ಗೋಕಾಕ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶೆಟ್ಟೆವ್ವನ ತೋಟದ ಹತ್ತಿರ ನದಿಯಲ್ಲಿ ಅನುಮಾನಸ್ಪದವಾಗಿ ಶವ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ
ಬೆಳಗಾವಿ ಎಸ್, ಪಿ, ಮತ್ತು ಹೆಚ್ಚುವರಿ ಎಸ್,ಪಿ,ಹಾಗೂ ಗೋಕಾಕ ವಲಯ ಡಿ,ವಾಯ್,ಎಸ್,ಪಿ,ಇವರ ಮಾರ್ಗದರ್ಶನದಲ್ಲಿ ಗೋಕಾಕ ಪೋಲಿಸ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಕೊನೆಗೂ ಕೊಲೆಯ ರಹಸ್ಯ ಬೇದಿಸಿ ಆರೋಪಿಯನ್ನು ಬಂದಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಸಂಶಯಾಸ್ಪದ ಮೇಲೆ ಮೆಳವಂಕಿ ಗ್ರಾಮದಲ್ಲಿನ ವಿರೂಪಾಕ್ಷಿ ಚಂದ್ರಯ್ಯಾ ಮಠಪತಿಯನ್ನು ಪೋಲಿಸರು ವಿಚಾರಿಸಿದಾಗ
ಕೊಲೆಯಾದ ಅಪ್ಪಣ್ಣ ಸಂಬಾಜಿ ಸನದಿಯ ಪತ್ನಿಯ ಜೊತೆಗಿನ ಅನೈತಿಕ ಸಂಬಂದಕ್ಕೆ ಅಡ್ಡಿಯಾಗುತಿದ್ದಾನೆಂದು ತಿಳಿದು ಯಲ್ಲವ್ವ ಅಪ್ಪಣ್ಣ ಸನದಿ ಸೇರಿ ಕೊಲೆ ಮಾಡುವು ಯೊಜನೆ ರೂಪಿಸಿ ಬಿಲಕುಂದಿ ಗ್ರಾಮದಲ್ಲಿನ ಒಂದು ತೋಟದಲ್ಲಿ ಅವನ ಮರ್ಮಾಂಗಕ್ಕೆ ಒದ್ದು ಕುತ್ತಿಗೆ ಹಿಚುಕಿ ಕೊಲೆ ಮಾಡಿ ಅಪ್ಪಣ್ಣ ಸಂಬಾಜಿ ಸನದಿ ಇತನ ಶವವನ್ನು
ಗೋಕಾಕ ಹತ್ತಿರ ಇರುವ ಶೆಟ್ಟೆವ್ವನ ತೊಟದ ಹತ್ತಿರ ಘಟಪ್ರಭಾ ನದಿಯ ನೀರಲ್ಲಿ ಎಸೆದು ಸಾಕ್ಷಿ ನಾಶ ಪಡಿಸಿದ್ದು ತಿಳಿದು ಬಂದಿದ್ದರಿಂದ ಅವರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಕ್ಕೆ ಗೋಕಾಕ ಪೋಲಿಸ ಇಲಾಖೆಯನ್ನು ಬೆಳಗಾವಿ ಪೋಲಿಸ್ ಅಧಿಕ್ಷಕರು ಪ್ರಶಂಸಿಸಿದ್ದಾರೆ.