರುವಂತ, ಶ್ರೀನಿವಾಸ ಗೌಡ, ಇಂದು ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಅದೇನೆಂದ್ರೇ.. 8.96 ಸೆಕೆಂಡ್ ನಲ್ಲಿ 100 ಮೀಟರ್ ಕಂಬಳ ಕೆರೆಯಲ್ಲಿ ಓಡುವ ಮೂಲಕ, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ.

ಇಂದು ಬೆಳ್ತಂಗಡಿ ತಾಲೂಕಿನ ವೇಣೂರು-ಪೆರ್ಮುಡದಲ್ಲಿ ಸೂರ್ಯ-ಚಂದ್ರ ಜೋಡುಕೆರೆ ಕಂಬಳ ನಡೆಯಿತು. ಇಂತಹ ಕಂಬಳದಲ್ಲಿ ಭಾಗವಹಿಸಿದಂತ ಶ್ರೀನಿವಾಸಗೌಡ, 125 ಮೀಟರ್ ಉದ್ದದ ಕೆರೆಯನ್ನು 11.21 ಸೆಕೆಂಡ್ ನಲ್ಲಿ ಕ್ರಮೀಸಿದ್ದರೇ, 100 ಮೀಟರ್ ಕಂಬಳ ಕೆರೆಯನ್ನು 8.96 ಸೆಕೆಂಡ್ ಸಮಯದಲ್ಲಿ ಮುಗಿಸುವ ಮೂಲಕ, ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿದಿದ್ದಾರೆ.

ಅಂದಹಾಗೇ, ಕಳೆದ ವರ್ಷ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 100 ಮೀಟರ್ ಕಂಬಳ ಕೆರೆಯನ್ನು 9.55 ಸೆಕೆಂಡ್ ನಲ್ಲಿ ಕ್ರಮಿಸಿ ಕಂಬಳದ ಉಸೇನ್ ಬೋಲ್ಟ್ ಎಂಬುದಾಗಿ ಹೆಸರಾಗಿದ್ದರು. ಇವರ ದಾಖಲೆಯನ್ನು ವೇಣೂರು ಕಂಬಳದಲ್ಲಿ ಬಜಗೋಳಿ ನಿಶಾಂತ ಶೆಟ್ಟಿ 100 ಮೀಟರ್ ಕಂಬಳ ಅಂಗಳವನ್ನು 9.52 ಸೆಕೆಂಡ್ ನಲ್ಲಿ ಕ್ರಮಿಸಿ ಮುರಿದಿದ್ದರು. ಬೈಂದೂರು ವಿಶ್ವನಾಥ ದೇವಾಡಿಗ ಈ ವರ್ಷ ನಡೆದಂತ ಐಕಳ ಕಂಬಳದಲ್ಲಿ 100 ಮೀಟರ್ ಅನ್ನು 9.15 ಸೆಕೆಂಟ್ ನಲ್ಲಿ ಕ್ರಮಿಸಿ, ಹೊಸ ದಾಖಲೆ ಬೆರೆದಿದ್ದರು. ಇದೀಗ ಈ ಎಲ್ಲಾ ದಾಖಲೆಗಳನ್ನು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮುರಿದು, ಹೊಸ ದಾಖಲೆಯನ್ನೇ ಕಂಬಳ ಓಟದಲ್ಲಿ ಬರೆದಿದ್ದಾರೆ


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ