ಬೆಳಗಾವಿ: ಹಲವು ದಶಕಗಳ ಬೇಡಿಕೆಯಾಗಿರುವ ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾಗ೯ ನಿಮಾ೯ಣಕ್ಕಾಗಿ ನೈರುತ್ಯ ರೇಲ್ವೆ ವಲಯವು ಡಿಪಿಆರ್ ಸಿದ್ಧಪಡಿಸಿದ್ದು, ಒಟ್ಟು ರೂ.988 ಕೋಟಿ ವೆಚ್ಚವನ್ನು ಅಂದಾಜಿಸಿ ಕೇಂದ್ರ ಕಚೇರಿಗೆ ಕಳಿಸಿಕೊಟ್ಟಿದೆ.
ಯೋಜನಾ ವರದಿಯನ್ನು ರೇಲ್ವೆ ಮಂಡಳಿಗೆ ಕಳಿಸಿದ ಬಳಿಕ, ಮಂಡಳಿಯು ಅದರ ಪರಿಶೀಲನೆ ನಡೆಸಿ ಕಡತವನ್ನು ರೇಲ್ವೆ ಇಲಾಖೆಗೆ ರವಾನಿಸಿದೆ. 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ
ರೈಲು ಮಾಗ೯ ನಿಮಾ೯ಣಕ್ಕೆ ಸಂಬಂಧಿಸಿದಂತೆ ಕನಾ೯ಟಕ ರೇಲ್ವೆ ಮೂಲಸೌಕಯ೯ ಅಭಿವೃದ್ಧಿ ಕಂಪೆನೆ (ಕೆ-ರೈಡ್) ಕಳೆದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸ್ಥಳ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ 90 ಕಿ.ಮೀ.ನ ಈ ಯೋಜನೆಗೆ, ಸೇತುವೆಗಳೂ ಸೇರಿದಂತೆ ರೂ.988 ಕೋಟಿ ವೆಚ್ಚವನ್ನು ಅಂದಾಜು ಮಾಡಿದೆ. ರೈಲು ಧಾರವಾಡದಿಂದ ಕ್ಯಾರಕೊಪ್ಪ, ಕಿತ್ತೂರ, ಹಿರೆಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಕೆ.ಕೆ.ಕೊಪ್ಪ, ಯಳ್ಳೂರ ಮಾಗ೯ವಾಗಿ ಬೆಳಗಾವಿ ತಲುಪಲಿದೆ.
ರೇಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಮುತುವಜಿ೯ ವಹಿಸಿದ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಸಮೀಕ್ಷೆ ಕಾಯ೯ ನಡೆದು, ವಿಸ್ತ್ರತ ವರದಿ ಸಲ್ಲಿಕೆಯಾಗಿದೆ. ಅನುಮೋದನೆಗೆ ಬೇಕಾದ ಪ್ರಕ್ರಿಯೆಗಳನ್ನೂ ಪೂರೈಸಲಾಗಿದ್ದು, ಕಡಿಮೆ ಅವಧಿಯಲ್ಲಿ ಅಂದರೆ ತಮ್ಮದೇ ಅವಧಿಯಲ್ಲಿ ಯೋಜನೆಯನ್ನು ಪೂಣ೯ಗೊಳಿಸುವ ಮಹದಾಸೆಯನ್ನು ಸುರೇಶ ಅಂಗಡಿ ಹೊಂದಿದ್ದಾರೆ ಎನ್ನಲಾಗಿದೆ.
ಯೋಜನೆಯ ಮಾಗ೯ದಲ್ಲಿ 11 ರೇಲ್ವೆ ನಿಲ್ದಾಣಗಳನ್ನು ನಿಮಿ೯ಸಲು ಸ್ಥಳ ಗುರುತಿಸಲಾಗಿದೆ. ಮಾಗ೯ಮಧ್ಯೆ ಒಟ್ಟು 140 ಬ್ರಿಡ್ಜ್ ಗಳು ನಿಮಾ೯ಣವಾಗಲಿದ್ದು, ಅವುಗಳಲ್ಲಿ 15 ಮೇಲ್ಸೇತುವೆಗಳು ಸೇರಿಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.