Breaking News

ನಮ್ಮನ್ನ ಡ್ರಗ್ಸ್​ ವಿಚಾರವಾಗಿ ಸಿ ಸಿ ಬಿ ಕರೆದಿಲ್ಲ ಸೌಂದರ್ಯ‌ ಜಗದೀಶ್ ಪತ್ನಿ ರೇಖಾ ಸ್ಪೆಷನೆ

Spread the love

ಬೆಂಗಳೂರು: ನಮ್ಮನ್ನ ಡ್ರಗ್ಸ್​ ವಿಚಾರವಾಗಿ ಕರೆದಿಲ್ಲ ಅಂತಾ ನಿರ್ಮಾಪಕ ಸೌಂದರ್ಯ‌ ಜಗದೀಶ್ ಪತ್ನಿ ರೇಖಾ ಹೇಳಿದ್ದಾರೆ.

ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೌಂದರ್ಯ ಜಗದೀಶ್ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಎನ್ನಲಾಗಿತ್ತು. ಅದರಂತೆ ಇಂದು ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸೌಂದರ್ಯ ದಂಪತಿ ವಿಚಾರಣೆಗೆ ಹಾಜರಾಗಿ ವಾಪಸ್ ಆಗಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ಸೌಂದರ್ಯ ಜದಗೀಶ್ ದಂಪತಿ.. ನಮ್ಮನ್ನ ಡ್ರಗ್ಸ್ ವಿಚಾರವಾಗಿ ಕರೆದಿಲ್ಲ. ನಾವು ರಾಮ್ ಲೀಲಾ ಸಿನಿಮಾ ನಿರ್ಮಾಣ ಮಾಡಿದ್ವಿ. ಅದರಲ್ಲಿ ಸಂಜನಾ ಆಯಕ್ಟ್ ಮಾಡಿದ್ದರು. ರಾಮ್ ಲೀಲ್ ಸಿನಿಮಾ ಬಗ್ಗೆ ಮಾಹಿತಿ ಕೇಳಿದ್ರು. ಆ ವಿಚಾರವಾಗಿ ಚಿತ್ರದಲ್ಲಿ ಸಂಜನಾಗೆ ಎಷ್ಟು ಹಣ ಕೊಟ್ಟಿದ್ರಿ?ಚೆಕ್​​ನಲ್ಲಿ ಪೇಮೆಂಟ್ ಕೊಟ್ಟಿದ್ರಾ? ಅಥವಾ ಕ್ಯಾಶ್ ನೀಡಿದ್ರಾ? ಎಂದು ಕೇಳಿದ್ರು. ಚಿತ್ರದ ಬಗ್ಗೆ ಮಾತ್ರ ಮಾಹಿತಿ ಕೇಳಿದ್ರು, ನಾವೂ ಕೊಟ್ಟಿದ್ದೇವೆ. ಡ್ರಗ್ಸ್​ ಲಿಂಕ್ ಕೇಸ್​ಗೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತಾ ಹೇಳಿದರು


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ