Home / ಜಿಲ್ಲೆ / ಬೆಳಗಾವಿ / ಕೊರೊನಾ ವಿಪತ್ತು ಪರಿಹಾರ ನಿಧಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಒಂದು ಲಕ್ಷ ರೂ. ದೇಣಿಗೆ

ಕೊರೊನಾ ವಿಪತ್ತು ಪರಿಹಾರ ನಿಧಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಒಂದು ಲಕ್ಷ ರೂ. ದೇಣಿಗೆ

Spread the love

ಬೆಳಗಾವಿ – ​ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕೊರೊನಾ ವಿಪತ್ತು ಪರಿಹಾರ ನಿಧಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಆರ್ ಟಿಜಿಎಸ್ ಮೂಲಕ ಹಣವನ್ನು ಅವರು ವರ್ಗಾಯಿಸಿದ್ದಾರೆ.
ಕೊರೋನಾ ವೈರಸ್ ಹರಡುತ್ತಿರುವ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಜನರು ಮನೆಯಲ್ಲೇ ಇದ್ದುಕೊಂಡು ತಮ್ಮ ಸಹಕಾರ ನೀಡಬೇಕು. ನಮಗಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಮಿಲ್ಟ್ರಿ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ನಾವು ಕೃತಜ್ಞರಾಗಿರೋಣ. ಇಂತಹ ಸಂಕಷ್ಟದಿಂದ ಪಾರುಮಾಡುವಂತೆ ಎಲ್ಲರ ಪರವಾಗಿ ನಾನೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಜನರು ತಾಳ್ಮೆಯಿಂದಿದ್ದು ತಮ್ಮ, ತಮ್ಮ ಕುಟುಂಬದ, ಸಮಾಜದ ಆರೋಗ್ಯ ಕಾಪಾಡಿಕೊಳ್ಳಬೇಕು. ಈಗ ಎಚ್ಚರದಿಂದಿದ್ದರೆ ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ಅಭಯ ನೀಡಿದ್ದಾರೆ.
 ಕಾಂಗ್ರೆಸ್ ಮುಖಂಡ​ರಾದ​ ಯುವರಾಜ ಕದಂ, ಅಶೋಕ ತೋರ್ಲೆ, ರಾಜು ಮೇಳೆದ್, ಗಂಗಣ್ಣ ಕಲ್ಲೂರ, ಮನೋಹರ ಬೆಳಗಾಂವಕರ್​ ಮೊದಲಾದವರು ಈ ಸಂದರ್ಭದಲ್ಲಿದ್ದರು

Spread the love

About Laxminews 24x7

Check Also

ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವನ್ನು ವಿಸ್ತರಿಸಿಲ್ಲ

Spread the love ನವದೆಹಲಿ: ಪ್ಯಾನ್‌ ಕಾರ್ಡ್‌-ಆಧಾರ್‌ ಕಾರ್ಡನ್ನು ಲಿಂಕ್‌ ಮಾಡುವ ಪ್ರಕ್ರಿಯೆಯ ಅಂತಿಮ ಗಡುವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ