Breaking News

ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುವಂತೆ ನೋಡಿಕೊಳ್ಳಬೇಕು:ಸಚಿವ ರಮೇಶ ಜಾರಕಿಹೊಳಿ

Spread the love

ಬೆಳಗಾವಿ:  ಒಂದೆಡೆ ಮಾರಕ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆದರೆ ಮತ್ತೊಂದೆಡೆ ಬೇಸಿಗೆಯಿಂದ ಪ್ರಾಣಿ, ಪಕ್ಷಿಗಳು ಆಹಾರ ಸಿಗದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾರಕ‌ ಕೊರೊನಾ ಸೋಂಕು ಎಲ್ಲೆಡೆ ಭೀತಿ‌ ಹುಟ್ಟಿಸುತ್ತಿದೆ. ಬೇಸಿಗೆಯ ಬಿಸಿಲ ಬೇಗೆ ಮತ್ತು ಲಾಕ್ ಡೌನ್ ಪರಿಣಾಮಗಳಿಂದ ಬೆಕ್ಕುಗಳು, ನಾಯಿಗಳು, ಇತರ ಪಶುಗಳು ಹಾಗೂ ಪಕ್ಷಿಗಳು ನೀರು ಮತ್ತು ಆಹಾರ ಸಿಗದೇ ತತ್ತರಿಸುತ್ತಿವೆ. ನಗರಗಳಲ್ಲಿ ಇದರ ಪರಿಣಾಮ ಇನ್ನೂ ಗಂಭೀರವಾಗಿದೆ. ಹಾಗಾಗಿ, ಬೀದಿ ಬದಿಯಲ್ಲಿರುವ ದನ‌‌, ಆಕಳುಗಳಿಗೆ, ನಾಯಿಗಳಿಗೆ ಮತ್ತು ಪಕ್ಷಿಗಳಿಗೆ ನೀರು, ಆಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ