Breaking News

ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

Spread the love

ಬೆಂಗಳೂರು: ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕನ ವಿರುದ್ಧ ಸುಳ್ಳು ಕೇಸ್​ ದಾಖಲಿಸಿದ್ದ ಮಹಿಳಾ ಇನ್​​ಸ್ಪೆಕ್ಟರ್​, ಈ ಪ್ರಕರಣದ ಆಂತರಿಕ ತನಿಖೆ ನಡೆಸುತ್ತಿದ್ದ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್​ಗೆ ಯತ್ನಿಸಿದ್ದ ಸಬ್​ ಇನ್​ಸ್ಪೆಕ್ಟರ್​ ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಅಮಾನತುಗೊಳಿಸಿದ್ದಾರೆ.

ಆರ್​ಎಂಸಿ ಯಾರ್ಡ್ ಪೊಲೀಸ್ ಇನ್​ಸ್ಪೆಕ್ಟರ್​ ಪಾರ್ವತಮ್ಮ ಹಾಗೂ ಸಬ್​ ಇನ್​ಸ್ಪೆಕ್ಟರ್​ ಅಂಜಿನಪ್ಪ ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇನ್​ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್‌ಐ ಅಂಜಿನಪ್ಪ ಮತ್ತು ಇನ್ನೊಬ್ಬ ಪೊಲೀಸ್ ಬೀದಿಬದಿ ವ್ಯಾಪಾರಿ ಬಳಿ ಮಾಮೂಲಿ ಕೇಳಿದ್ದು, ಆತ ಕೊಡಲು ನಿರಾಕರಿಸಿದ್ದಕ್ಕೆ ಬಲವಂತವಾಗಿ ಗಾಂಜಾ ಬೆರೆಸಿದ ಸಿಗರೇಟ್​ ಸೇದುವಂತೆ ಮಾಡಿ ಗಾಂಜಾ ಸೇವನೆ ಎಂದು ಕೇಸು ದಾಖಲಿಸಿದ್ದರು. ಬಳಿಕ ಇದರಿಂದ ನೊಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ.

ಈ ಕೇಸ್ ಸಂಬಂಧ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದ್ದು, ಆಂತರಿಕ ತನಿಖೆ ವೇಳೆ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್​ ಮಾಡಲು ಹೋಗಿ ಎಸ್​ಐ ಅಂಜಿನಪ್ಪ ಸಿಕ್ಕಿಬಿದ್ದಿದ್ದ. ಈ ಮೂವರ ವಿರುದ್ಧ ನಡೆದ ಆಂತರಿಕ ತನಿಖೆಯಲ್ಲಿ ಆರೋಪ ದೃಢಪಟ್ಟು ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ