Home / ಜಿಲ್ಲೆ / ಬೆಂಗಳೂರು / ಬಿಗ್​ಬಾಸ್​ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!

ಬಿಗ್​ಬಾಸ್​ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!

Spread the love

ಬೆಂಗಳೂರು: ಕರೊನಾ ಕಾರಣದಿಂದಾಗಿ ಮಧ್ಯಂತರದಲ್ಲೇ ನಿಲ್ಲಿಸಲಾಗಿದ್ದ ಬಿಗ್​ಬಾಸ್ ಇದೀಗ ಮತ್ತೊಮ್ಮೆ ಸೆಕೆಂಡ್​ ಇನ್ನಿಂಗ್ಸ್ ಮೂಲಕ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈಗಾಗಲೇ ಎಲ್ಲ ಸ್ಪರ್ಧಾಳುಗಳು ಮನೆ ತಲುಪಿದ್ದು ಕಲರ್ಸ್​ ಕನ್ನಡ ವಾಹಿನಿ ಅದರ ವಿಟಿಯನ್ನೂ ತೋರಿಸಿದೆ. ಆದರೆ ಒಂದು ವಿಟಿಯಲ್ಲಿ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಬಿಗ್​ಬಾಸ್ ನೋಡಿದಾಗ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಸ್ನೇಹಿತರಂತೆಯೇ ಕಾಣಿಸಿಕೊಂಡಿದ್ದಾರೆ. ಆದರೆ ಸೆಕೆಂಡ್ ಇನ್ನಿಂಗ್ಸ್​ ಸಂಪೂರ್ಣವಾಗಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಮನೆಯೊಳಗೆ ಎಂಟ್ರಿ ಕೊಟ್ಟ ಅವರಿಬ್ಬರು ಕುಸ್ತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಆದರೆ ಇದು ಯಾವ ಕಾರಣಕ್ಕೆ ಎನ್ನುವುದು ಮಾತ್ರ ವೀಕ್ಷಕರಿಗೆ ಕಾಡಲಾರಂಭಿಸಿರುವ ಪ್ರಶ್ನೆಯಾಗಿದೆ.

 

 

ಇಬ್ಬರು ದಿವ್ಯಾಗಳ ಮಧ್ಯೆ ಸ್ನೇಹ ಮುರಿದುಬಿದ್ದಿರುವುದಕ್ಕೆ ಮತ್ತೊಂದು ವಿಟಿ ಸಾಕ್ಷಿಯಾಗಿದೆ. ಮನೆಗೆ ಬಂದ ಮೊದಲನೇ ದಿನವೇ ನಾಮಿನೇಷನ್ ನಡೆದಿದ್ದು ಅದರಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ರನ್ನೇ ನಾಮಿನೇಟ್ ಮಾಡಿದ್ದಾರೆ. ಆಕೆ ನನ್ನ ನಗುವನ್ನು ಫೇಕ್ ನಗು ಎಂದಿದ್ದಾಳೆ ಎನ್ನುವ ಕಾರಣವನ್ನೂ ಕೊಟ್ಟಿದ್ದಾರೆ. ಹಾಗಾದರೆ ಆ ಫೈಟ್ ಕೂಡ ನಿಜವೇ ಇರಬೇಕು ಎನ್ನಲಾರಂಭಿಸಿದ್ದಾರೆ ಬಿಬಿ ಅಭಿಮಾನಿಗಳು. ಇಂದು ಸಂಜೆ 6 ಗಂಟೆಗೆ ಬಿಗ್​ಬಾಸ್ ಮಹಾಸಂಚಿಕೆ ಆರಂಭವಾಗಲಿದ್ದು ಈ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ