Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ದಲಿತ ಯುವಕನ ಕೊಲೆ ಖಂಡಿಸಿ ಸಚಿವ ರಮೇಶ ಜಾರಕಿಹೊಳಿಯವರಿಗೆ ಮನವಿ

ದಲಿತ ಯುವಕನ ಕೊಲೆ ಖಂಡಿಸಿ ಸಚಿವ ರಮೇಶ ಜಾರಕಿಹೊಳಿಯವರಿಗೆ ಮನವಿ

Spread the love

ಗೋಕಾಕ : ಗೋಕಾಕ ನಗರದಲ್ಲಿ 06/05/2020 ರಂದು ದಲಿತ ಯುವಕ ಸಿದ್ದು ಕನಮಡ್ಡಿ ಯವರನ್ನು
ಮಾರಕಾಸ್ತ್ರ ದಿಂದ ಕೊಲೆ ಮಾಡಿ ಕೊಲೆಗಾರರು ಪರಾರಿಯಾಗಿದ್ದರು.
ಕೊಲೆಯಾದ ವ್ಯಕ್ತಿಯು ಸಾಯುವಾಗ ಅವನಿಗೆ ಜೀವ ಬೆದರಿಕೆ ಹಾಕಿರೋ ವ್ಯಕ್ತಿಗಳ ಹೆಸರು ಹೇಳಿ ಸಾವನ್ನಪಿದನ್ನು ಅದರಿಂದ ಕೊಲೆಗಾರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.


ಇಲ್ಲದಿದ್ದರೆ ದಲಿತ ಸಂಘಟನೆಗಳು ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ
ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು ಮತ್ತು ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟಿದ್ದಾರೆ. ಕರ್ನಾಟಕ ಜೈಭೀಮ ಸಂಘರ್ಷ ಸಮಿತಿ ಅಂಬೇಡ್ಕರ ವಾಣಿ ಮೂಲಕ ಜಲ ಸಂಪನ್ಮೂಲ ಸಚಿವರಾದ ಶ್ರೀ ರಮೇಶ ಜಾರಕಿಹೊಳಿಯವರಿಗೆ ಮನವಿಯನ್ನು ನೀಡಿದರು ಈ ಸಂದರ್ಭದಲ್ಲಿ ಸಿದ್ದು ಕನಮಡ್ಡಿಯವರ ಕುಟುಂಬಸ್ಥರು, ಗೋವಿಂದ ಕಳ್ಳಿಮನಿ, ಬಸವರಾಜ ಮೆಸ್ತ್ರಿ, ಸುರೇಶ ಕಂಕಣವಾಡಿ, ಮನೋಹರ ಮೇಗೇರಿ, ರವಿ ಕಡಕೋಳ, ಹಣಮಂತ ಸೊಂಡಿ ಬೀರಪ್ಪ ಮೈಲಣ್ಣವರ, ಸತೀಶ ಹರಿಜನ, ವೀರಭದ್ರ ಮೈಲಣ್ಣವರ, ಶ್ರೀಕಾಂತ ತಳವಾರ, ಅಜಿತ್ ಹರಿಜನ, ಬಸವರಾಜ ಆರೆಣ್ಣವರ, ತಳದಪ್ಪ ಅಮ್ಮಣಗಿ, ಲೋಹಿತ್ ಭಾಗಣ್ಣವರ, ಓಂಕಾರ್ ಬಂಡಿವಡ್ಡರ ಉಪಸ್ಥಿತರು ಇದರು.


Spread the love

About Laxminews 24x7

Check Also

ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ: ಕಾರಜೋಳ ಎಚ್ಚರಿಕೆ

Spread the loveಬೆಳಗಾವಿ(ಡಿ.06): ಬೆಳಗಾವಿಯಲ್ಲಿ (Belagavi) ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ