Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಸನ್ 2021-22 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಸನ್ 2021-22 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

Spread the love

 

 

ಸತೀಶ ಶುಗರ್ಸ ಲಿಮಿಟೆಡ್, ಹುಣಶ್ಯಾಳ ಪಿ.ಜಿ

ಸತೀಶ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಸನ್ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ದಿನಾಂಕ 15.10.2021 ರಂದು ಜಿಲ್ಲೆಯ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಸಂಸ್ಥೆಯ ಚೇರಮನ್‍ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿಗಳಾದ ಶ್ರೀ.ಪ್ರದೀಪಕುಮಾರ ಇಂಡಿ ಇವರು ಇದೇ ಸಮಯದಲ್ಲಿ ಮಾತನಾಡುತ್ತಾ ಜಿಲ್ಲೆಯ ಸತೀಶ ಶುಗರ್ಸ ಕಾರ್ಖಾನೆಯ ರೈತ ಬಾಂಧವರು ಪ್ರಸಕ್ತ ಹಂಗಾಮಿನ ಮೊದಲ ದಿನವೇ ಸುಮಾರು 1253 ಕಬ್ಬು ತುಂಬಿದ ವಾಹನಗಳು ಅಂದಾಜು ಸುಮಾರು 22000 ಮೆ.ಟನ್ ಕಬ್ಬನ್ನು ಪೂರೈಸುವುದರೊಂದಿಗೆ ಸಕ್ಕರೆ ಕಾರ್ಖಾನೆಗಳ ಇತಿಹಾಸದಲ್ಲಿಯೇ ದಾಖಲೆಯನ್ನು ನಿರ್ಮಿಸಿದ್ದಾರೆ. ಪ್ರಥಮ ದಿನವೇ ಉತ್ಸಾಹದಿಂದ ಸತೀಶ ಶುಗರ್ಸ ಕಾರ್ಖಾನೆಯ ಮೇಲೆ ಭರವಸೆ ಇಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿದ ರೈತರಿಗೆ ಒಳ್ಳೆಯ ದರವನ್ನು ನೀಡುವುದಾಗಿ ಭರವಸೆ ನೀಡಿರುತ್ತಾರೆ. ಅದರಂತೆ, ಕಬ್ಬು ಪೂರೈಸಿದ ರೈತರಿಗೆ ವಿಳಂಬ ಮಾಡದೆ ಕಬ್ಬಿನ ಬಿಲ್ಲನ್ನು ಪಾವತಿ ಮಾಡುತ್ತಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಕಬ್ಬು ಪೂರೈಸಿದ ರೈತರ ಬ್ಯಾಂಕ ಖಾತೆಗಳಿಗೆ ಸಮಯಾನುಸಾರ ಕಬ್ಬಿನ ಬಿಲ್ಲನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತ ಬಾಂಧವರು, ಸಾರಿಗೆ ಮತ್ತು ತೋಡ್ನಿದಾರರು ಈ ಹಿಂದೆ ಹೆಚ್ಚು ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿದಂತೆ ಪ್ರಸಕ್ತ ಹಂಗಾಮಿನಲ್ಲಿಯೂ ತಾವು ಬೆಳೆದ ಉತ್ತಮ ಗುಣಮಟ್ಟದ ಒಳ್ಳೆಯ ರಿಕವರಿ ಇರುವ ತಳಿಯ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರಾದ ಶ್ರೀ. ಬಿ.ಎಚ.ರೆಡ್ಡಿ, ಅನಂತರಾವ ನಾಯಿಕ, ಚಂದ್ರಪ್ಪಾ ಮೆಳವಂಕಿ, ವೆಂಕನಗೌಡ ಪಾಟಿಲ, ಪರಸಪ್ಪ ವಗ್ಗ, ಮಹಾದೇವಪ್ಪ ಪತ್ತಾರ, ಹಣಮಂತ ಬಾಬಣ್ಣವರ, ರಾಮಣ್ಣಾ ಕುರುಬಚನ್ನಾಳ, ಅಶೋಕ ಮಳಲಿ, ಕಲ್ಲಿನಾಥ ಪೂಜೇರಿ, ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಉಪಾಧ್ಯಕ್ಷರುಗಳಾದ ಶ್ರೀ. ಎಲ್. ಆರ್. ಕಾರಗಿ, ಶ್ರೀ. ಪಿ.ಡಿ. ಹಿರೇಮಠ ಹಾಗೂ ಉಪಾಧ್ಯಕ್ಷರುಗಳಾದ ಶ್ರೀ. ವಿ. ಎಮ್. ತಳವಾರ, ಶ್ರೀ. ಎ. ಎಸ್. ರಾಣಾ, ಶ್ರೀ. ಡಿ. ಆರ್. ಪವಾರ ಮತ್ತು ಕಾರ್ಖಾನೆಯ ಕಾರ್ಮಿಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ