Breaking News
Home / ರಾಜಕೀಯ / ಧುಮುಕುತ್ತಿರುವ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಯುವಕರ ಹುಚ್ಚು ಸಾಹಸ

ಧುಮುಕುತ್ತಿರುವ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಯುವಕರ ಹುಚ್ಚು ಸಾಹಸ

Spread the love

ಕಲಬುರಗಿ: ಮುಂಗಾರಿನ ಅಬ್ಬರ ಮಳೆಯಿಂದ ಭೋರ್ಗರೆಯುತ್ತಿದ್ದ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಣೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಎತ್ತಿಪೋತ ಜಲಪಾತ ಬಳಿ ನಡೆದಿದೆ.

ಸತತವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಗೆ ಎತ್ತಿಪೋತ ಜಲಪಾತ ಧುಮುಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ಹೀಗೆ ಮೈದುಂಬಿ ಹರಿಯುತ್ತಿರುವ ಜಲಪಾತ ನೋಡಲು ತೆರಳಿದ್ದ ಯುವಕರಿಬ್ಬರು ಸೆಲ್ಫಿ ತೆಗೆಯುವ ದುಸ್ಸಾಹಸಕ್ಕೆ ಮುಂದಾಗಿ ನೀರಿಗಿಳಿದಿದ್ದರು. ಆದರೆ ಜಲಪಾತದ ರಭಸಕ್ಕೆ ನೀರಿನಿಂದ ಹೊರಬರಲಾಗದೆ ಸಂಕಷ್ಟ ಎದುರಿಸಿದ್ದರು.

ನೀರಿನಲ್ಲಿ ಸಿಲುಕಿ ಗಂಟೆಗಟ್ಟಲ್ಲೇ ಜೀವ ಕೈಯಲ್ಲಿಡಿಕೊಂಡು ರಕ್ಷಣೆಗೆಗಾಗಿ ಮೊರೆ ಇಟ್ಟಿದ್ದರು. ಇದನ್ನು ಕಂಡು ಸ್ಥಳದಲ್ಲಿದ್ದ ಇತರೇ ಪ್ರವಾಸಿಗರು ಯುವಕರ ನೆರವಿಗೆ ಬಂದು ಇಬ್ಬರನ್ನು ನಡೆಯಬಹುದಾದ ದುರ್ಘಟನೆಯಿಂದ ಬಚಾವ್ ಮಾಡಿದ್ದಾರೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರ ರಾಜ್ಯಕ್ಕೆ 2.30 ಲಕ್ಷ ಸಾವಿರ ಕೋಟಿ ರೂ. ನೀಡಿದೆ;ಜೋಶಿ

Spread the loveಕರ್ನಾಟಕದಲ್ಲಿ ಬರಗಾಲ ಆವರಿಸಿದ್ದು, ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಕೂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ