Breaking News
Home / ರಾಜಕೀಯ / ವ್ಯಕ್ತಿಯೊಬ್ಬರ ತಲೆಗೆ ಡಿಕೆಎಸ್ ಬಾರಿಸಿದ ಬೆನ್ನಲ್ಲೇ ವೈರಲ್​ ಆಯ್ತು ಸಿದ್ದರಾಮಯ್ಯ ಫೋಟೋ

ವ್ಯಕ್ತಿಯೊಬ್ಬರ ತಲೆಗೆ ಡಿಕೆಎಸ್ ಬಾರಿಸಿದ ಬೆನ್ನಲ್ಲೇ ವೈರಲ್​ ಆಯ್ತು ಸಿದ್ದರಾಮಯ್ಯ ಫೋಟೋ

Spread the love

ಬೆಂಗಳೂರು: ಕಳೆದ ಎರಡು ದಿನಗಳಿಂದ ಸೋಶಿಯಲ್ ಮಿಡಿಯಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ವ್ಯಕ್ತಿಯೊಬ್ಬರ ತಲೆಗೆ ಹೊಡೆಯುವ ದೃಶ್ಯವೊಂದು ವೈರಲ್ ಆಗುತ್ತಿದೆ.

ಡಿ.ಕೆ ಶಿವಕುಮಾರ್ ಕೈ ಮಾಡಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಸಿದ್ದರಾಮಯ್ಯಯ ಹೆಗಲ ಮೇಲ ಕೈಹಾಕಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋ ಒಂದು ಸಖತ್ ವೈರಲ್ ಆಗಿದೆ.

 

‘ಮುಂದಿನ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​’ ಅನ್ನೋ ಚರ್ಚೆ ಮುನ್ನೆಲೆಯಲ್ಲಿರುವಾಗಲೇ ಈ ಫೋಟೋ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಸಿದ್ದರಾಮಯ್ಯರ ಹೆಗಲ ಮೇಲೆ ಕಾರ್ಯಕರ್ತ ಕೈಹಾಕಿರುವ ಫೋಟೋದಲ್ಲಿ ಸಿದ್ದರಾಮಯ್ಯ ಮತ್ತು ಕಾರ್ಯಕರ್ತರು ಅಂತಾ ಬರೆಯಲಾಗಿದೆ. ವೈರಲ್ ಆಗಿರುವ ಈ ಫೋಟೋ, ಸದ್ಯದ ಪರಿಸ್ಥಿತಿಯಲ್ಲಿ ಡಿಕೆಎಸ್​ಗೆ ಇರಿಸುಮುರಿಸು ಮಾಡೋದ್ರಲ್ಲಿ ಯಾವುದೇ ಡೌಟ್​ ಇಲ್ಲ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ