Home / Uncategorized / ಧಾನ್ಯಗಳ ಕಿಟ್‍ಗಳನ್ನು ಬುಧವಾರದಂದು ರಾಜಾಪೂರ, ದಂಡಾಪೂರ, ದುರದುಂಡಿ, ಗಣೇಶವಾಡಿ, ಬಡಿಗವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.

ಧಾನ್ಯಗಳ ಕಿಟ್‍ಗಳನ್ನು ಬುಧವಾರದಂದು ರಾಜಾಪೂರ, ದಂಡಾಪೂರ, ದುರದುಂಡಿ, ಗಣೇಶವಾಡಿ, ಬಡಿಗವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.

Spread the love

ಘಟಪ್ರಭಾ: ತುಕ್ಕಾನಟ್ಟಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡಮಾಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಬುಧವಾರದಂದು ರಾಜಾಪೂರ, ದಂಡಾಪೂರ, ದುರದುಂಡಿ, ಗಣೇಶವಾಡಿ, ಬಡಿಗವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬಸವಂತ ಕಮತಿ ಅವರು, ಕೊರೋನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅನುಭವಿಸುತ್ತಿದ್ದೇವೆ. ಇದರಿಂದ ನಮಗೆಲ್ಲಾ ದಿನನಿತ್ಯದ ಗೃಹ ಬಳಕೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಜನರ ಸಮಸ್ಯೆಗಳನ್ನು ಅರಿತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅರಭಾಂವಿ ಕ್ಷೇತ್ರದಲ್ಲಿರುವ ಪ್ರತಿ ಮನೆ-ಮನೆಗಳಿಗೆ ದಿನ ಬಳಕೆಯ ದಿನಸಿ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಇದು ನಮ್ಮೆಲ್ಲರ ಸೌಭಾಗ್ಯವೆಂದು ಹೇಳಬೇಕಾಗಿದೆ, ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಯ ಕಷ್ಟದಲ್ಲಿ ಶಾಸಕರು ಭಾಗಿಯಾಗಿ ಸಂಕಷ್ಟದ ಸಮಸ್ಯೆಗಳನ್ನು ಪರಿಹರಿಸುವ ದಿಟ್ಟ ನಾಯಕರಾಗಿದ್ದಾರೆ. ಆಹಾರ ಪದಾರ್ಥಗಳನ್ನು ಪ್ರತಿ ಕುಟುಂಬದ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿರುವುದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.


ಟೀಂ ಎನ್‍ಎಸ್‍ಎಫ್‍ನ ದಾಸಪ್ಪ ನಾಯಿಕ, ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಗೋಕಾಕ ಟಿಎಪಿಸಿಎಮ್‍ಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಘಯೋಮನೀಬ ಸಹಕಾರಿ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಪ್ರಭಾ ಶುಗರ್ಸ್ ನಿರ್ದೇಶಕರಾದ ಶಿವಲಿಂಗ ಪೂಜೇರಿ, ಲಕ್ಷ್ಮಣ ಗಣಪ್ಪಗೋಳ, ಮಾಳಪ್ಪ ಜಾಗನೂರ, ಎಪಿಎಮ್‍ಸಿ ನಿರ್ದೇಶಕ ಶ್ರೀಪತಿ ಗಣೇಶವಾಡಿ, ಮುಖಂಡರಾದ ಪರಸಪ್ಪ ಕುಡ್ಡಗೋಳ, ಭೀಮಶಿ ಹುಕ್ಕೇರಿ, ಭೀಮಪ್ಪ ಅಂತರಗಟ್ಟಿ, ಮಹಾದೇವ ತುಕ್ಕಾನಟ್ಟಿ, ಬೈರು ಯಕ್ಕುಂಡಿ, ಶಂಕರ ಕಮತಿ, ಹೊನ್ನಜ್ಜಾ ಕೋಳಿ, ಮಹಾದೇವ ತಾಂಬಟಿ, ನಾಗಪ್ಪ ಹೊರಟ್ಟಿ, ಬೀರಪ್ಪ ಸಿಮಕ್ಕನವರ, ಶಿವು ಕುಡ್ಡೆಮ್ಮಿ, ಸಿದ್ದಪ್ಪ ಚೂಡಪ್ಪಗೋಳ, ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ