Breaking News

ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿಯ ದೇವಸ್ಥಾನಕ್ಕೆ ನಿನ್ನೆ ಗಣ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮಹಾಮಂಗಳಾರತಿಯನ್ನು ಮಾಡಲಾಗುತ್ತಿತ್ತು.

Spread the love

ಮಂಡ್ಯ ಜಿಲ್ಲೆಯ ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನದ ಸೆಕ್ಯುರಿಟಿ ಗಾರ್ಡ್ ಮಹೇಂದ್ರ ಅವರ ಮೇಲೆ ಕಿಡಿಗೇಡಿಗಳಿಂದ ಮಾರಣಾಂತಿಕ ಹಲ್ಲೆ…ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು.

ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿರುವ ಪೋಲಿಸರು

ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿಯ ದೇವಸ್ಥಾನಕ್ಕೆ ನಿನ್ನೆ ಗಣ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮಹಾಮಂಗಳಾರತಿಯನ್ನು ಮಾಡಲಾಗುತ್ತಿತ್ತು.

ಆಗ ಏಕಾಏಕಿ ದೇವಸ್ಥಾನಕ್ಕೆ ತನ್ನ ಸಂಗಡಿಗರ ಗುಂಪಿನೊಂದಿಗೆ ಒಳ ನುಗ್ಗಿದ ತಮ್ಮಯ್ಯ, ರವೀಶ ಮತ್ತು ಸೋಮ ಗಣ್ಯರ ಎದುರಿನಲ್ಲಿಯೇ ನಿನಗೆ ಬಾಗಿಲು ತೆರೆಯಲು ಅನುಮತಿ ಕೊಟ್ಟವರು ಯಾರು? ನಿನ್ನದು ಅತಿಯಾಯ್ತು, ನಿನ್ನನ್ನು ಕೆಲಸಕ್ಕೆ ಬರದಂತೆ ಮಾಡ್ತೀವಿ.

ಎಂದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಮತ್ತೆ ದಾಸೋಹ ಭವನದೊಳಕ್ಕೆ ನುಗ್ಗಿ ಸೆಕ್ಯುರಿಟಿ ಗಾರ್ಡ್ ಗೆ ಹಲ್ಲೆಮಾಡಿ ಗೂಂಡಾಗಿರಿ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ನಂತರ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಕುಮಾರ್ ದೂರವಾಣಿ ಕರೆ ಮಾಡಿ ಮಹೇಂದ್ರ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಹಲ್ಲೆಗೊಳಗಾಗಿರುವ ಸೆಕ್ಯುರಿಟಿ ಗಾರ್ಡ್ ಮಹೇಂದ್ರ ತಮಗೆ ರಕ್ಷಣೆ ನೀಡಿ ತಮ್ಮ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಾಂತರ ಠಾಣೆ ಪೋಲಿಸರಿಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ