Breaking News

ಕಣ್ಣೋಟದಲ್ಲೇ ಕೊಲ್ಲುವ ಚುಲುವೆ.. ನಿನಗ್ಯಾಕೆ ಇಷ್ಟು ಅವರಸ? ನೀನ್ಯಾಕೆ ಹೋದೆ ಸೌಂದರ್ಯ.. ನೀನ್ಯಾಕೆ ಹೋದೆ

Spread the love

ಮರೆಯಾದಳ್ಯಾಕೆ ಸೌಂದರ್ಯ?

ಕಣ್ಣೋಟದಲ್ಲೇ ಕೊಲ್ಲುವ ಚುಲುವೆ.. ನಿನಗ್ಯಾಕೆ ಇಷ್ಟು ಅವರಸ? ನೀನ್ಯಾಕೆ ಹೋದೆ ಸೌಂದರ್ಯ.. ನೀನ್ಯಾಕೆ ಹೋದೆ?

ಸ್ಯಾಂಡಲ್‌ವುಡ್‌-ಕಾಲಿವುಡ್‌-ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದ ಸೌಂದರ್ಯ ಸಾವಿನ ಸುದ್ದಿ ಇತ್ತೀಚೆಗಷ್ಟೇ ನಡೆದಂತಿದೆ. ಹೆಸರಿಗೆ ತಕ್ಕ ಸೌಂದರ್ಯ ಹಾಗೂ ನಟನೆಯಿಂದ ಕನ್ನಡಿಗರ ಹೃದಯದಲ್ಲಿ ಸದಾ ನೆನಪಲ್ಲಿ ಉಳಿಯುವ ಆಪ್ತ ನಟಿ. ಅಭಿನಯ, ರೂಪದೊಂದಿಗೆ ಹಿರಿಯ ಕಲಾವಿದರನ್ನೂ ಗೌರವಿಸುತ್ತಿದ್ದ ಗುಣ, ತಮಗೆ ಸೂಕ್ತವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದ ರೀತಿ ಅಭಿಮಾನಿಗಳನ್ನು ಮಾತ್ರವಲ್ಲದೇ ಚಿತ್ರರಂಗದವರನ್ನೂ ಗಮನ ಸೆಳೆಯುತ್ತಿತ್ತು. ಅವರೊಬ್ಬರು ಅಪ್ಪಟ ಚಿನ್ನದಂತಿದ್ದರು.

ಹೆಸರಿಗೆ ತಕ್ಕಂತೆ ‘ಸೌಂದರ್ಯ’ದ ಖನಿಯಂತಿದ್ದಾರೆ ಆಪ್ತಮಿತ್ರ ಚೆಲುವೆ!

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೆಶಕ, ಬರಹಗಾರ ಪರುಚಾರಿ ಗೋಪಾಲಕೃಷ್ಣ ನಟಿ ಸೌಂದರ್ಯ ಬಗ್ಗೆ ಹೃದಯ ತುಂಬಿ ಮಾತನಾಡಿದ್ದಾರೆ. ‘ಸೌಂದರ್ಯ ಅದ್ಭುತ ಕಲಾವಿದೆ. ಆಕೆಯನ್ನು ನೋಡಿದಾಗ ಹೆಂಡತಿಗಿಂತಲೂ ಇಂಥ ಸಹೋದರಿ ಇರಬೇಕಿತ್ತೆಂಬ ಭಾವನೆ ಮೂಡುತ್ತಿತ್ತು. ಒಬ್ಬ ನಟಿಯನ್ನು ನೋಡಿದರೆ ಅಂಥ ಭಾವನೆ ಮೂಡುವುದೇ ವಿಶೇಷ.’ ಎಂದಿದ್ದಾರೆ. ಆಕೆಯ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಬಗ್ಗೆಯೂ ಹೇಳುತ್ತಾರೆ.

‘ಸೌಂದರ್ಯ ವಿಮಾನ ಬಳಸಿ ಹೈದರಾಬಾದ್‌ಗೆ ಬರಬೇಕಿತ್ತು. ಆದರೆ ಆಪ್ತಮಿತ್ರ ಶೂಟಿಂಗ್‌ ಮುಗಿಸಿ ಬರುವಷ್ಟರಲ್ಲಿ ವಿಮಾನ ಮಿಸ್‌ ಆಯ್ತು. ಈ ಕಾರಣಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೈದರಾಬಾದ್‌ಗೆ ಬರುವುದಾಗಿ ನಿರ್ಧರಿಸಿದರು. ಅಕೆಯ ಸಾವಿನ ದಿನ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಆಗೋಲ್ಲ. ಏಕೆಂದರೆ ಆ ದಿನ ನನ್ನ ತಾಯಿ ಆಸೆ ಈಡೇರಿಸಿದ ದಿನ. ಏಪ್ರಿಲ್‌ 17ರಂದು ನನಗೆ ಡಾಕ್ಟರೇಟ್‌ ಸಿಕ್ಕಿತು. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದವಿ ಪಡೆಯುವ ಸಂಭ್ರಮದಲ್ಲಿದ್ದೆ. ಆಗಲೇ ನನಗೆ ಸೌಂದರ್ಯ ಹೆಲಿಕಾಪ್ಟರ್‌ನಲ್ಲಿ ದುರಂತದಲ್ಲಿ ಮೃತಪಟ್ಟರು, ಎಂಬ ಸುದ್ದಿ ಬಂತು. ಸೌಂದರ್ಯ ಆ ವಿಶೇಷ ಕಾಪ್ಟರ್‌ನಲ್ಲಿ ಬಾರದಿದ್ದರೆ ಇಂದು ನಮ್ಮೊಂದಿಗೆ ಇರುತ್ತಿದ್ದರು’ ಎಂದು ದುಃಖ ತೋಡಿಕೊಂಡಿದ್ದಾರೆ.

ಸೌಂದರ್ಯ ನಿಧನರಾದಾಗ 7 ತಿಂಗಳ ಗರ್ಭಿಣಿ?

‘ದ್ವೀಪ’, ‘ಆಪ್ತಮಿತ್ರ’ ‘ಸಿಪಾಯಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಸೌಂದರ್ಯ, ಚಿತ್ರರಂಗಕ್ಕೆ ಪ್ರವೇಶಿಸಿದ ಕೆಲವೇ ಸಮಯದಲ್ಲಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. ಅದ್ಭುತ ಸೌಂದರ್ಯದೊಂದಿಗೆ, ಮನೋಜ್ಞ ಅಭಿನಯದಿಂದ ಚಿತ್ರರಂಗದಲ್ಲಿ ಅವರು ಬೇಗ ಬೆಳೆಯಲು ಸಹಕಾರಿಯಾಯಿತು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ