Breaking News
Home / ಜಿಲ್ಲೆ / ಬೆಂಗಳೂರು / ಗ್ರಾಮ ಪಂಚಾಯಿತಿ ಸದಸ್ಯನಿಂದಲೇ ಯುವತಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಇವನ ಕಾಮಪುರಾಣ

ಗ್ರಾಮ ಪಂಚಾಯಿತಿ ಸದಸ್ಯನಿಂದಲೇ ಯುವತಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಇವನ ಕಾಮಪುರಾಣ

Spread the love

ಬೆಂಗಳೂರು: ಮಾಡೆಲಿಂಗ್​ ಕೆಲಸದ ಆಮಿಷವೊಡ್ಡಿ ಯುವತಿಯನ್ನ ತನ್ನ ಮನೆಗೆ ಕರೆಸಿಕೊಂಡ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಆಕೆಗೆ ಗನ್​ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಯುವತಿಯ ನಗ್ನ ಫೋಟೋಗಳನ್ನು ತೆಗೆದು ಜಾಲತಾಣದಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬನ್ನೇರುಘಟ್ಟ ಸಮೀಪದ ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷ ಅತ್ಯಾಚಾರ ಆರೋಪಿ. ಈತನಿಗೆ ಫೇಸ್​ಬುಕ್​ನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಯವತಿಯೊಬ್ಬಳ ಪರಿಚಯವಾಗಿತ್ತು. ಆಕೆಗೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಕೆಲಸ ಕೂಡಿಸುವುದಾಗಿ ನಂಬಿಸಿ ಮೊಬೈಲ್​ ನಂಬರ್​ ಪಡೆದಿದ್ದ. ಅಲ್ಲದೆ ತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಅಲ್ಲದೆ ಲಾಕ್​ಡೌನ್​ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್​ ವಿತರಣೆ ಮಾಡುತ್ತಿರುವ ಫೋಟೋಗಳನ್ನೂ ಆಕೆಗೆ ವಾಟ್ಸ್​ಆಯಪ್​ ಮೂಲಕ ಕಳಿಸಿ ತಾನೊಬ್ಬ ಸಭ್ಯಸ್ಥ, ಪರೋಪಕಾರಿ ಎಂದೂ ವಿಶ್ವಾಸ ಗಿಟ್ಟಿಸಿಕೊಂಡಿದ್ದನಂತೆ.

ಕೆಲಸ ಕೊಡಿಸುವೆ, ಮಾತನಾಡಬೇಕಿದೆ ನನ್ನ ಮನೆಗೆ ಬಾ ಎಂದು ತನ್ನ ಚಾಲಕನ ಮೂಲಕ ಓಲಾಕ್ಯಾಬ್ ಬುಕ್ ಮಾಡಿಸಿ ಶಾನಭೋಗನಹಳ್ಳಿಯ ತನ್ನ ಮನೆಗೆ ಯುವತಿಯನ್ನ ಅಹಮದ್ ಪಾಷ ಸೋಮವಾರ ಕರೆಸಿಕೊಂಡಿದ್ದ. ಮನೆಗೆ ಬಂದ ಯುವತಿ ಮೇಲೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದಕ್ಕೆ ವಿರೋಧಿಸಿದ ಯುವತಿಗೆ ಗನ್​ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ, ಆಕೆಯ ನಗ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿಯೂ ಹೆದರಿಸಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡುತ್ತಿದ್ದ ಅಹಮದ್ ಪಾಷ, ಇದೇ ರೀತಿ ಸುಮಾರು 10 ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ