Home / new delhi / ಪೆಟ್ರೋಲ್ ಬೆಲೆ ಏರಿಕೆ; ಸಂಸತ್​​ಗೆ ಸೈಕಲ್​​​ ತುಳಿದು ಬಂದು ಡಿ.ಕೆ ಸುರೇಶ್​​ ಪ್ರತಿಭಟನೆ

ಪೆಟ್ರೋಲ್ ಬೆಲೆ ಏರಿಕೆ; ಸಂಸತ್​​ಗೆ ಸೈಕಲ್​​​ ತುಳಿದು ಬಂದು ಡಿ.ಕೆ ಸುರೇಶ್​​ ಪ್ರತಿಭಟನೆ

Spread the love

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಇಡೀ ದೇಶಾದ್ಯಂತ ಸೈಕಲ್ ಜಾಥಾ ನಡೆಸುತ್ತಿದೆ. ಇದರ ಭಾಗವಾಗಿ ಇಂದು ಮುಂಗಾರು ಅಧಿವೇಶನ ಸಲುವಾಗಿ ದೆಹಲಿಗೆ ತೆರಳಿರುವ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​​ ಸೈಕಲ್ ಜಾಥಾ ನಡೆಸಿದರು.

ಕಾವೇರಿ ಅಪಾರ್ಟ್​ಮೆಂಟ್​​ನಲ್ಲಿರುವ ನಿವಾಸದಿಂದ ಸಂಸತ್​​ ಭವನದವರೆಗೂ ಸಂಸದ ಡಿ.ಕೆ ಸುರೇಶ್​​​ ನಡೆಸಿದ ಸೈಕಲ್​​​ ಜಾಥದಲ್ಲಿ ಹಲವು ಕಾಂಗ್ರೆಸ್​ ಮುಖಂಡರು ಭಾಗಿಯಾಗಿದ್ದರು. ಈ ಸೈಕಲ್​​​ ಜಾಥದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಯುವ ಕಾಂಗ್ರೆಸ್ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿನಿತ್ಯ ತೈಲ ದರ ಏರಿಕೆ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿದೆ. ಇದನ್ನು ನಿಯಂತ್ರಣ ಮಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತುಕೊಂಡಿದೆ. ಇದರಿಂದ ಸಾಮಾನ್ಯಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡುಗೆ ಅನಿಲ ದರ ಹೆಚ್ಚಳ ಆಗಿದೆ. ಹೀಗಾದರೆ ಜನರು ಹೇಗೆ ಜೀವನ ನಡೆಸುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ