Breaking News

ಬಿ ಎಸ್ ವೈ ಬಿಜೆಪಿಯಲ್ಲಿಯೇ ಇದ್ದವರು. ಅವರ ಮಾತನ್ನೇ ಕೇಳಿಲ್ಲ, ಇನ್ನು ಜನತಾದಳದಿಂದ ಬಿಜೆಪಿಗೆ ಹೋದ ಬೊಮ್ಮಾಯಿ ಮಾತು ಕೇಳ್ತಾರಾ?

Spread the love

ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ಏನೂ ಮಾಡಲು ಸಾಧ್ಯವಾಗಿಲ್ಲ. ಇನ್ನು ಹೊಸ ಸಿಎಂ ಬಸವರಾಜ ಬೊಮ್ಮಾಯಿ ಏನು ಮಾಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವ ವಿಚಾರವಾಗಿ ಮಾತನಾಡುತ್ತಾ, ಕೇಂದ್ರದಿಂದ ಜಿ ಎಸ್ ಟಿ ಪಾಲು ತರಲಾಗಿಲ್ಲ. ಜನರಿಗೆ ಈವರೆಗೆ ಪರಿಹಾರದ ಹಣವೂ ಸಿಕ್ಕಿಲ್ಲ. ಮಾಜಿ ಸಿಎಂ ಯಡಿಯೂರಪ್ಪನವರಿಂದಲೇ ಏನೂ ಸಾಧ್ಯವಾಗಿಲ್ಲ ಇನ್ನು ಬೊಮ್ಮಾಯಿಯಿಂದ ಆಗುತ್ತಾ? ಎಂದು ಪ್ರಶ್ನಿಸಿದರು.

 

ಬಿ ಎಸ್ ವೈ ಬಿಜೆಪಿಯಲ್ಲಿಯೇ ಇದ್ದವರು. ಅವರ ಮಾತನ್ನೇ ಕೇಳಿಲ್ಲ, ಇನ್ನು ಜನತಾದಳದಿಂದ ಬಿಜೆಪಿಗೆ ಹೋದ ಬೊಮ್ಮಾಯಿ ಮಾತು ಕೇಳ್ತಾರಾ? ಎಂದು ವ್ಯಂಗ್ಯವಾಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ