Breaking News

ವಂಚನೆ ಪ್ರಕರಣ: ಸಲ್ಮಾನ್ ಖಾನ್‌ಗೆ ಪೊಲೀಸರಿಂದ ಸಮನ್ಸ್

Spread the love

ನಟ ಸಲ್ಮಾನ್ ಖಾನ್ ಹಾಗೂ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿ ಒಂಬತ್ತು ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಸಲ್ಮಾನ್ ಖಾನ್ ‘ಬೀಯಿಂಗ್ ಹ್ಯೂಮನ್’ ಹೆಸರಿನ ಎನ್‌ಜಿಒ ನಡೆಸುತ್ತಿದ್ದು, ‘ಬೀಯಿಂಗ್ ಹ್ಯೂಮನ್’ ಹೆಸರಿನ ಬ್ರ್ಯಾಂಡ್‌ ಅಡಿಯಲ್ಲಿ ಉತ್ಪನ್ನಗಳ ಮಾರಾಟ ಸಹ ಮಾಡುತ್ತಿದ್ದಾರೆ.

ಬೀಯಿಂಗ್ ಹ್ಯೂಮನ್ ಕುರಿತಾಗಿಯೇ ಚಂಡೀಗಢದ ಅರುಣ್ ಗುಪ್ತಾ ಎಂಬುವರು, ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ ಸಂಸ್ಥೆಯ ಸಿಇಒ, ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಹಾಗೂ ಇತರ ಕೆಲವು ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರುದಾರ ಅರುಣ್ ಗುಪ್ತಾ ಹೇಳಿರುವಂತೆ, ”ಬೀಯಿಂಗ್ ಹ್ಯೂಮನ್ ಸಂಸ್ಥೆಯ ಕೆಲವು ಸಿಬ್ಬಂದಿ ನನಗೆ ಫ್ರ್ಯಾಂಚೈಸಿ ತೆರೆಯುವಂತೆ ಹೇಳಿದರು. ಅದರಂತೆ ನಾನು ಬಂಡವಾಳ ಹೂಡಿ ಶಾಪ್ ತೆರೆದೆ ದಾಸ್ತಾನಿಗಾಗಿ ಹಣ ಸಹ ಪಾವತಿಸಿದೆ. ಆದರೆ ಯಾವುದೇ ದಾಸ್ತಾನನ್ನು ಬೀಯಿಂಗ್ ಹ್ಯೂಮನ್ ಅವರು ನೀಡದೇ ಮೋಸ ಮಾಡಿದ್ದಾರೆ” ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ